ರಾಷ್ಟ್ರೀಯ

ಮೂವರ ಕೊಂದ ಆರೋಪ; 18 ಸಿಂಹಗಳು ವಶ

Pinterest LinkedIn Tumblr

lionಅಹಮದಾಬಾದ್: ಮೂವರನ್ನು ಕೊಂದ ಆರೋಪದ ಮೇಲೆ ಗುಜರಾತ್ ಪೊಲೀಸರು 18 ಗಂಡು ಸಿಂಹಗಳನ್ನು ವಶಕ್ಕೆ ಪಡೆದು ತನಿಖೆ ನಡೆಸುತ್ತಿರುವ ವಿಚಿತ್ರ ಘಟನೆ ಅಹಮದಾಬಾದ್ ನಲ್ಲಿ ನಡೆದಿದೆ.

ಮೂಲಗಳ ಪ್ರಕಾರ ಮೂವರು ಮಾನವರ ಹತ್ಯೆಗೆ ಕಾರಣವಾದ ಸಿಂಹ ಯಾವುದೆಂದು ಪತ್ತೆ ಹಚ್ಚಲು ಸಿಂಹಗಳ ಹೆಜ್ಜೆ ಗುರುತನ್ನು ಸಂಗ್ರಹಿಸುತ್ತಿದ್ದಾರೆ ಎಂದು ತಿಳಿದುಬಂದಿದೆ. ಒಂದು ವೇಳೆ ಈ 18 ಸಿಂಹಗಳ ಪೈಕಿ ಮೂವರನ್ನು ಕೊಂದ ಸಿಂಹ ಪತ್ತೆಯಾದರೆ ಅದಕ್ಕೆ ಜೀವಾವವಧಿ ಶಿಕ್ಷೆ ನೀಡಲು ನಿರ್ಧರಿಸಲಾಗಿದೆ. ಅಂದರೆ ಮೃಗಾಲಯದಲ್ಲಿ ಸಿಂಹವನ್ನು ಬಂಧಿಸಲು ನಿರ್ಧರಿಸಲಾಗಿದೆ.

ಈ ಬಗ್ಗೆ ಮಾತನಾಡಿರುವ ಗುಜರಾತ್ನ ಹಿರಿಯ ಅರಣ್ಯ ಅಧಿಕಾರಿ ಜೆ.ಎ.ಖಾನ್ ಅವರು, ಮಾನವರ ಕೊಂದ ಸಿಂಹ ಪತ್ತೆಯಾದ ಬಳಿಕ ಉಳಿದ ಸಿಂಹಗಳನ್ನು ಕಾಡಿಗೆ ಬಿಡಲಾಗುತ್ತದೆ. ಹೆಜ್ಜೆ ಗುರುತಿನ ವರದಿಗಾಗಿ ಕಾಯುತ್ತಿದ್ದೇವೆ. ಇನ್ನೂ 9 ಸಿಂಹಗಳ ಹೆಜ್ಜೆ ಗುರುತಿನ ವರದಿ ಬರಬೇಕಿದೆ ಎಂದು ಅವರು ತಿಳಿಸಿದ್ದಾರೆ.

ಅರಣ್ಯ ಇಲಾಖೆಯ ಸಿಬ್ಬಂದಿಗಳು ಹತ್ಯೆ ಮಾಡಿರುವ ಸಿಂಹವನ್ನು ಪತ್ತೆ ಹಚ್ಚಲು ಹರಸಾಹಸ ಪಡುತ್ತಿದ್ದು, ಸಿಂಹಗಳ ವರ್ತನೆಯಲ್ಲಾಗಿರುವ ಬದಲಾವಣೆಗಳನ್ನೂ ಸಹ ಅವರು ಅಧ್ಯಯನ ಮಾಡುತ್ತಿದ್ದಾರೆ ಎಂದು ವನ್ಯಜೀವಿ ತಜ್ಞರು ತಿಳಿಸಿದ್ದಾರೆ.

Comments are closed.