ರಾಷ್ಟ್ರೀಯ

ಪಶ್ಚಿಮ ಬಂಗಾಳದಲ್ಲಿ ತಾಳ ತಪ್ಪುತ್ತಿರುವ ಕಾಂಗ್ರೆಸ್-ಕಮ್ಯುನಿಸ್ಟ್ ಮೈತ್ರಿ

Pinterest LinkedIn Tumblr

CPI-congress-2ಕೋಲ್ಕತಾ: ಪಶ್ಚಿಮ ಬಂಗಾಳದಲ್ಲಿ ಎರಡನೇ ಬಾರಿಗೆ ತೃಣಮೂಲ ಕಾಂಗ್ರೆಸ್ ಪಕ್ಷ ಅಧಿಕಾರ ಪಡೆದ ನಂತರ ಕಾಂಗ್ರೆಸ್-ಕಮ್ಯುನಿಸ್ಟರ ಮೈತ್ರಿ ಹದಗೆಡತೊಡಗಿದೆ.

ವಿಧಾನಸಭಾ ಚುನಾವಣಾ ನಡೆದ ನಂತರ ರಾಜ್ಯದ ಹಲವು ಪಂಚಾಯತ್ ಗಳಲ್ಲಿ ತೃಣಮೂಲ ಕಾಂಗ್ರೆಸ್ ಪಕ್ಷ ವಿರೋಧ ಪಕ್ಷದಿಂದ ಅಧಿಕಾರ ಕಸಿಯುವಲ್ಲಿ ಯಶಸ್ವಿಯಾಗಿದೆ. ಕೌನ್ಸಿಲರ್ ಗಳು ಹಾಗೂ ಪಂಚಾಯತ್ ಸದಸ್ಯರು ಕಾಂಗ್ರೆಸ್ ಅಥವಾ ಸಿಪಿಐ(ಎಂ) ಪಕ್ಷದಿಂದ ತೃಣಮೂಲ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಯಾಗುತ್ತಿದ್ದಾರೆ.

ಪಂಚಾಯತ್ ಸದಸ್ಯರು ಮಾತ್ರವಲ್ಲದೇ, ಇತ್ತೀಚೆಗಷ್ಟೇ ಕಾಂಗ್ರೆಸ್ ನಿಂದ ಓರ್ವ ಶಾಸಕ, ಸಿಪಿಐ(ಎಂ) ಪಕ್ಷದ ಓರ್ವ ಶಾಸಕ ಸಹ ತೃಣಮೂಲ ಕಾಂಗ್ರೆಸ್ ಗೆ ಸೇರ್ಪಡೆಯಾಗಿದ್ದು, ಪಶ್ಚಿಮ ಬಂಗಾಳ ವಿಧಾನಸಭಾಹಿಯಲ್ಲೀಗ ವಿರೋಧ ಪಕ್ಷದ ಸದಸ್ಯರ ಬಲ 76 ರಿಂದ 74 ಕ್ಕೆ ಇಳಿದಿದೆ.

Comments are closed.