ನವದೆಹಲಿ: ಭಾರತದ ಮಾಜಿ ಕ್ರಿಕೆಟರ್ ವೀರೇಂದ್ರ ಸೆಹ್ವವಾಗ್ ತಮ್ಮ ಅಂತಾರಾಷ್ಟ್ರೀಯ ವೃತ್ತಿಜೀವನದಲ್ಲಿ ನಿರ್ಭಯ ಕ್ರಿಕೆಟ್ ಆಡುವುದಕ್ಕೆ ಹೆಸರಾಗಿದ್ದಾರೆ. ಯಾವುದೇ ವಿನಾಶಕಾರಿ ಬ್ಯಾಟ್ಸ್‌ಮನ್ ರೀತಿ ಅವರೂ ಕೂಡ ಕ್ರೀಡಾಂಗಣದ ಹೊರಗೆ ಸಿಕ್ಸರ್ ಹೊಡೆಯುವುದಕ್ಕೆ ಬಯಸುತ್ತಿದ್ದರು.
ಆದಾಗ್ಯೂ ಕ್ರಿಕೆಟ್ ವೃತ್ತಿಜೀವನಕ್ಕೆ ವಿದಾಯ ಹೇಳಿದರೂ ಸಿಕ್ಸರ್‌ಗಳಲ್ಲಿ ಸೆಹ್ವಾಗ್ ಇನ್ನೂ ಆಸಕ್ತಿ ಹೊಂದಿದ್ದಾರೆ. ಆದರೆ ಈ ಬಾರಿ ಸೆಹ್ವಾಗ್ ಸಾಮಾಜಿಕ ಜಾಲತಾಣದಲ್ಲಿ ಸಿಕ್ಸರ್ ಹೊಡೆದಿದ್ದಾರೆ. ಇದೊಂದು ಭಾರೀ ಸಿಕ್ಸರ್ ಆಗಿದ್ದು, ಮೈಕ್ರೊ ಬ್ಲಾಗಿಂಗ್ ಸೈಟ್ ಟ್ವಿಟರ್‌ನಲ್ಲಿ 6 ದಶಲಕ್ಷ ಅಭಿಮಾನಿ ನೆಲೆಯನ್ನು ಅವರು ಮುಟ್ಟಿದ್ದಾರೆ.
ಅವರ ಟ್ರೇಡ್‌ಮಾರ್ಕ್ ಶೈಲಿಯಲ್ಲಿ ಸೆಹ್ವಾಗ್ ತಮ್ಮ ಚಿತ್ರವನ್ನು ಮತ್ತು ಬರವಣಿಗೆಯನ್ನು ಪೋಸ್ಟ್ ಮಾಡಿ ಆ ಕ್ಷಣವನ್ನು ಸಂಭ್ರಮಿಸಿದರು. ನಿಮ್ಮ ಪ್ರೀತಿಯಿಂದ ವೀರು ಟ್ವಿಟರ್‌ನಲ್ಲಿ ಸಿಕ್ಸ್ ಬಾರಿಸಿದ್ದಾರೆಂದು ಅವರು ಪ್ರತಿಕ್ರಿಯಿಸಿದ್ದಾರೆ.
Comments are closed.