
ಮುಂಬೈ: ಕುಸ್ತಿಪಟು ಲುಕ್‍ನಲ್ಲಿ ಸಲ್ಮಾನ್ ಖಾನ್ ಅವರ ಸುಲ್ತಾನ್ ಚಿತ್ರಕ್ಕೆ ಪ್ರೇಕ್ಷಕರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದ್ದು, ತಮ್ಮ ಚಿತ್ರಕ್ಕೆ ಬೆಂಬಲಿಸಿದ ಎಲ್ಲಾ ಅಭಿಮಾನಿಗಳಿಗೂ ಸಲ್ಮಾನ್ ಧನ್ಯವಾದ ತಿಳಿಸಿದ್ದಾರೆ.
ಚಿತ್ರ ಜುಲೈ 6ಕ್ಕೆ ಬಿಡುಗಡೆಯಾಗಿದ್ದು, ಇಲ್ಲಿಯವರೆಗೂ 180 ಕೋಟಿ ರೂ. ಗೂ ಹೆಚ್ಚು ಗಳಿಕೆ ಮಾಡಿದ್ದು, ಸಲ್ಮಾನ್ ಅಭಿನಯಕ್ಕೆ ಪ್ರೇಕ್ಷಕರು ಫುಲ್ ಫಿದಾ ಆಗಿದ್ದಾರೆ. ಹೀಗಾಗಿ ಅಭಿಮಾನಿಗಳಿಗೆ ಸಲ್ಮಾನ್ ಟ್ವಿಟ್ಟರ್ ಮೂಲಕ ಧನ್ಯವಾದ ತಿಳಿಸಿದ್ದು, ಸುಲ್ತಾನ್‍ಗೆ ಬೆಂಬಲ ನೀಡಿದ್ದಕ್ಕೆ ಥ್ಯಾಂಕ್ಸ್ ಎಂದು ಟ್ವೀಟ್ ಮಾಡಿದ್ದಾರೆ.
ಅಲಿ ಅಬ್ಬಾಸ್ ಜಾಫರ್ ನಿರ್ದೇಶನದ ಸುಲ್ತಾನ್ ಚಿತ್ರ, ಕುಸ್ತಿ ಆಧಾರಿತ ಚಿತ್ರವಾಗಿದ್ದು, ಕುಸ್ತಿಪಟುವಾಗಿ ಸಾಧನೆ ಮಾಡುವ ವ್ಯಕ್ತಿ ಹೇಗೆ ಕೌಟುಂಬಿಕ ಸಂಬಂಧವನ್ನ ಕಳೆದುಕೊಳ್ಳುತ್ತಾನೆ. ಮತ್ತೆ ತನ್ನವರನ್ನ, ಅವರ ಪ್ರೀತಿಯನ್ನ ಪಡೆಯೋಕೆ ಹೋರಾಡುತ್ತಾನೆ ಎನ್ನುವುದನ್ನ ಚಿತ್ರದಲ್ಲಿ ತುಂಬಾ ಭಾವನಾತ್ಮಕವಾಗಿ ತೋರಿಸಲಾಗಿದೆ.
Comments are closed.