ರಾಷ್ಟ್ರೀಯ

ಕಾರ್ಯಕಾರಿಣಿ ಸಭೆ, ಮುರಳಿ ಮನೋಹರ ಜೋಷಿ ನಿರ್ಲಕ್ಷ್ಯ

Pinterest LinkedIn Tumblr

muಅಲಹಾಬಾದ್: ಭಾರತೀಯ ಜನತಾ ಪಾರ್ಟಿಯ ಆಧಾರ ಸ್ಥಂಭಗಳಲ್ಲಿ ಒಬ್ಬರಾದ ಹಿರಿಯ ನಾಯಕ ಮುರಳಿ ಮನೋಹರ ಜೋಷಿ ಅವರಿಗೆ ಬಿಜೆಪಿ ಏರ್ಪಡಿಸಿದ ಎರಡು ದಿನಗಳ ಕಾರ್ಯಕಾರಿಣಿ ಸಭೆಗೆ ಆಮಂತ್ರಣ ನೀಡಿಲ್ವಂತೆ!

ಹೌದು, ಭಾನುವಾರ ಆರಂಭವಾದ ಈ ಕಾರ್ಯಕಾರಿಣಿ ಸಭೆಯಲ್ಲಿ ದೇಶದ ಬೇರೆ ಬೇರೆ ಭಾಗದಿಂದ ಸುಮಾರು 300 ನಾಯಕರು ಜಮಾಯಿಸಿದ್ದಾರೆ. ಮುಂದಿನ ವರ್ಷ ನಡೆಯಲಿರುವ ಪಂಚರಾಜ್ಯ ವಿಧಾನ ಸಭೆ ಚುನಾವಣೆೆ ಹಿನ್ನ್ನೆಲೆಯಲ್ಲಿ ಪಕ್ಷ ಅಧಿಕಾರದ ಚುಕ್ಕಾಣಿ ಹಿಡಿಯಲು ಅನುಸರಿಸಬೇಕಾದ ತಂತ್ರಗಳನ್ನು ಸಿದ್ಧ ಪಡಿಸಲು ಈಗಿನಿಂದಲೇ ರಾಷ್ಟ್ರೀಯ ನಾಯಕರು ಯೋಜನೆ ರೂಪಿಸುತ್ತಿದ್ದಾರೆ. ಆದರೆ ಮೂರು ಬಾರಿ ಸಂಸತ್ತಿಗೆ ಈ ಕ್ಷೇತ್ರದಿಂದಲೇ ನಾಮನಿರ್ದೇಶಿತರಾಗಿದ್ದ ಮುರಳಿ ಮನೋಹರ ಜೋಷಿ ಅವರಿಗೆ ಬಿಜೆಪಿ ಆಮಂತ್ರಣ ನೀಡದಿರುವುದು ಇದೀಗ ಚರ್ಚೆಗೆ ಎಡೆಮಾಡಿಕೊಟ್ಟಿದೆ.

ಅಟಲ್ ಬಿಹಾರಿ ವಾಜಪೇಯಿ ಹಾಗೂ ಅಡ್ವಾಣಿ ಜತೆಗೆ ಜೋಶಿ ಅವರು ಪಕ್ಷ ಸಂಘಟನಾ ಕಾರ್ಯ ಕೈಗೊಂಡಿದ್ದಾರೆ. ಆದರೆ ಇಂಥಹ ಹಿರಿಯ ಮುಖಂಡನಿಗೆ ಆಮಂತ್ರಣ ನೀಡದಿರುವುದು ಖೇದಕರ ಎಂದು ಬಿಜೆಪಿ ಕಾರ್ಯಕರ್ತರು ವಿಷಾದ ವ್ಯಕ್ತಪಡಿಸಿದ್ದಾರೆ. ಪೋಸ್ಟರ್ಗಳಲ್ಲಿ ಸಹ ವಾಜಪೇಯಿ ಹಾಗೂ ಅಡ್ವಾಣಿ ಅವರ ಚಿತ್ರವನ್ನು ಮುದ್ರಿಸಲಾಗಿದ್ದು, ಜೋಷಿ ಅವರು ಮರೆಯಾಗಿದ್ದಾರೆ. ಬಿಜೆಪಿಯ ಈ ಕ್ರಮವನ್ನು ಕಾಂಗ್ರೆಸ್ ಸೇರಿದಂತೆ ಹಲವು ಪಕ್ಷಗಳು ಟೀಕಿಸಿವೆ. ಅಷ್ಟೇ ಅಲ್ಲ ಸ್ವತಃ ಜೋಷಿ ಅವರೇ ಬೇಸರ ವ್ಯಕ್ತಪಡಿಸಿದ್ದಾರೆ ಎಂದು ಬಿಜೆಪಿ ಮೂಲಗಳು ತಿಳಿಸಿವೆ.

Comments are closed.