ರಾಷ್ಟ್ರೀಯ

ಗೋಹತ್ಯೆ ಶಂಕೆ, ಮುಜಾಫರ್ ನಗರದಲ್ಲಿ ಮುಸ್ಲಿಂ ಕುಟುಂಬದ ಮನೆ ಮೇಲೆ ದಾಳಿ: ಉದ್ವಿಗ್ನ ಪರಿಸ್ಥಿತಿ

Pinterest LinkedIn Tumblr

UP-2ಮುಜಾಫರ್ ನಗರ: ಗೋಹತ್ಯೆ ನಡೆದಿದೆ ಎಂಬ ಶಂಕೆಯಿಂದ ಗುಂಪೊಂದು ಮನೆಯೊಂದರ ಮೇಲೆ ದಾಳಿ ನಡೆಸಿದ ಪರಿಣಾಮ ಉತ್ತರ ಪ್ರದೇಶದ ಮುಜಾಫರ್ ನಗರದ ಕಾಂಡ್ಲಾ ಗ್ರಾಮದಲ್ಲಿ ನಡೆದಿದೆ.

ಜೀಶಾನ್ ಖುರೇಷಿ ನಿವಾಸದಲ್ಲಿ ಗೋಹತ್ಯೆ ಮಾಡಲಾಗಿದೆ ಎಂಬ ಶಂಕೆಯಿಂದ ಸ್ಥಳೀಯರು ಅವರ ಮನೆ ಮೇಲೆ ದಾಳಿ ನಡೆಸಿ ಮನೆಗೆ ಬೆಂಕಿ ಹಚ್ಚುವ ಪ್ರಯತ್ನ ಮಾಡಿದ್ದು, ಗ್ರಾಮದಲ್ಲಿ ಉದ್ವಿಗ್ನ ವಾತಾವರಣ ನಿರ್ಮಾಣವಾಗಿದೆ. ಪ್ರಕರಣದ ಸಂಬಂಧ ಒಂದೇ ಕುಟುಂಬದ ನಾಲ್ವರ ವಿರುದ್ಧ ಚಾರ್ಜಶೀಟ್ ದಾಖಲಾಗಿದೆ.

ಸ್ಥಳೀಯ ಗುಂಪು ದಾಳಿ ನಡೆಸಿ ಜೀಶಾನ್ ಖುರೇಷಿ ನಿವಾಸಾಕ್ಕೆ ಬೆಂಕಿ ಹಚ್ಚಿದ ಬೆನ್ನಲ್ಲೇ ಸ್ಥಳಕ್ಕೆ ಆಗಮಿಸಿದ ಪೊಲೀಸರು, ಗಲಭೆ ನಿಯಂತ್ರಿಸಿದ್ದಾರೆ. ದಾಳಿಗೊಳಗಾದ ಮುಸ್ಲಿಂ ಕುಟುಂಬ ಸ್ಥಳದಿಂದ ಪರಾರಿಯಾಗಿದೆ. ಗೋಹತ್ಯೆ ನಡೆಸಿರುವ ಶಂಕೆ ವ್ಯಕ್ತವಾಗಿರುವ ಹಿನ್ನೆಲೆಯಲ್ಲಿ ಖುರೇಷಿ ಕುಟುಂಬದ ವಿರುದ್ಧ ಗೋಹತ್ಯೆ ಮಾಡಿರುವ ಆರೋಪದಡಿ ಪ್ರಕರಣ ದಾಖಲಿಸಲಾಗಿದೆ. ಉದ್ವಿಗ್ನ ವಾತಾವರಣ ನಿರ್ಮಾಣವಾಗಿರುವ ಹಿನ್ನೆಲೆಯಲ್ಲಿ ಮುನ್ನೆಚ್ಚರಿಕಾ ಕ್ರಮವಾಗಿ ಹೆಚ್ಚಿನ ಪೊಲಿಸ್ ಪಡೆಯನ್ನು ನಿಯೋಜಿಸಲಾಗಿದೆ.

Comments are closed.