ನವದೆಹಲಿ: ರಾಷ್ಟ್ರಪತಿ ಪ್ರಣಬ್ ಮುಖರ್ಜಿ ನಾಲ್ಕು ವರ್ಷಗಳ ಅಧಿಕಾರವಧಿಯನ್ನು ಪೂರ್ಣಗೊಳಿಸಿರುವುದಕ್ಕೆ ಸಂತಸ ವ್ಯಕ್ತಪಡಿಸಿದ ಪ್ರಧಾನಿ ಮೋದಿ, ಮುಖರ್ಜಿಯವರು ಹಲವಾರು ವಿಷಯಗಳ ಬಗ್ಗೆ ನನಗೆ ಮಾರ್ಗದರ್ಶನ ನೀಡಿದ್ದಾರೆ ಎಂದು ಹೇಳಿದ್ದಾರೆ.
ಕಳೆದ ಎರಡು ವರ್ಷಗಳ ಹಿಂದೆ ನಾನು ಪ್ರಧಾನಿ ಹುದ್ದೆ ಅಲಂಕರಿಸಿದಾಗ ದೆಹಲಿಗೆ ನಾನು ಹೊಸಬನಾಗಿದ್ದೆ. ಅಂತಹ ಸಂದರ್ಭದ್ಲಲಿ ರಾಷ್ಟ್ರಪತಿ ಪ್ರಣಬ್ ಮುಖರ್ಜಿ ನನಗೆ ಪೋಷಕರಾಗಿ, ಮೇಲ್ವಿಚಾರಕರಾಗಿ ನನ್ನ ಕೈಹಿಡಿದು ನಡೆಸಿದ್ದಾರೆ. ಅವರೊಂದು ನಡೆದಾಡುವ ವಿಶ್ವವಿದ್ಯಾಲಯವಿದ್ದಂತೆ ಎಂದು ತಿಳಿಸಿದ್ದಾರೆ.
ರಾಷ್ಟ್ರಪತಿ ಭವನದಲ್ಲಿ ಮ್ಯೂಸಿಯಂ ಭವನವನ್ನು ಉದ್ಘಾಟಿಸಿದ ಪ್ರಧಾನಿ ಮೋದಿ, ಮುಖರ್ಜಿಯವರ ಆತ್ಮಿಯತೆ ಅವರ ಜ್ಞಾನ ಭಂಡಾರ ನನಗೆ ವಿಸ್ಮಯ ಮೂಡಿಸಿದೆ. ಅವರಿಂದ ಪ್ರಭಾವಿತರಾದವರಲ್ಲಿ ನಾನು ಒಬ್ಬನು ಎಂದು ಹೇಳಿದ್ದಾರೆ.
ಮುಖರ್ಜಿಯವರು ರಾಷ್ಟ್ರಪತಿ ಭವನವನ್ನು ಸಾಮಾನ್ಯ ವ್ಯಕ್ತಿ ಮತ್ತು ದೇಶದ ಉನ್ನತ ಸ್ಥಾನದಲ್ಲಿರುವ ವ್ಯಕ್ತಿಯೊಂದಿಗೆ ನೇರವಾಗಿ ಸಂಪರ್ಕಿಸುವ ತಾಣವಾಗಿಸಿದ್ದಾರೆ ಎಂದು ಮೋದಿ ಸಂತಸ ವ್ಯಕ್ತಪಡಿಸಿದ್ದಾರೆ.
Comments are closed.