
ನವದೆಹಲಿ: ನಿಗದಿತ ಸಮಯದೊಳಗೆ ಗೋ ಕಲ್ಯಾಣಕ್ಕೆ ಪ್ರತ್ಯೇಕ ಸಚಿವಾಲಯ ಸ್ಥಾಪಿಸಬೇಕೆಂದು ವಿಶ್ವ ಹಿಂದೂ ಪರಿಷದ್ ಅಂಗ ಸಂಸ್ಥೆ ಭಾರತೀಯ ಗೋವಂಶ ರಕ್ಷಣಾ ಸಂವರ್ಧನಾ ಪರಿಷದ್ ಕೇಂದ್ರ ಸರ್ಕಾರದ ಮುಂದೆ ಹೊಸ ಬೇಡಿಕೆಯನ್ನಿಟ್ಟಿದೆ.
2014ರ ಲೋಕಸಭಾ ಚುನಾವಣಾ ಸಮಯದಲ್ಲಿ ಹಿಂದೂಗಳಿಗೆ ಪೂಜನೀಯವಾದ ಹಸುಗಳನ್ನು ರಕ್ಷಿಸಲು ಕ್ರಮ ಕೈಗೊಳ್ಳುತ್ತೇವೆ ಎಂದು ಬಿಜೆಪಿ ನೀಡಿದ್ದ ಭರವಸೆಯನ್ನು ನೆನಪಿಸುವ ಸಂಕಲ್ಪವನ್ನು ಹೊತ್ತಿರುವ ಪರಿಷದ್ ಗೋ ರಕ್ಷಣೆಗಾಗಿ ಸಚಿವಾಲಯ ರಚಿಸಿ ಗೋಹತ್ಯೆ ನಿಷೇಧಿಸಲು ಸೂಕ್ತ ಕ್ರಮ ಕೈಗೊಳ್ಳಬೇಕು ಮತ್ತು ಅಳಿವಿನಂಚಿನಲ್ಲಿರುವ ಭಾರತೀಯ ಗೋ ತಳಿಗಳ ರಕ್ಷಣೆಗೆ ಅವಶ್ಯವಾದ ಎಲ್ಲ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಒತ್ತಾಯಿಸಿದೆ.
ಸ್ವಯಂಘೋಷಿತ ಗೋರಕ್ಷಣಾ ಗುಂಪುಗಳು ಗೋಹತ್ಯೆ ಮಾಡುವವರನ್ನು ಗುರಿಯಾಗಿಸಿಕೊಂಡು ದಾಳಿ ಮಾಡುವುದು ಹೆಚ್ಚುತ್ತಿದ್ದಂತೆ ಗೋಮಾಂಸ ಭಕ್ಷಣೆ ದೇಶಾದ್ಯಂತ ದೊಡ್ಡ ವಿವಾದವನ್ನು ಹುಟ್ಟಿ ಹಾಕಿದೆ.
Comments are closed.