ಅಂತರಾಷ್ಟ್ರೀಯ

ದೆಹಲಿ ಅಧಿಕಾರಿಗಳಿಂದ ಮಣಿಪುರ ಮಹಿಳೆ ಮೇಲೆ ಜನಾಂಗೀಯ ನಿಂದನೆ?

Pinterest LinkedIn Tumblr

ಮ಻ನಿದೆಹಲಿ: ಸಿಯೋಲ್ ನಲ್ಲಿ ನಡೆಯುತ್ತಿದ್ದ ಇವಾ ಜಾಗತಿಕ ಮಹಿಳಾ ಸಬಲೀಕರಣ ಕಾರ್ಯಕ್ರಮಕ್ಕೆ ಭಾರತ ದೇಶವನ್ನು ಪ್ರತಿನಿಧಿಸಿ ತೆರಳುತ್ತಿದ್ದ ಮಣಿಪುರದ ಮೂಲದ ಮಹಿಳೆಯೊಬ್ಬರ ಮೇಲೆ ದೆಹಲಿಯ ಇಂದಿರಾಗಾಂಧಿ ಅಂತರಾಷ್ಟ್ರೀಯ ವಿಮಾನ ನಿಲ್ದಾಣದ ಅಧಿಕಾರಿಗಳು ಜನಾಂಗೀಯ ನಿಂದನೆ ನಡೆಸಿರುವುದಾಗಿ ಸಾಮಾಜಿಕ ಜಾಲತಾಣದಲ್ಲಿ ಹೇಳಿಕೊಂಡಿದ್ದು ಇದೀಗ ವೈರಲ್ ಆಗಿದೆ.

ಮಣಿಪುರ ನಿವಾಸಿ ಮೋನಿಕಾ ಕಾಂಗೇಂಬಮ್ ಶನಿವಾರದಂದು ದೆಹಲಿಯಿಂದ ಸಿಯೋಲ್ ಗೆ ಪ್ರಯಾಣ ನಡೆಸುತ್ತಿದ್ದು ಈ ವೇಳೆ ಇಮಿಗ್ರೇಶನ್ ಡೆಸ್ಕ್ ಬಳಿ ಪಾಸ್ ಪೋರ್ಟ್ ಪರಿಶೀಲನೆ ನಡೆಸುತ್ತಿದ್ದ ಅಧಿಕಾರಿಯೊಬ್ಬ ಆಕೆಯನ್ನು ಕಂಡು “ನೀನು ಭಾರತೀಯಳಂತೆ ಕಾಣುವುದಿಲ್ಲ ನಿಜವಾಗಲೂ ಭಾರತೀಯಳೇ? ಎಂದು ಪ್ರಶ್ನಿಸಿದ್ದಾನೆ. ಆಕೆ ಭಾರತೀಯಳು ಎಂದು ಖಚಿತ ಪಡಿಸಿಕೊಳ್ಳಲು ದೇಶದಲ್ಲಿ ಎಷ್ಟು ರಾಜ್ಯಗಳಿವೆ? ಎಂದು ಕೇಳಿದ್ದಾನೆ. ಈತನ ಪ್ರಶ್ನೆಗೆ ಮಹಿಳಾ ಸಹವರ್ತಿ ನಗೆ ಬೀರ ಸುಮ್ಮನಾದಳೇ ಹೊರತು ಆತನ್ನು ತಡೆಯಲಿಲ್ಲ ಎಂದು ಮೋನಿಕಾ ತನ್ನ ಫೇಸ್ ಬುಕ್ ಅಕೌಂಟ್ ನಲ್ಲಿ ಬರೆದುಕೊಂಡಿದ್ದಾಳೆ.

ಇಷ್ಟೆಲ್ಲಾ ಪ್ರಶ್ನೆಗಳು ಆತ ಮೇಲಿಂದ ಮೇಲೆ ಕೇಳುತ್ತಿದ್ದ ಬಳಿಕ ನೇರವಾಗಿ ನನ್ನ ಊರು ಯಾವುದೇಂದು ಕೇಳಿದ ಮಣಿಪುರ ಎಂದ ಕೂಡಲೇ ಹತ್ತಿರದ ಗಡಿ ರಾಜ್ಯಗಳನ್ನು ಹೆಸರಿಸುವಂತೆ ಹೇಳಿದ. ಆದರೆ ನನಗೆ ವಿಮಾನ ತಡವಾಗುತ್ತಿದೆ ಎಂದೆ. ಆದರೆ ಆ ಅಧಿಕಾರಿ ಮಾತ್ರ ಧರ್ಪದಿಂದ, ವಿಮಾನ ನಿಮ್ಮನ್ನು ಬಿಟ್ಟು ಎಲ್ಲೂ ತೆರಳುವುದಿಲ್ಲ ಆರಾಮವಾಗಿಯೇ ಉತ್ತರಿಸಿ ಎಂದು ಎಂದು ವಿಚಿತ್ರ ನೋಟದ ನಗೆ ಬೀರಿದ್ದಾನೆ. ಈ ಎಲ್ಲಾ ಘಟನೆ ಕುರಿತು ಯಾರ ಬಳಿ ಹೇಳಿಕೊಳ್ಳಲಿ ಎಂದು ಮೋನಿಕಾ ತಾವು ಎದುರಿಸಿದ ಅವಮಾನವನ್ನು ಸಾಮಾಜಿಕ ಜಾಲತಾಣದಲ್ಲಿ ಷೇರ್ ಮಾಡಿದ್ದಾರೆ.

ಮೋನಿಕಾರ ಪ್ರಶ್ನೆ ಈಗಾಗಲೇ ವೈರಲ್ ಆಗಿದ್ದು ವಿದೇಶಾಂಗ ಸಚಿವೆ ಸುಶ್ಮಾ ಸ್ವರಾಜ್ ಈ ಘಟನೆಯನ್ನು ಗಂಭೀರವಾಗಿ ಪರಿಗಣಿಸಿ ಕೂಡಲೇ ತಪ್ಪಿತಸ್ಥರನ್ನು ಶಿಕ್ಷಿಸಬೇಕು ಎಂದು ಮಣಿಪುರದ ಬಿಜೆಪಿ ನಾಯಕ ಡಾ ನಿಮೈ ಸಿ ಲುವಾಂಗ್ ಕೇಳಿಕೊಂಡಿದ್ದಾರೆ.

Comments are closed.