ರಾಷ್ಟ್ರೀಯ

ದೈಹಿಕ ಶಿಕ್ಷಣದಲ್ಲಿ ಯೋಗ ಸೇರಿಸಲು ಸುತ್ತೋಲೆ

Pinterest LinkedIn Tumblr

yoನವದೆಹಲಿ (ಪಿಟಿಐ): ಆರರಿಂದ ಹತ್ತನೇ ತರಗತಿಯ ದೈಹಿಕ ಶಿಕ್ಷಣ ವಿಭಾಗದಲ್ಲಿ ಯೋಗವನ್ನು ಸೇರಿಸಲಾಗಿದೆ. ಆದರೆ ಇದನ್ನು ಕಡ್ಡಾಯಗೊಳಿಸಿಲ್ಲ ಎಂದು ಆಯುಷ್ ಇಲಾಖೆ ಅಧಿಕಾರಿಗಳು ಹೇಳಿದ್ದಾರೆ.

ಈ ಸಂಬಂಧ ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವರು ಎಲ್ಲಾ ಶಾಲೆಗಳಿಗೆ ಸುತ್ತೋಲೆ ಹೊರಡಿಸಿದ್ದಾರೆ. ಹಲವು ಶಾಲೆಗಳಲ್ಲಿ ಈಗಾಗಲೇ ಯೋಗವನ್ನು ದೈಹಿಕ ಶಿಕ್ಷಣ ವಿಭಾಗದಲ್ಲಿ ಸೇರಿಸಲಾಗಿದೆ. ಉಳಿದ ಶಾಲೆಗಳಲ್ಲಿ ಈ ಪ್ರಕ್ರಿಯೆ ನಡೆಯುತ್ತಿದೆ ಎಂದು ಕೇಂದ್ರ ಆಯುಷ್‌ ಸಚಿವ ಶ್ರೀಪಾದ್ ನಾಯ್ಕ್‌ ಹೇಳಿದ್ದಾರೆ.

ಒತ್ತಡದ ಜೀವನ ಶೈಲಿಯಿಂದಾಗಿ ಜನರು ಆರೋಗ್ಯ ಸಂಬಂಧಿ ಕಾಯಿಲೆಯಿಂದ ಬಳಲುತ್ತಾರೆ. ಮಾನಸಿಕ ಒತ್ತಡ ಸೇರಿದಂತೆ ಅನೇಕ ಕಾಯಿಲೆಗಳಿಗೆ ಯೋಗ ಒಂದೇ ಪರಿಹಾರ ಎಂದು ನಾಯ್ಕ್‌ ಹೇಳಿದರು.

ಈ ಬಾರಿಯ ಅಂತರರಾಷ್ಟ್ರೀಯ ಯೋಗ ದಿನಾಚರಣೆಗೆ ಆಯುಷ್‌ ಇಲಾಖೆ ಎಷ್ಟು ವೆಚ್ಚ ಮಾಡುತ್ತಿದೆ ಎಂಬ ಪ್ರಶ್ನೆಗೆ ಉತ್ತರಿಸಿದ ಇಲಾಖೆಯ ಕಾರ್ಯದರ್ಶಿ ಅಜಿತ್ ಶರಣ್, ‘ಪ್ರತಿ ಇಲಾಖೆ ಸಹ ಹಣ ವೆಚ್ಚ ಮಾಡುತ್ತದೆ. ಆಯುಷ್ ಇಲಾಖೆಯಿಂದ ಈ ಬಾರಿ ₹ 15 ಕೋಟಿ ವೆಚ್ಚ ಮಾಡಲಾಗುತ್ತಿದೆ’ ಎಂದರು.

Comments are closed.