ಮುಂಬೈ: ಸುಲ್ತಾನ್ ಚಿತ್ರದ ಗೆಲುವಿನ ಹುಮ್ಮಸ್ಸಿನಲ್ಲಿರುವ ಬಾಲಿವುಡ್’ನ ಸ್ಟಾರ್ ‘ಸುಲ್ತಾನ್’ ಸಲ್ಮಾನ್ ಖಾನ್ ತಮ್ಮ ಚಿತ್ರಕ್ಕೆ ಒಂದು ಸಾವಿರ ಕೋಟಿ ರೂ. ಸಂಭಾವನೆ ಪಡೆಯಲಿದ್ದಾರೆ. ಈ ಸುದ್ದಿ ನೋಡಿ ನಿಬ್ಬೆರಗಾಗಬೇಡಿ. ಸಲ್ಮಾನ್ 1 ಸಾವಿರ ಕೋಟಿ ರೂ. ಪಡೆಯುತ್ತಿರುವುದು ಒಂದು ಸಿನಿಮಾಕ್ಕಲ್ಲ 10 ಚಿತ್ರಗಳಿಗೆ.
ಬಿಟೌನ್ ಮೂಲಗಳ ಮಾಹಿತಿಯಂತೆ ಚಾನಲ್’ವೊಂದು ಸಲ್ಮಾನ್ ಖಾನ್ ಅವರ ಜೊತೆ 10 ಚಿತ್ರಗಳಿಗೆ ಒಪ್ಪಂದ ಮಾಡಿಕೊಳ್ಳಲಿದೆ. ಈ 10 ಚಿತ್ರಗಳು ಮುಗಿಸಿಕೊಡುವವರೆಗೂ ಬೇರೆ ಚಿತ್ರಗಳ ಜೊತೆ ಅಭಿನಯಿಸಬಾರದಂತೆ ಎಂಬ ಷರತ್ತು ವಿಧಿಸಲಾಗಿದೆ ಎಂಬ ಮಾತು ಕೇಳಿ ಬರುತ್ತಿದೆ. ಸಲ್ಮಾನ್ ಜೊತೆ ಹೃತಿಕ್ ರೋಷನ್ ಕೂಡ 5 ಚಿತ್ರಗಳಿಗೆ 550 ಕೋಟಿ ರೂ. ಹಾಗೂ ಅಜಯ್ ದೇವಗನ್ 10 ಚಿತ್ರಗಳಿಗೆ 400 ಕೋಟಿ ರೂ. ಪಡೆಯಲಿದ್ದಾರಂತೆ. ಈ ಮಾಹಿತಿಯ ಬಗ್ಗೆ ಕೇಳಿದರೆ ಮೂವರು ನಟರು ತಲೆ ತಪ್ಪಿಸಿಕೊಂಡು ಓಡಾಡುತ್ತಿದ್ದಾರಂತೆ.
Comments are closed.