ಕೋಟ, ಜೂ.18- ಎರಡೂ ಕಾಲಿಲ್ಲದ ಈ ಕಡು ಬಡ ವಿದ್ಯಾರ್ಥಿ ಐಐಟಿ ಪರೀಕ್ಷೆಯಲ್ಲಿ ಇಡೀ ಭಾರತ ದೇಶಕ್ಕೇ 38ನೇ Rank ..! ಪ್ರತಿದಿನ ತನ್ನ ವಿಕಲಾಂಗ ಅಣ್ಣನನ್ನು ಶಾಲೆ, ಕಾಲೇಜಿಗೆ ಹೊತ್ತುಕೊಂಡು ಹೋಗಿ ಬರುತ್ತಿದ್ದ ತಮ್ಮ ಇದೇ ಪರೀಕ್ಷೆಯಲ್ಲಿ 3,675ನೆ Rank ..!! ಬಿಹಾರದ ಸಮಷ್ಟಿಪುರ ಜಿಲ್ಲೆಯ ಪರೋರಿಯಾ ಎಂಬ ಕುಗ್ರಾಮದ ಮದನ್ಪಂಡಿತ್ ಎಂಬ ಕಡು ಬಡ ಕೂಲಿಕಾರನ ಮಕ್ಕಳಾದ 19 ವರ್ಷದ ಕ್ರಿಷನ್ ಪಂಡಿತ್ ಮತ್ತು 18 ವರ್ಷದ ಬಸಂತ್ ಪಂಡಿತ್ ಬದುಕು ಮತ್ತು ಸಾಧನೆಗಳು ನಿಜಕ್ಕೂ ಇತರರಿಗೆ ಆದರ್ಶ ಮತ್ತು ಸ್ಫೂರ್ತಿದಾಯಕ.
ಕ್ರಿಷನ್ಗೆ ಆರು ತಿಂಗಳ ಮಗುವಾಗಿರುವಾಗಲೇ ಪೋಲಿಯೋ ಆಗಿ ಎರಡೂ ಕಾಲುಗಳೂ ಹೋದವು. ಪ್ರಾಥಮಿಕ ಶಾಲೆಯಿಂದಲೂ ತಮ್ಮ ಬಸಂತ್ ತನ್ನ ಅಣ್ಣನನ್ನು ಶಾಲೆಗೆ ಹೊತ್ತುಕೊಂಡು ಹೋಗಿ ಬರುತ್ತಿದ್ದ. ಮನೆಯಲ್ಲಿ ಬಡತನ. ಆದರೆ ಛಲ ಮಾತ್ರ ಬೆಟ್ಟದಷ್ಟಿತ್ತು. ಶಾಲೆಗೆ ಮತ್ತು ಸರ್ಕಾರ ನಡೆಸುವ ಕೋಚಿಂಗ್ ತರಗತಿಗಳಿಗೂ ಅಣ್ಣನನ್ನು ಹೆಗಲ ಮೇಲೆ ಕೂರಿಸಿಕೊಂಡೇ ಹೋಗುತ್ತಿದ್ದ ತಮ್ಮ ಬಸಂತ್. ಮುಂದೊಂದು ದಿನ ನಾವು ಇಬ್ಬರೂ ಎಂಜಿನಿಯರ್ಗಳು ಆಗಲೇಬೇಕು ಎಂಬ ಗುರಿ ಹೊಂದಿದ್ದ ಈ ಸಹೋದರರಿಗೆ ಯಾವುದೂ ಕಷ್ಟ ಅನ್ನಿಸಲೇ ಇಲ್ಲ. ಐಐಟಿ ಎಂಟ್ರೆನ್ಸ್ ಟೆಸ್ಟ್ಗೆ ಬಸಂತ್ ತನ್ನ ಅಣ್ಣನನ್ನು ಹೆಗಲಲ್ಲಿ ಹೊತ್ತೇ ಹೋಗಿದ್ದ.
ಇಬ್ಬರೂ ಪರೀಕ್ಷೆ ಬರೆದಿದ್ದರು. ಅಣ್ಣ 38ನೆ Rank ಬಂದರೆ ತಮ್ಮ ಬಸಂತ್ 3675ನೆ Rank ಬಂದಿದ್ದಾನೆ. ನನ್ನ ತಮ್ಮ ಸಿವಿಲ್ ಎಂಜಿನಿಯರಿಂಗ್ ವ್ಯಾಸಂಗ ಮಾಡಲು ಬಯಸಿದ್ದಾನೆ. ನಾನು ಕಂಪ್ಯೂಟರ್ ಎಂಜಿನಿಯರ್ ಆಗಬಯಸಿದ್ದೇನೆ ಎನ್ನುತ್ತಾನೆ 38ನೆ ರ್ಯಾಂ ಕ್ ಪಡೆದಿರುವ ವಿಕಲಾಂಗ ಕ್ರಿಷನ್ ಪಂಡಿತ್.
Comments are closed.