ರಾಷ್ಟ್ರೀಯ

ದೇವಸ್ಥಾನದ ಪ್ರವೇಶ ನಿರ್ಭಂದಿಸಿದರೆ ಮತಾಂತರ..!!: ದಲಿತ ಕುಟುಂಬದವರ ಬೆದರಿಕೆ

Pinterest LinkedIn Tumblr

250-Dalitಕರೂರು: ಜಾತಿಯ ಹೆಸರಿನಲ್ಲಿ ದೇವಾಲಕ್ಕೆ ಪ್ರವೇಶಿಸದಂತೆ ನಿರ್ಭಂದ ಹೇರಿರುವುದನ್ನು ವಿರೋಧಿಸಿ ದಲಿತ ಕುಟುಂಬಗಳು ಮತಾಂತರಗೊಳ್ಳಲು ಸಿದ್ಧರಾಗಿರುವುದಾಗಿ ವರದಿಯಾಗಿದೆ. ಜಾತಿ ನಿಂದನೆಯ ಮೇರೆಗೆ ಊರಿನ ದೇವಸ್ಥಾನಕ್ಕೆ ಪ್ರವೇಶ ಮಾಡದಂತೆ ಸ್ಥಳೀಯ ಮೇಲ್ವರ್ಗದವರು ನಿರ್ಭಂದಿಸಿದ್ದು ವೇದರಣ್ಯಂ ಮತ್ತು ಕರೂರಿನ ಸುಮಾರು 250 ದಲಿತ ಕುಟುಂಬಗಳು ಇಸ್ಲಾಂ ಧರ್ಮಕ್ಕೆ ಮತಾಂತರ ಹೊಂದುವುದಾಗಿ ಬೆದರಿಕೆ ಹಾಕಿದ್ದಾರೆ.

ವೇದಾರಣ್ಯಂನ ಹತ್ತಿರ ಕಳ್ಳಿಮೇಡು ಎಂಬಲ್ಲಿ ಸುಮಾರು 200 ದಲಿತ ಕುಟುಂಬಗಳು, ತಮಗೆ ದೇವಸ್ಥಾನದ ಹಬ್ಬಗಳನ್ನು ಆಚರಿಸುವ ಹಕ್ಕನ್ನು ನಿರಾಕರಿಸಲಾಗಿದೆ ಎಂದು ಆರೋಪಿಸಿದ್ದಾರೆ. ಇನ್ನು ಕರೂರಿನ ಮಲೈಕೊವಿಲೂರಿನ ಹತ್ತಿರ ನಾಗಂಪಲ್ಲಿ ಎಂಬಲ್ಲಿ 35ಕ್ಕೂ ಹೆಚ್ಚು ದಲಿತ ಕುಟುಂಬಗಳು ತಮ್ಮ ಮನೆ ಹತ್ತಿರವಿರುವ ಮಹಾಶಕ್ತಿ ಅಮ್ಮನ್ ದೇವಸ್ಥಾನಕ್ಕೆ ಪ್ರವೇಶಿಸ ನಿರಾಕರಿಸಲಾಗಿದೆ. ಈ ದೇವಾಲಯವನ್ನು ಕಟ್ಟಲು ನಾವು ಕೂಡ ಸಹಾಯ ಮಾಡಿದ್ದೇವೆ ಎಂದು ದೂರಿದ್ದಾರೆ.

ದೇವಸ್ಥಾನಕ್ಕೆ ಪ್ರವೇಶ ನಿರಾಕರಿಸಿರುವುದರಿಂದ ಇಸ್ಲಾಂ ಧರ್ಮಕ್ಕೆ ಮತಾಂತರ ಹೊಂದಲು ಬಯಸಿದ್ದಾರೆ. ಈ ಸುದ್ದಿ ಹರಡುತ್ತಿದ್ದಂತೆ ಕೆಲವು ತಮಿಳುನಾಡಿನ ಹಿಂದೂಪರ ಸಂಘಟನೆಗಳು ಻ವರನ್ನು ಸಂಪರ್ಕಿಸಿದ್ದು ಅವರ ಸಮಸ್ಯೆಗಳನ್ನು ಬಗೆಹರಿಸಲು ಪ್ರಯತ್ನಿಸುವುದಾಗಿ ಭರವಸೆ ನೀಡಿದ್ದಾರೆ.

Comments are closed.