ಮನೋರಂಜನೆ

ಏನೋ ಹೇಳಲು ಹೋಗಿ ಎಡವಟ್ಟು ಮಾಡಿಕೊಂಡ ಸಲ್ಮಾನ್ ಖಾನ್ ! ನಿಜವಾಗಿ ಹೇಳಿದ್ದೇನು…?

Pinterest LinkedIn Tumblr

sallu

ನವದೆಹಲಿ: ‘ಕುಸ್ತಿ ರಿಂಗ್ನಲ್ಲಿ ಸ್ಪರ್ಧಿಗಳೊಂದಿಗೆ ಕಾದಾಡಿದ ನಂತರ ನನ್ನ ಸ್ಥಿತಿ ಅತ್ಯಾಚಾರಕ್ಕೊಳಗಾದ ಮಹಿಳೆಯಂತಾಗಿತ್ತು. ಅಷ್ಟು ನೋವು ಅನುಭವಿಸಿದ್ದೇನೆ’ ಎಂದು ನಟ ಸಲ್ಮಾನ್ ಖಾನ್ ಹೊಸದೊಂದು ವಿವಾದ ಸೃಷ್ಟಿಸಿಕೊಂಡಿದ್ದಾರೆ.

ಸಲ್ಮಾನ್ ಹೇಳಿಕೆ ಮಹಿಳೆಯನ್ನು ಅವಮಾನಿಸುವಂತಿದೆ ಎಂದು ಆರೋಪಿಸಿರುವ ರಾಷ್ಟ್ರೀಯ ಮಹಿಳಾ ಆಯೋಗದ ಅಧ್ಯಕ್ಷೆ ಲಲಿತಾ ಕುಮಾರಮಂಗಲಂ ಸಲ್ಮಾನ್ಗೆ 7 ದಿನ ಸಮಯ ನೀಡುತ್ತೇವೆ. ಅಷ್ಟೊರೊಳಗೆ ಕ್ಷಮೆಯಾಚಿಸಬೇಕೆಂದು ಒತ್ತಾಯಿಸಿದ್ದಾರೆ.

ಕುಸ್ತಿ ಕ್ರೀಡೆಯನ್ನೇ ಕೇಂದ್ರ ಬಿಂದುವನ್ನಾಗಿಸಿಕೊಂಡು ನಿರ್ಮಿಸಲಾಗಿರುವ ಚಿತ್ರ ಸುಲ್ತಾನ್ ಪ್ರಚಾರ ಕಾರ್ಯದಲ್ಲಿ ಏನೋ ಹೇಳಲು ಹೋಗಿ ಇನ್ನೇನೋ ಹೇಳಿ ಸಲ್ಮಾನ್ ಖಾನ್ ಈಗ ತೀವ್ರ ಟೀಕೆಗೆ ಗುರಿಯಾಗಿದ್ದಾರೆ. ಪ್ರಚಾರ ಕಾರ್ಯಕ್ರಮದಲ್ಲಿ ಚಿತ್ರದ ಕುರಿತು ಅನುಭವ ಹಂಚಿಕೊಳ್ಳುವ ಸಂದರ್ಭದಲ್ಲಿ ಈ ಹೇಳಿಕೆ ನೀಡಿರುವ ಸಲ್ಮಾನ್ ಈಗ ಮಹಿಳೆಯರ ಕೆಂಗಣ್ಣಿಗೆ ಗುರಿಯಾಗಿದ್ದಾರೆ.

‘ಕುಸ್ತಿ ಅಕಾಡದಲ್ಲಿ 6 ಗಂಟೆ ನಡೆದ ಚಿತ್ರೀಕರಣದಲ್ಲಿ ಎದುರಾಳಿಯೊಂದಿಗೆ ಸೆಣಸುವಾಗ ಹಲವು ಬಾರಿ ಒಬ್ಬರ ಮೇಲೆ ಒಬ್ಬರು ಬಿದ್ದಿದ್ದೇವೆ. ಅಷ್ಟೇ ಅಲ್ಲ ರಿಂಗ್ನ ಹೊರಗೆ ಕೂಡ ನನ್ನನ್ನು ಎದುರಾಳಿ ಎಸೆದಿದ್ದರು. 120 ಕೆ.ಜಿಯ ವಿರೋಧಿಯನ್ನು ಹತ್ತು ಸಾರಿ ವಿವಿಧ ಭಂಗಿಯಲ್ಲಿ ರಿಂಗ್ನಿಂದ ಹೊರಕ್ಕೆ ಎಸೆಯಬೇಕಾಗಿ ಬಂತು. ಚಿತ್ರೀಕರಣದ ವೇಳೆ ಈ ರೀತಿ ಹಲವು ಬಾರಿ ನಡೆದಿದೆ. ಇಷ್ಟೆಲ್ಲಾ ಆದ ಬಳಿಕ ನನ್ನ ಸ್ಥಿತಿ ‘ಅತ್ಯಾಚಾರಕ್ಕೊಳಗಾದ ಮಹಿಳೆ ಯಾವರೀತಿ ಶಾರೀರಿಕವಾಗಿ ನೋವು ಅನುಭವಿಸುತ್ತಾಳೋ, ಅದೇ ರೀತಿ ನಾನೂ ಅನುಭವಿಸಬೇಕಾಗಿ ಬಂತು’ ಎಂದು ಎಡವಟ್ಟು ಮಾಡಿಕೊಂಡಿದ್ದಾರೆ.

ಸಲ್ಮಾನ್ ಅವರ ಈ ಹೇಳಿಕೆಗೆ ದೇಶಾದ್ಯಂತ ಭಾರಿ ವಿರೋಧ ವ್ಯಕ್ತವಾಗಿದೆ. ಸಾಮಾಜಿಕ ಜಾಲತಾಣಗಳಲ್ಲಿ ಸಲ್ಲು ಹೇಳಿಕೆಯನ್ನು ನಾನಾ ರೀತಿಯೊಂದ ಟೀಕಿಸಲಾಗುತ್ತಿದೆ. ಮುಂವರುವ ಅಗಸ್ಟ್ನಲ್ಲಿ ನಡೆಯುವ ರಿಯೋ ಒಲಿಂಪಿಕ್ಸ್ ಹಿನ್ನೆಲೆಯಲ್ಲಿ ಭಾರತೀಯ ಒಲಿಂಪಿಕ್ಸ್ ಸಂಸ್ಥೆ ಸಲ್ಮಾನ್ ಅವರನ್ನು ರಾಯಭಾರುಯನ್ನಾಗಿ ನೇಮಕ ಮಾಡಿಕೊಂಡಾಗಲೂ ಹೀಗೆ ವಿವಾದ ಸೃಷ್ಟಿಯಾಗಿತ್ತು. ಕುಸ್ತಿ ಪಟು ಯೋಗೇಶ್ವರ್ ದತ್, ಒಲಿಂಪಿಕ್ ಪದಕ ವಿಜೇತ ಹಾಗೂ ಮಾಜಿ ಕ್ರೀಡಾ ಪಟು ಮಿಲ್ಕಾ ಸಿಂಗ್ ವಿರೋಧ ವ್ಯಕ್ತಪಡಿಸಿದ್ದರು. ಸಲ್ಮಾನ್ ಕ್ರೀಡಾ ಕ್ಷೇತ್ರಕ್ಕೆ ನೀಡುರುವ ಕೊಡುಗೆಯಾದರು ಏನು ಎಂದು ಪ್ರಶ್ನಿಸಿದ್ದರು. ಆದರೆ ಸಲ್ಮಾನ್ ಪರ ಬಾಲಿವುಡ್ ವಲಯ ಸೇರಿದಂತೆ ಹಲವು ಗಣ್ಯರು ಬ್ಯಾಟಿಂಗ್ ಮಾಡಿದ್ದರು.

Comments are closed.