ಕರ್ನಾಟಕ

ಕೋಟಿ ಕೊಟ್ಟರೂ ವಿಧಾನಸೌಧಕ್ಕೆ ಕಾಲಿಡೆನು: ವಾಟಾಳ್ ಶಪಥ

Pinterest LinkedIn Tumblr

vatalಬೆಂಗಳೂರು, ಆ.7 -ಕೋಟಿ ಕೊಟ್ಟರೂ ನಾವು ವಿಧಾನಸೌಧಕ್ಕೆ ನಾವು ಕಾಲಿಡುವುದಿಲ್ಲ ಎಂದು ಕನ್ನಡ ಚಳವಳಿ ವಾಟಾಳ್ ಪಕ್ಷದ ಅಧ್ಯಕ್ಷ ವಾಟಾಳ್ ನಾಗರಾಜ್ ಶಪಥ ಮಾಡಿದ್ದಾರೆ.

ಇಂದು ಮಹದಾಯಿ ನದಿ ನೀರು ಕುರಿತಂತೆ ನ್ಯಾಯಾಧೀಕರಣ ನೀಡಿರುವ ತೀರ್ಪಿನಿಂದ ರಾಜ್ಯದಲ್ಲಿ ಉಲ್ಬಣಿಸಿರುವ ಪರಿಸ್ಥಿತಿ ತಿಳಿ ಗೊಳಿಸಲು ಕೈಗೊಳ್ಳಬೇಕಾದ ಕ್ರಮಗಳ ಬಗ್ಗೆ ಮುಖ್ಯಮಂತ್ರಿ ಸರ್ವಪಕ್ಷಗಳ ಸಭೆಯಲ್ಲಿ ಪಾಲ್ಗೊಂಡಿದ್ದ ವೇಳೆ, ತಮಗೆ ಒಳ ಹೋಗಲು ಅವಕಾಶ ನೀಡದ ಪೊಲೀಸರ ವಿರುದ್ಧ ಅಸಮಾಧಾನದಿಂದ ಹೊರನಡೆದರು.

ಅಲ್ಲಿಂದ ಹೊರಬಂದು ತಾವು ಇಂದು ಮಹದಾಯಿ ವಿಚಾರವಾಗಿ ಮುಖ್ಯಮಂತ್ರಿಗಳನ್ನು ಭೇಟಿಮಾಡಲು ತೆರಳಿದ್ದೆವು. ಆದರೆ ನಮಗೆ ಪೊಲೀಸರು ಭೇಟಿ ನಿರಾಕರಿಸಿದ್ದಾರೆ. ಇನ್ನು ಮುಂದೆ ಕೋಟಿ ಕೊಟ್ಟರೂ ನಾವು ವಿಧಾನಸೌಧಕ್ಕೆ ಕಾಲಿಡುವುದಿಲ್ಲ ಎಂದು ಶಪಥ ಮಾಡಿ ಅಲ್ಲಿಂದ ಹೊರನಡೆದರು.

Comments are closed.