ರಾಷ್ಟ್ರೀಯ

ಪತ್ನಿ, ಮೂವರು ಪುತ್ರಿಯರನ್ನು ಕೊಂದು ಶವಗಳೊಂದಿಗೆ 2 ದಿನ ಕಾಲಕಳೆದ ..!

Pinterest LinkedIn Tumblr

dea

ಚೆನ್ನೈ: ಪತ್ನಿ ಮತ್ತು ಮೂವರು ಪುತ್ರಿಯರನ್ನು ರಾಡ್‌ನಿಂದ ತಲೆಗೆ ಹೊಡೆದು ಭೀಕರವಾಗಿ ಹತ್ಯೆ ಮಾಡಿದ ವ್ಯಕ್ತಿಯೊಬ್ಬ ಎರಡು ದಿನ ಆ ಮೃತದೇಹಗಳ ಜತೆಯಲ್ಲೇ ಇದ್ದ ಮೃಗೀಯ ಘಟನೆಯೊಂದು ಇಲ್ಲಿನ ರಾಯಂಪೇಟ್‌ದಲ್ಲಿ ನಡೆದಿದೆ.

ರಾಯಂಪೇಟ್ ಪೊಲೀಸ್ ಠಾಣೆ ಹಿಂಭಾಗದ ಮುತ್ತುಬೀದಿಯಲ್ಲಿ ವಾಸವಿದ್ದ ಚಿನ್ನರಾಜ್ ತನ್ನ ಪತ್ನಿ 38 ವರ್ಷದ ಪಂದಿಯಮ್ಮಾಳ್, ಪುತ್ರಿಯರಾದ ಪರಿಮಳಂ (19), ಸ್ನೇಹ (17) ಹಾಗೂ ಪವಿತ್ರ (15) ಅವರನ್ನು ಒಬ್ಬರ ನಂತರ ಒಬ್ಬರನ್ನು ರಾಡ್‌ನಿಂದ ತಲೆಗೆ ಹೊಡೆದು ಹತ್ಯೆ ಮಾಡಿದ್ದು, ಎರಡು ದಿನ ಆ ಶವಗಳೊಂದಿಗೇ ಇದ್ದಾನೆ.

ಕೊನೆಗೆ ಮನೆ ಮಾಲೀಕ ರಾಜ್ ಬಹದ್ದೂರ್ ಅವರು ದುರ್ವಾಸನೆ ತಡೆಯಲಾರದೆ ಪೊಲೀಸರಿಗೆ ದೂರು ನೀಡಿದ್ದಾರೆ. ಪೊಲೀಸರು ಒಂದು ಬಾಗಿಲು ಒಡೆದು ನೋಡಿದರೆ ನಾಲ್ಕೂ ಜನ ಶವವಾಗಿ ಕೊಳೆತ ಸ್ಥಿತಿಯಲ್ಲಿದ್ದದ್ದು ಕಂಡುಬಂತು. ಮೃತ ದೇಹಗಳನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಿಕೊಡಲಾಗಿದೆ. ದೊಡ್ಡ ಮಗಳು ಪರಿಮಳ ಮೆಡಿಕಲ್ ಓದುವ ಕನಸು ಕಂಡಿದ್ದಳು. ಎರಡನೆಯ ಸ್ನೇಹಾ ಪಾಲಿಟೆಕ್ನಿಕ್ ಓದುತ್ತಿದ್ದಳು. ಮೂರನೆಯ 15 ವರ್ಷದ ಪವಿತ್ರ ಪಿಯುಸಿಗೆ ಸೇರಿದ್ದಳು ಎಂದು ಪೊಲೀಸರು ತಿಳಿಸಿದ್ದಾರೆ. ಹಂತಕ ಚಿನ್ನರಾಜ್‌ನನ್ನು ತನಿಖೆಗೊಳಪಡಿಸಿದಾಗ ನನ್ನ ಹೆಂಡತಿ ಕಳೆದ ಒಂದು ತಿಂಗಳಿಂದ ನನ್ನನ್ನು ಮನೆಗೆ ಸೇರಿಸಿಲ್ಲ. ಅದಕ್ಕೆ ಕೋಪಗೊಂಡು ಹತ್ಯೆ ಮಾಡಿರುವುದಾಗಿ ತಿಳಿಸಿದ್ದಾನೆ.

Comments are closed.