ಭೂಪಾಲ್: ಆಟೋದಲ್ಲಿ ತೆರಳುತ್ತಿದ್ದ ವೇಳೆ ಆಟೋ ಡ್ರೈವರ್ ಯುವತಿಯ ಮೇಲೆ ಅಸಭ್ಯವಾಗಿ ವರ್ತಿಸಿ, ಕಿರುಕುಳ ನೀಡಲು ಯತ್ನಿಸಿದಾಗ ಚಲಿಸುತ್ತಿರುವ ಆಟೋದಿಂದ ಹಾರಿದ ಯುವತಿ ಇದೀಗ ಆಸ್ಪತ್ರೆಗೆ ದಾಖಲಾಗಿದ್ದಾಳೆ. ಈ ಘಟನೆ ಮಧ್ಯಪ್ರದೇಶ ಭೋಪಾಲ ಬಳಿ ನಡೆದಿದೆ.
ಹೋಶಂಗ್ ಬಾದ್ ನಿವಾಸಿಯಾಗಿರೋ ಯುವತಿ ಭೋಪಾಲನಲ್ಲಿ ಕೆಲಸಕ್ಕಾಗಿ ಸಂದರ್ಶನ ನೀಡಲು ಬಂದಿದ್ದರು. ಸಂದರ್ಶನ ದಿನ ಬೋಪಾಲಗೆ ಬಂದ ಯುವತಿ ಆಟೋ ಹತ್ತಿದ್ದಳು.
ಈ ವೇಳೆ ಯುವತಿಯ ಮೇಲೆ ಆಟೋ ಡ್ರೈವರ್ ಅಸಭ್ಯದಿಂದ ವರ್ತಿಸಲು ಪ್ರಯತ್ನಿಸಿದ್ದು, ಈ ವೇಳೆ ಆಟೋ ಚಾಲಕ ಪರಾರಿಯಾಗಿದ್ದು, ಸದ್ಯ ಯುವತಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಪೊಲೀಸ್‌ರು ಆರೋಪಿಗಾಗಿ ಹುಡುಕಾಟ ನಡೆಸಿದ್ದಾರೆ.
Comments are closed.