ರಾಷ್ಟ್ರೀಯ

ಸೂರ್ಯ ನಮಸ್ಕಾರ, ಓಂ ಕಡ್ಡಾಯ ಇಲ್ಲ

Pinterest LinkedIn Tumblr

suryaನವದೆಹಲಿ (ಪಿಟಿಐ): ಈ ವರ್ಷದ ಯೋಗ ದಿನಾಚರಣೆ ಕಾರ್ಯಕ್ರಮದಲ್ಲಿ ಸೂರ್ಯ ನಮಸ್ಕಾರ ಆಸನ ಮತ್ತು ಓಂ ಮಂತ್ರ ಪಠಣ ಕಡ್ಡಾಯ ಇಲ್ಲ ಎಂದು ಕೇಂದ್ರ ಆಯುಷ್ ಖಾತೆ ಸಚಿವ ಶ್ರೀಪಾದ್ ನಾಯ್ಕ್ ಹೇಳಿದ್ದಾರೆ.

ಕಳೆದ ವರ್ಷದ ಯೋಗ ದಿನಾಚರಣೆ ಕಾರ್ಯಕ್ರಮದಲ್ಲಿ ಸೂರ್ಯ ನಮಸ್ಕಾರ ಇರಲಿಲ್ಲ. ಇದು ಕಷ್ಟದ ಆಸನವಾಗಿದೆ. ಅಲ್ಲದೇ, ಕೇವಲ 45 ನಿಮಿಷಗಳಲ್ಲಿ ಈ ಆಸನ ಮಾಡಲು ಸಾಧ್ಯವಿಲ್ಲ ಎಂದು ಅವರು ಹೇಳಿದರು.

ಸೂರ್ಯ ನಮಸ್ಕಾರ ಮಾಡುವ ಬಗ್ಗೆ ಮುಸ್ಲಿಂ ಸಮುದಾಯದವರಿಂದ ಆಕ್ಷೇಪಗಳು ಕೇಳಿ ಬಂದಿದ್ದವು ಹೀಗಾಗಿ ಇದನ್ನು ಕೈಬಿಡಲಾಗಿದೆ ಎಂದು ತಿಳಿಸಿದ್ದಾರೆ.

ಯೋಗ ದಿನಾಚರಣೆಯಲ್ಲಿ ‘ಓಂ’ ಮಂತ್ರ ಹೇಳುವ ಬಗ್ಗೆಯೂ ಆಕ್ಷೇಪಗಳು ಕೇಳಿ ಬಂದಿದ್ದವು. ಹೀಗಾಗಿ ಅದನ್ನು ಕಡ್ಡಾಯ ಮಾಡಿಲ್ಲ ಎಂದು ಹೇಳಿದ್ದಾರೆ.

ಆಯುಷ್‌ ಇಲಾಖೆಯು ಈ ವರ್ಷದ ಅಂತರರಾಷ್ಟ್ರೀಯ ಯೋಗ ದಿನಾಚರಣೆಯ ನೋಡಲ್ ಸಂಸ್ಥೆಯಾಗಿದೆ ಎಂದು ನಾಯ್ಕ್‌ ಹೇಳಿದ್ದಾರೆ.

Comments are closed.