
ಮಂಗಳೂರು,ಜೂನ್.25: ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆ ದ.ಕ ಹಾಗೂ ಉಡುಪಿ ಜಿಲ್ಲೆ, ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ, ಮಂಗಳೂರು ತಾಲೂಕು ಹಾಗೂ ಕರ್ನಾಟಕ ರಾಜ್ಯ ಮಧ್ಯಪಾನ ಸಂಯಮ ಮಂಡಳಿ ಬೆಂಗಳೂರು ಇದರ ಸಂಯುಕ್ತ ಅಶ್ರಯದಲ್ಲಿ ಯುವಜನೆಯಲ್ಲಿ ದುಷ್ಛಟಗಳ ಕುರಿತಂತೆ ಅರಿವು ಮೂಡಿಸಿ, ಆರೋಗ್ಯವಂತ ಯುವಪೀಳಿಗೆಯನ್ನು ನಿರ್ಮಿಸುವ ಮಹಾತ್ವಾಕಾಂಕ್ಷಿ ಕಾರ್ಯಕ್ರಮದವಾದ ಅಂತರಾಷ್ಟ್ರೀಯ ಮಾದಕ ವಸ್ತು ವಿರೋಧಿ ದಿನಾಚರಣೆಯನ್ನು ನಗರದ ಪುರಭವನದಲ್ಲಿ ಶನಿವಾರ ಉದ್ಘಾಟಿಸಲಾಯಿತು.
ಇದರ ಉದ್ಘಾಟನೆಯನ್ನು ಶಾಸಕ ಜೆ.ಆರ್ ಲೋಬೋ ನೆರವೇರಿಸಿದರು, ಹಾಗೂ ಮಾದಕ ವಸ್ತು ವಿರೋಧಿ ದಿನಾಚರಣೆಯ ಅಂಗವಾಗಿ ಜನಜಾಗೃತಿ ಜಾಥವು ಪುರಭವನದಿಂದ ಜಿಲ್ಲಾಧಿಕಾರಿ ಕಛೇರಿ ತನಕ ಮೆರೆವಣೆಯಲ್ಲಿ ಮೂಲಕ ಸಾಗಿತು.




ಈ ಸಂದರ್ಭ ಮಾದಕ ವಸ್ತು ವಿರೋಧಿ ಜಾಗೃತಿ ಮೂಡಿಸುವ ಟಿ-ಶರ್ಟ್ ಹಾಗೂ ಕ್ಯಾಪನ್ನು ಶಾಸಕ ಜೆ.ಆರ್ ಲೋಬೋ ವಿತರಿಸಿದರು. ಮಾಧಕ ವಸ್ತು ವಿರೋಧಿ ಜಾಗೃತಿ ಮೂಡಿಸುವ ಸ್ಟಿಕ್ಕರನ್ನು ಕಸ್ತೂರಿ ಪಂಜ ಅನಾವರಣಗೊಳಿಸಿದರು.
ಜಿಪಂ ಉಪಾಧ್ಯಕ್ಷೆ ಕಸ್ತೂರಿ ಪಂಜ, ಶ್ರೀಧರ ಹೊಳ್ಳ, ರಂಗ ಶಾಮಯ್ಯ, ಮಹಾವೀರ ಅಜ್ರಿ, ಪ್ರೊಫೆಸರ್ ವಿನುತಾ ರೈ, ಬಸವರಾಜ್ ಮೊದಲಾದವರು ಉಪಸ್ಥಿತರಿದ್ದರು.
Comments are closed.