ಮನೋರಂಜನೆ

ತನ್ನ ಸೌಂದರ್ಯದ ಗುಟ್ಟು ರಟ್ಟು ಮಾಡಿದ ನಟಿ ಮಾಧುರಿ ದೀಕ್ಷಿತ್ ಸಂಕಷ್ಟದಲ್ಲಿ !

Pinterest LinkedIn Tumblr

madhuri-dixit

ಮುಂಬಯಿ: ಬಹಳ ವರ್ಷಗಳಿಂದ ಓಲೇ ಸ್ಕಿನ್ ಕೇರ್ ಉತ್ಪನ್ನಗಳಿಗೆ ರಾಯಭಾರಿಯಾಗಿ ಕಾರ್ಯನಿರ್ಹಿಸಿದ ಧಕ್ ಧಕ್ ಬೆಡಗಿ ಮಾಧುರಿ ದೀಕ್ಷಿತ್ ತನ್ನ ಸೌಂದರ್ಯ ರಹಸ್ಯವನ್ನು ಬಹಿರಂಗಗೊಳಿಸಿದ್ದು, ವಿವಾದಕ್ಕೆಡೆ ಮಾಡಿಕೊಟ್ಟಿದೆ.

‘ನನ್ನ ತ್ವಚೆಯ ಸೌಂದರ್ಯ ಕಾಪಾಡಲು ಬೆಲ್ಲವಿಯಾಂಡ್ ಫಿಟೋಸೆರಮೈಡ್ಸ್ ಬಳಸುತ್ತೇನೆ,’ ಎಂದು ಇತ್ತೀಚೆಗೆ ಮಾಧ್ಯಮ ಸಂವಾದದಲ್ಲಿ ಮಾಧುರಿ ಹೇಳಿಕೊಂಡಿದ್ದಳು. ಹಾಗಾದರೆ, ‘ಗ್ರಾಹಕರಿಗೆ ಅತ್ಯುತ್ತಮ ಉತ್ಪನ್ನವೆಂದು ಜಾಹೀರಾತುಗಳಲ್ಲಿ ಕಾಣಿಸಿಕೊಂಡು, ಕೊಳ್ಳಲು ಪ್ರೇರೇಪಿಸಿದ ಅವಳ ನಡೆಗೆ ಏನರ್ಥ?’ ಎಂಬುವುದೀಗ ಅವಳ ಅಭಿಮಾನಿಗಳನ್ನು ಕಾಡುತ್ತಿರುವ ಪ್ರಶ್ನೆ.

ಇದುವರೆಗೆ ಉತ್ಪನ್ನವೊಂದನ್ನು ಬಳಸುವಂತೆ ಪ್ರಚೋದಿಸಿ, ಇದೀಗ ತಾವು ಬೇರೆ ಸೌಂದರ್ಯ ವರ್ಧಕಗಳನ್ನು ಬಳಸುವುದಾಗಿ ತಪ್ಪೊಪ್ಪಿಕೊಂಡಿದ್ದು, ಮಾಧುರಿ ಹಾಗೂ ಅವಳು ಪ್ರಚಾರ ಮಾಡಿದ ಉತ್ಪನ್ನದ ಮೇಲೆ ಜನರು ವಿಶ್ವಾಸ ಕಳೆದುಕೊಳ್ಳುವಂತಾಗಿದೆ. ಇತರೆ ಸಿನಿಮಾ ನಟರೂ ಅನುಮೋದಿಸುವ ಉತ್ಪನ್ನಗಳ ಮೇಲಿನ ನಂಬಿಕೆಯನ್ನೂ ಜನರು ಈ ಹೇಳಿಕೆಯಿಂದ ಕಳೆದುಕೊಳ್ಳುತ್ತಾರೆ.

ಅಷ್ಟೇ ಅಲ್ಲ ಮಾಧುರಿ ನಡೆ ತಮ್ಮ ಉತ್ಪನ್ನಗಳ ರಾಯಭಾರಿಯನ್ನು ಆರಿಸಿಕೊಳ್ಳುವಾಗ, ಮಾಡಿಕೊಳ್ಳುವ ಕಾಂಟ್ರ್ಯಾಕ್ಟಿನಲ್ಲಿ ಹೊಸ ಕ್ಲಾಸ್‌ವೊಂದನ್ನೂ ಸೇರಿಸುವ ಬಗ್ಗೆ ಕಂಪನಿಗಳೂ ಚಿಂತಿಸುವಂತೆ ಮಾಡಿದೆ.

Comments are closed.