ರಾಷ್ಟ್ರೀಯ

ನಾಗರಿಕ ವಿಮಾನಯಾನ ನೀತಿಗೆ ಕೇಂದ್ರ ಅಸ್ತು

Pinterest LinkedIn Tumblr

air-indiaನವದೆಹಲಿ (ಪಿಟಿಐ): ಬಹು ನಿರೀಕ್ಷಿತ ನಾಗರಿಕ ವಿಮಾನಯಾನ ನೀತಿಗೆ ಕೇಂದ್ರ ಸಚಿವ ಸಂಪುಟ ಬುಧವಾರ ಒಪ್ಪಿಗೆ ನೀಡಿದೆ. ಈ ಹೊಸ ನೀತಿಗಳಿಂದ ವಿಮಾನ ಪ್ರಯಾಣಿಕರಿಗೆ ಹಲವು ಸೌಲಭ್ಯಗಳು ಸಿಗಲಿವೆ.

2014 ನವೆಂಬರ್ ನಲ್ಲಿ ಮೊದಲ ಕರಡು ಪ್ರತಿಯನ್ನು ಸಿದ್ಧಪಡಿಸಿದ್ದ ಎನ್‍ಡಿಎ ಸರ್ಕಾರ 2015 ರಲ್ಲಿ ಸಿದ್ಧಪಡಿಸಿದ್ದ ಇನ್ನೊಂದು ಕರಡು ಪ್ರತಿಯನ್ನು ಸೇರಿಸಿ ಹೊಸ ನೀತಿಯ ಅಂತಿಮ ಕರಡು ಪ್ರತಿಗೆ ಒಪ್ಪಿಗೆ ಪಡೆಯಲು ಕೇಂದ್ರ ಸಚಿವ ಸಂಪುಟದ ಮುಂದಿಟ್ಟಿತ್ತು.

ಆದಾಗ್ಯೂ, ನಾಗರಿಕ ವಿಮಾನಯಾನ ಸಚಿವಾಲಯದ ಬೆಳವಣಿಗೆ ಪ್ರಸ್ತುತ ಶೇ,21ರಷ್ಟಿದ್ದು ಬೆಳವಣಿಗೆ ದರವನ್ನು ಹೆಚ್ಚಿಸಲು ಹೊಸ ನೀತಿಗಳು ಸಹಕಾರಿಯಾಗಲಿವೆ ಎಂದು ವಿಶ್ಲೇಷಿಸಲಾಗಿದೆ.

ಹೊಸ ನೀತಿಯಿಂದಾಗಿ ವಿಮಾನಯಾನ ದರ ನಿಯಂತ್ರಣವಾಗಲಿದ್ದು ಟಿಕೆಟ್ ರದ್ದತಿಗಾಗಿ ವಿಧಿಸಲಾಗುತ್ತಿದ್ದ ಶುಲ್ಕವೂ ಕಡಿಮೆಯಾಗಲಿದೆ. ಸರಕು ಶುಲ್ಕ ಕಡಿಮೆಗೊಳಿಸುವುದು, ಟಿಕೆಟ್ ರದ್ದುಗೊಳಿಸಿದ ಪ್ರಯಾಣಿಕರಿಗೆ ವಿಧಿಸಲಾಗುವ ಶುಲ್ಕವನ್ನು ಕಡಿಮೆಗೊಳಿಸಿ 15 ದಿನಗಳಲ್ಲಿ ಹಣ ವಾಪಸ್ ಪಾವತಿ ಮಾಡುವುದು ಸೇರಿದಂತೆ ಹಲವು ಪ್ರಯಾಣಿಕ ಸ್ನೇಹಿ ಕ್ರಮಗಳು ಹೊಸ ನೀತಿಯಲ್ಲಿ ಜಾರಿಯಾಗಲಿವೆ.

Comments are closed.