ರಾಷ್ಟ್ರೀಯ

ಅಸಹಿಷ್ಣುತೆ ವಿವಾದ; ಅಮೀರ್ ಖಾನ್ ಹೇಳಿಕೆ ಅಹಂಕಾರದಿಂದ ಕೂಡಿದ್ದು: ಪರಿಕ್ಕರ್

Pinterest LinkedIn Tumblr

parikkar_amirಪುಣೆ (ಪಿಟಿಐ): ಭಾರತದಲ್ಲಿ ಅಸಹಿಷ್ಣುತೆ ಇದೆ ಎಂಬ ನಟನ ಹೇಳಿಕೆ ಅವರ ಅಹಂಕಾರವನ್ನು ತೋರಿಸುತ್ತದೆ ಎಂದು ಕೇಂದ್ರ ರಕ್ಷಣಾ ಸಚಿವ ಮನೋಹರ್ ಪರಿಕ್ಕರ್ ಹೇಳಿದ್ದಾರೆ.

ಒಬ್ಬ ನಟ ತಾನು ತನ್ನ ಪತ್ನಿಯೊಂದಿಗೆ ದೇಶ ತೊರೆಯುತ್ತೇನೆ ಎಂದು ಹೇಳಿದ್ದರು. ಅದೊಂದು ಅಹಂಕಾರದಿಂದ ಕೂಡಿದ ಹೇಳಿಕೆಯಾಗಿತ್ತು. ನಾನು ಬಡವನಾಗಿದ್ದು, ನನ್ನ ಮನೆ ಚಿಕ್ಕದಾಗಿದ್ದರೂ, ನಾನು ನನ್ನ ಮನೆಯನ್ನು ಪ್ರೀತಿಸುತ್ತೇನೆ. ಆ ಮನೆಯನ್ನು ದೊಡ್ಡ ಬಂಗಲೆಯನ್ನಾಗಿ ಮಾಡುವ ಕನಸು ಕಾಣುತ್ತೇನೆ ಎಂದು ಬಾಲಿವುಡ್ ನಟ ಅಮೀರ್ ಖಾನ್ ಅವರ ಹೆಸರನ್ನು ಉಲ್ಲೇಖಿಸದೆ ಶನಿವಾರ ನಡೆದ ಕಾರ್ಯಕ್ರಮವೊಂದರಲ್ಲಿ ಪರಿಕ್ಕರ್, ಖಾನ್ ವಿರುದ್ಧ ಟೀಕಾಪ್ರಹಾರ ಮಾಡಿದ್ದಾರೆ.

ಪತ್ರಕರ್ತ, ಲೇಖಕ ನಿತಿನ್ ಗೋಖಲೆ ಸಿಯಾಚಿನ್ ಬಗ್ಗೆ ಬರೆದ ಪುಸ್ತಕದ ಮರಾಠಿ ಅವತರಣಿಕೆಯ ಬಿಡುಗಡೆ ಕಾರ್ಯಕ್ರಮದಲ್ಲಿ ಮಾತನಾಡಿದ ಪರಿಕ್ಕರ್, ಅಮೀರ್ ಖಾನ್‍ರ ಅಸಹಿಷ್ಣುತೆ ಹೇಳಿಕೆ ವಿರುದ್ಧ ಜನರು ಆಕ್ರೋಶ ವ್ಯಕ್ತ ಪಡಿಸಿದ್ದರು. ಅಮೀರ್ ರಾಯಭಾರಿಯಾಗಿದ್ದ ಕಂಪನಿಯ ಮೊಬೈಲ್ ಆ್ಯಪ್ ನ್ನು ಅನ್ ಇನ್‍ಸ್ಟಾಲ್ ಮಾಡುವ ಮೂಲಕ ಜನರು ಆಕ್ರೋಶ ವ್ಯಕ್ತಪಡಿಸಿದಾಗ, ಆತ ನಟಿಸಿದ ಜಾಹೀರಾತುಗಳನ್ನು ಕೂಡಾ ಪ್ರಸ್ತುತ ಕಂಪನಿಗೆ ಹಿಂತೆಗೆಯಬೇಕಾಗಿ ಬಂದಿತ್ತು ಎಂದಿದ್ದಾರೆ.

ಏನಿದು ವಿವಾದ?: 2015 ನವೆಂಬರ್‍ನಲ್ಲಿ ಸಂದರ್ಶನವೊಂದರಲ್ಲಿ ಮಾತನಾಡಿದ ಅಮೀರ್ ಖಾನ್ ‘ದೇಶದಲ್ಲಿ ಕಳೆದ ಆರೇಳು ತಿಂಗಳುಗಳಿಂದ ನಡೆಯುತ್ತಿರುವ ಘಟನೆಗಳು ಅಭದ್ರತೆ ಮತ್ತು ಭೀತಿಯ ವಾತಾವರಣ ಉಂಟುಮಾಡಿದೆ. ಅಸಹಿಷ್ಣುತೆ ಹೆಚ್ಚುತ್ತಿರುವ ಬಗ್ಗೆ ಪತ್ನಿ ಕಿರಣ್‌ ರಾವ್‌ ಆತಂಕಕ್ಕೆ ಒಳಗಾಗಿದ್ದಳು. ಕುಟುಂಬ ಸಮೇತ ದೇಶ ಬಿಟ್ಟು ಹೋಗುವ ಬಗ್ಗೆ ಪ್ರಸ್ತಾಪಿಸಿದ್ದಳು’ ಎಂದು ಹೇಳಿದ್ದು ವಿವಾದಕ್ಕೀಡಾಗಿತ್ತು.

Comments are closed.