ಬಿಹಾರ: ಸಾಮಾಜಿಕ ಜಾಲತಾಣಗಳ ಸಹಾಯದಿಂದ ಸಮಾಜದಲ್ಲಿನ ಲೋಪ-ದೋಷಗಳನ್ನು ಸರಿಪಡಿಸಿಕೊಳ್ಳಲು ಸಂಪರ್ಕ ಸೇತುವಾಗಿ ಬಳಸಿಕೊಳ್ಳುವ ನಿರ್ಧಾರಕ್ಕೆ ಬಂದಿರುವ ಬಿಹಾರ ಉಪಮುಖ್ಯಮಂತ್ರಿ ತೇಜಸ್ವಿ ಯಾದವ್, ರಸ್ತೆ ಕಾಮಗಾರಿಗಳ ವೇಗ ಹಾಗೂ ಸಮಸ್ಯೆಗಳನ್ನು ಅಧಿಕಾರಿಗಳ ಗಮನಕ್ಕೆ ತರಲು ‘ವಾಟ್ಸ್ಆಪ್’ ನಂಬರ್ ನೀಡಿ, ಮಾಹಿತಿ ಸಂಗ್ರಹಕ್ಕೆ ವೇದಿಕೆ ಮಾಡಿಕೊಂಡಿದ್ದಾರೆ.
9470001346 ವಾಟ್ಸ್ ಆಪ್ ನಂಬರ್ ಗುರುವಾರ ಲೋಕಾರ್ಪಣೆಯಾಗಿದೆ. ಈ ಕುರಿತು ಮಾತನಾಡಿದ ತೇಜಸ್ವಿ ಯಾದವ್, ಬಿಹಾರ ಜನತೆ ಮುಂದಿನ ದಿನಗಳಲ್ಲಿ ವಾಟ್ಸ್ಆಪ್ ನಂಬರಿಗೆ ರಸ್ತೆ ಕಾಮಗಾರಿ ಕುರಿತ ಸಮಸ್ಯೆಗಳನ್ನು ತಿಳಿಸಬಹುದಾಗಿದೆ. ಇದರ ಜತೆಗೆ ಹೊಸದಾಗಿ ನಿರ್ಮಿಸಲ್ಪಟ್ಟ ರಸ್ತೆಯ ಗುಣಮಟ್ಟ ಹೇಗಿದೆ? ಸೂಕ್ತ ರೀತಿಯಲ್ಲಿ ನಿರ್ವಹಣೆ ಮಾಡಲಾಗುತ್ತಿದ್ದೆಯೇ? ಈ ಕುರಿತ ಎಲ್ಲಾ ಅಹವಾಲುಗಳನ್ನು ವಾಟ್ಸ್ಆಪ್ನಲ್ಲಿ ಸಲ್ಲಿಸಬಹುದು. ಇದರಿಂದ ಯೋಜನೆಗಳು ವೇಗ ಪಡೆಯಲಿದ್ದು, ಅಧಿಕಾರಿಗಳನ್ನು ಎಚ್ಚರಿಸಿದಂತಾಗುತ್ತದೆ ಎಂದು ತಿಳಿಸಿದರು.
ಇದರಲ್ಲಿ ಹೊಸದೊಂದು ಸಾಧನ ಪರಿಚಯಿಸಲಾಗಿದ್ದು, ಅದನ್ನು ಕ್ಲಿಕ್ಕಿಸಿದರೆ ಸಂಬಂಧಪಟ್ಟ ಇಲಾಖೆಗೆ ಸಂದೇಶ ರವಾನೆಯಾಗುತ್ತದೆ. ಈ ಹಿಂದೆ ಜನರು ತಮ್ಮ ಸಮಸ್ಯೆಗಳನ್ನು ಸಂಬಂಧಪಟ್ಟ ಅಧಿಕಾರಿಗಳಿಗೆ ತಿಳಿಸಲು ದಿನವೆಲ್ಲ ಸರತಿ ಸಾಲಿನಲ್ಲಿ ನಿಂತು ಕಾಯಬೇಕಾಗಿತ್ತು. ಆದರೆ ವಿನೂತನ ವಾಟ್ಸ್ ಆಪ್ ವೇದಿಕೆಯಿಂದ ಕ್ಷಣಾರ್ಧದಲ್ಲಿ ಸಮಸ್ಯೆ ಅಧಿಕಾರಿಗಳ ಗಮನಕ್ಕೆ ತರಲು ಸಾಧ್ಯವಾಗಲಿದೆ ಎನ್ನುವುದು ಅವರ ಅಭಿಪ್ರಾಯವಾಗಿದೆ.
Comments are closed.