ರಾಷ್ಟ್ರೀಯ

ದೆಹಲಿ ವಿಧಾನಸಭೆಯ ಉಪಸಭಾಪತಿಯಾಗಿ ರಾಖಿ ಬಿರ್ಲಾ ಆಯ್ಕೆ

Pinterest LinkedIn Tumblr

zzz

ನವದೆಹಲಿ: ಆಮ್ ಆದ್ಮಿ ಪಕ್ಷದ ನಾಯಕಿ ರಾಖಿ ಬಿರ್ಲಾಗೆ ಇಂದು ವಿಶಿಷ್ಠ ಜನ್ಮದಿನದ ಉಡುಗೊರೆ ದೊರೆತಿದೆ. ಬಿರ್ಲಾ ದೆಹಲಿ ವಿಧಾನಸಭೆಯ ಉಪಸಭಾಪತಿಯಾಗಿ ಆಯ್ಕೆಯಾಗಿದ್ದಾರೆ.

ರಾಖಿ ಬಿರ್ಲಾ ಅವರನ್ನು ಉಪಸಭಾಪತಿಯಾಗಿಸುವ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಪ್ರಸ್ತಾವನೆಯನ್ನು ಉಪಮುಖ್ಯಮಂತ್ರಿ ಮನೀಷ್ ಸಿಸೋಡಿಯಾ ಅನುಮೋದಿಸಿದ್ದಾರೆ. ಸದನದಲ್ಲಿ ಆಪ್ ಪಕ್ಷಕ್ಕೆ ಬಹುಮತವಿರುವುದರಿಂದ ಧ್ವನಿ ಮತದ ಮೂಲಕ ಅಂಗೀಕರಿಸಲಾಗಿದೆ.

ಕಳೆದ ವಾರ ಆಮ್ ಆದ್ಮಿ ಪಕ್ಷಕ್ಕೆ ರಾಜೀನಾಮೆ ನೀಡಿದ್ದ ಬಂದನಾ ಕುಮಾರಿ ಸ್ಥಾನಕ್ಕೆ ರಾಖಿ ಬಿರ್ಲಾ ಆಯ್ಕೆಯಾಗಿದ್ದಾರೆ.

Comments are closed.