ರಾಷ್ಟ್ರೀಯ

ವಿದ್ಯಾರ್ಥಿನಿಯರಿಂದ ರಂಜಾನ್ ಉಪವಾಸದ ಜತೆಗೆ ಯೋಗ

Pinterest LinkedIn Tumblr

yoga-webಅಹಮದಾಬಾದ್: ರಂಜಾನ್ ವ್ರತಾಚರಣೆಯಲ್ಲಿರುವ ಅಹಮದಾಬಾದ್ ಅಂಜುಮಾನ್ ಇ-ಇಸ್ಲಾಂ ವಿದ್ಯಾರ್ಥಿನಿಯರು ಪ್ರತಿದಿನ ಬೆಳಗ್ಗೆ ಅರ್ಧಗಂಟೆ ಯೋಗಾಭ್ಯಾಸದಲ್ಲಿ ನಿರತರಾಗಿದ್ದಾರೆ. ವಿಶ್ವ ಯೋಗ ದಿನ ಸಮೀಪಿಸುತ್ತಿರುವಾಗಲೇ ವಿದ್ಯಾರ್ಥಿನಿಯರ ಯೋಗದ ಮೇಲಿನ ಆಸಕ್ತಿ ಎಲ್ಲರಲ್ಲೂ ಕುತೂಹಲ ಮೂಡಿಸಿದೆ.

ಯೋಗದಿಂದ ಹಲಾವಾರು ಪ್ರಯೋಜನಗಳಿವೆ. ಇದು ಯಾವುದೇ ಧರ್ಮಕ್ಕೆ ಸೇರಿದ್ದಲ್ಲ. ಸದ್ಯ ಪವಿತ್ರ ರಂಜಾನ್ ತಿಂಗಳಾದ್ದರಿಂದ ಉಪವಾಸ ಮಾಡಲು ಯೋಗಾಸನ ಬಹಳ ಉಪಯುಕ್ತವಾಗಿರುತ್ತದೆ ಎಂದು ಅಂಜುಮಾನ್ ಇ-ಇಸ್ಲಾಂನ ವಿದ್ಯಾರ್ಥಿನಿಯರು ಹೇಳುತ್ತಾರೆ.

ಯೋಗ ಮಾಡುವುದರ ಮೂಲಕ ಆರೋಗ್ಯ ಕಾಪಾಡಿಕೊಳ್ಳುತ್ತಿದ್ದಾರೆ. ಓಂಕಾರ ಪಠಿಸಲು ಅಥವಾ ಪಠಿಸದಿರಲು ಅವರಿಗೆ ಇಲ್ಲಿ ಅವಕಾಶ ನೀಡಲಾಗಿದೆ ಎಂದು ಶಾಲೆಯ ದೈಹಿಕ ಶಿಕ್ಷಕ ಮಲ್ಲಿಕ್ ಹಸನ್ಭಾಯ್ ಹೇಳುತ್ತಾರೆ.

Comments are closed.