ನವದೆಹಲಿ: ಸೌರವ್ ಗಂಗೂಲಿ ನಮಗೆ ಅನೇಕ ಸ್ಮರಣೀಯ ಕ್ಷಣಗಳನ್ನು ಒದಗಿಸಿದ್ದಾರೆ. ಆದರೆ ಅವರ ಶ್ರೇಷ್ಟ ಬ್ಯಾಟಿಂಗ್ ಕೌಶಲವನ್ನು ದಿ. ಟೋನಿ ಗ್ರೇಗ್ ಮರೆಯಲಾಗದ ರೀತಿಯಲ್ಲಿ ವರ್ಣಿಸಿದ್ದರು. ಜಿಂಬಾಬ್ವೆ ವಿರುದ್ಧ 1998ರ ಕೋಕಾ ಕೋಲಾ ಚಾಂಪಿಯನ್ಸ್ ಟ್ರೋಫಿ ಫೈನಲ್‌ನಲ್ಲಿ ಗಂಗೂಲಿ ಗ್ರಾಂಟ್ ಫ್ಲವರ್ ಎಸೆತಗಳಿಗೆ ಮೂರು ಸಿಕ್ಸರುಗಳನ್ನು ಸಿಡಿಸಿದ್ದರು.
ಮೈದಾನದ ಹೊರಗೆ ಸ್ಟೇಡಿಯಂನ ಮೇಲ್ಛಾವಣಿ ಮೇಲೆ ಈ ಸಿಕ್ಸರುಗಳನ್ನು ಸಿಡಿಸಿದ್ದರು. ಆಗ ವೀಕ್ಷಕವಿವರಣೆ ನೀಡುತ್ತಿದ್ದ ಗ್ರೇಗ್ ಘಟನೆಗಳನ್ನು ವರ್ಣಿಸುತ್ತಾ, ಹಿ ಲವ್ಸ್ ದೆಟ್ ರೂಫ್, ಹಿ ಲವ್ಸ್ ದೆಟ್ ರೂಫ್( ಅವರು ಮೇಲ್ಛಾವಣಿ ಪ್ರೀತಿಸುತ್ತಾರೆ) ಎಂದು ಕಾಮೆಂಟರಿ ಮಾಡಿದ್ದರು.
ಇದನ್ನು ಶ್ರೇಷ್ಟ ಕಾಮೆಂಟರಿಗಳಲ್ಲೊಂದಾಗಿ ಪರಿಗಣಿಸಲಾಗಿದೆ. ಭಾರತ ಜಿಂಬಾಬ್ವೆಯ 196 ಮೊತ್ತದ ಗಡಿಯನ್ನು ಗಂಗೂಲಿ 63 ಮತ್ತು ಸಚಿನ್ 124 ರನ್‌ಗಳೊಂದಿಗೆ ಯಾವುದೇ ವಿಕೆಟ್ ನಷ್ಟವಿಲ್ಲದೇ 30 ಓವರುಗಳಲ್ಲೇ ದಾಟಿದ್ದರು.
Comments are closed.