ಅಂತರಾಷ್ಟ್ರೀಯ

ಪಾಕ್ ಆಕ್ರಮಿತ ಗಿಲ್ಗಿಟ್​ನಲ್ಲಿ ಪಾಕ್ ವಿರುದ್ಧ ಭುಗಿಲೆದ್ದ ಪ್ರತಿಭಟನೆ

Pinterest LinkedIn Tumblr

32

ನವದೆಹಲಿ: ಪಾಕಿಸ್ತಾನಿ ಸೇನೆಯ ದಮನವನ್ನು ವಿರೋಧಿಸಿ ಪಾಕ್ ಆಕ್ರಮಿತಿ ಗಿಲ್ಗಿಟ್ -ಬಾಲ್ಟಿಸ್ತಾನದಲ್ಲಿ ವ್ಯಾಪಕ ಪ್ರತಿಭಟನೆ ಭುಗಿಲೆದ್ದಿದೆ. ಪಾಕಿಸ್ತಾನದ ವಿರುದ್ಧ ನಡೆಯುತ್ತಿರುವ ವ್ಯಾಪಕ ಪ್ರತಿಭಟನೆಯ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ಭಾರಿ ಸದ್ದು ಮಾಡುತ್ತಿದೆ.

ಸಾಮಾಜಿಕ ಕಾರ್ಯಕರ್ತ ಬಾಬಾ ಜನ್ ಬಿಡುಗಡೆಗೆ ಒತ್ತಾಯಿಸಿ ಪಾಕ್ ಆಕ್ರಮಿತ ಗಿಲ್ಗಿಟ್-ಬಾಲ್ಟಿಸ್ತಾನದಲ್ಲಿ ವ್ಯಾಪಕ ಪ್ರತಿಭಟನೆಗಳು ನಡೆಯುತ್ತಿವೆ.

ಗಿಲ್ಗಿಟ್ ನೆಲ ಬಿಟ್ಟು ತೊಲಗಿ ಎಂಬುದಾಗಿ ಪಾಕಿಸ್ತಾನಿ ಸೇನೆಗಳನ್ನು ಒತ್ತಾಯಿಸುತ್ತಿರುವುದಕ್ಕಾಗಿ ಪಾಕಿಸ್ತಾನಿ ಸೇನೆ ವ್ಯಾಪಕ ದಮನ ನಡೆಸುತ್ತಿದ್ದು, 500ಕ್ಕೂ ಹೆಚ್ಚು ಯುವಕರನ್ನು ಸೆರೆಮನೆಗೆ ದಬ್ಬಿದೆ ಎಂದು ಉದ್ರಿಕ್ತ ಪ್ರತಿಭಟನಕಾರರು ಆಪಾದಿಸಿದ್ದಾರೆ.

Comments are closed.