
ನವದೆಹಲಿ: ಕೇಂದ್ರ ಸಚಿವ ಸಂಪುಟ ಪುನಾರಚನೆ ವೇಳೆ ತಮ್ಮ ಖಾತೆ ಕಳೆದುಕೊಂಡಿರುವ ಸ್ಮೃತಿ ಇರಾನಿ ಕುರಿತಂತೆ ಜೆಡಿಯು ನಾಯಕ ಮತ್ತು ರಾಜ್ಯಸಭಾ ಸದಸ್ಯ ಅಲಿ ಅನ್ವರ್ ನೀಡಿದ ಹೇಳಿಕೆ ಈಗ ಭಾರೀ ವಿವಾದ ಸೃಷ್ಟಿಸಿದೆ.
ಮಾನವ ಸಂಪನ್ಮೂಲ ಮತ್ತು ಶಿಕ್ಷಣ ಖಾತೆ ಕಳೆದುಕೊಂಡು ಜವಳಿ ಖಾತೆ ಹೊಂದಿರುವ ಸ್ಮೃತಿ ಇರಾನಿ ಬಗ್ಗೆ ಅಲಿ ಆಘಾತಕಾರಿ ಹೇಳಿಕೆ ನೀಡಿದ್ದು , ಸಚಿವೆಗೆ ಜವಳಿ ಖಾತೆ ನೀಡಿರುವುದು ಅವರ ದೇಹವನ್ನು ಮುಚ್ಚಿಕೊಳ್ಳಲು ಅನುಕೂಲವಾಗಿದೆ ಎಂದು ಅಲಿ ಅನ್ವರ್ ಹೇಳಿದ್ದರು.
ಕೇಳಿದ ಪ್ರಶ್ನೆಗೆ ಉತ್ತರ ನೀಡಿರುವ ಅಲಿ, ನಾನು ಹೇಳಿದ್ದು ಸ್ಮೃತಿ ಇರಾನಿ ಅವರಿಗಲ್ಲ ಒಟ್ಟಾರೆ ಸಾಮಾನ್ಯವಾಗಿ ಎಲ್ಲ ಸಾರ್ವಜನಿಕರನ್ನು ಕುರಿತು ಹೇಳಿದ್ದೆ ಎಂದಿದ್ದಾರೆ. ಸಂಪುಟ ಪುನಾರಚನೆಯಲ್ಲಿ ಸ್ಮೃತಿ ಇರಾನಿ ಅವರನ್ನು ಮಾನವ ಸಂಪನ್ಮೂಲ ಖಾತೆ ವಾಪಸ್ ಪಡೆದು ಅವರಿಗೆ ಜವಳಿ ಖಾತೆ ನೀಡಲಾಗಿದೆ. ಇರಾನಿ ಹೊಂದಿದ್ದ ಮಾನವ ಸಂಪನ್ಮೂಲ ಖಾತೆಯನ್ನು ಪ್ರಕಾಶ್ ಜಾವ್ಡೇಕರ್‍ಗೆ ನೀಡಲಾಗಿದೆ.
Comments are closed.