ಈ ಮಗುವಿಗೆ ಕೇವಲ ನಾಲ್ಕು ವರ್ಷ. ಆದರೆ ನೋಡಲು 60-70 ವರ್ಷ ವೃದ್ಧನಂತೆ ಕಾಣಿಸುತ್ತದೆ. ಬಾಂಗ್ಲಾದೇಶದ ಈ ಮಗುವಿನ ಹೆಸರು ಬೇಝಿದ್. ಮುಖದಲ್ಲಿ ವೃದ್ಧಾಪ್ಯವಿರುವುದರಿಂದ ಆತನ ಬಾಲ್ಯವೇ ಕಳೆದು ಹೋದಂತಿದೆ.
ಆತನ ವಯಸ್ಸಿನ ಮಕ್ಕಳು ಜತೆ ಆಡಲು ಭಯಪಡುತ್ತಾರೆ. ಈ ಕಾಯಿಲೆಯ ಹೆಸರು ಪ್ರೊಗೆರಿಯಾ. ಬಾಲಕನಿಗೆ ಇತರ ಆರೋಗ್ಯ ಸಮಸ್ಯೆಗಳೂ ಇವೆ. ಸೀಳು ಹಲ್ಲುಗಳು, ಕೀಲು ನೋವು ಹಾಗೂ ಮೂತ್ರ ಸಂಬಂಧಿ ಕಾಯಿಲೆಗಳಿಂದಲೂ ಮಗು ನರಳುತ್ತಿದೆ.
ಮಗು ಹುಟ್ಟಿದಾಗ ನೋಡಲು ಭಯವಾಗುತಿತ್ತು. ಆತ ಕೇವಲ ಮೂಳೆ ಹಾಗೂ ಮಾಂಸದ ಮುದ್ದೆಯಂತೆ ಕಾಣುತ್ತಿದ್ದ, ಎಂದು ಆಕೆಯ ತಾಯಿ ತೃಪ್ತಿ ಖಾತುನ್ ಹೇಳುತ್ತಾರೆ.
ನೋಡಲು ಆ ರೀತಿ ಇದ್ದರೂ, ಮಗುವಿನ ಬೌದ್ದಿಕ ಬೆಳವಣಿಗೆ ಸಹಜವಾಗಿಯೇ ಇದೆ. ಹಠಮಾರಿಯಾಗಿರುವ ಈತ ಬಹಳ ಚಾಣಾಕ್ಷನೂ, ಒಳ್ಳೆಯ ಮಾತುಗಾರನೂ ಆಗಿದ್ದಾನೆ, ಎಂದು ಖಾತೂನ್ ಹೇಳುತ್ತಾರೆ.
ಈವರೆಗೆ ಆತನ ಚಿಕಿತ್ಸೆಗಾಗಿ ಸುಮಾರು 5200 ಡಾಲರ್’ಗಳನ್ನು ಖರ್ಚು ಮಾಡಲಾಗಿದೆ ಆದರೆ ಯಾವುದೇ ಪ್ರಯೋಜನವಾಗಿಲ್ಲ. ಆತನ ಆರೋಗ್ಯವು ಕೂಡಾ ದಿನದಿಂದ ದಿನಕ್ಕೆ ಹದಗೆಡುತ್ತಿದೆ.
Comments are closed.