ಮನೋರಂಜನೆ

ನಟ ಜಾನ್ ಅಬ್ರಾಹಂ ದಾಂಪತ್ಯದಲ್ಲಿ ಬಿರುಕು ! ಪತ್ನಿ ಪ್ರಿಯಾಗೆ ಡಿವೋರ್ಸ್ ಕೊಡ್ತಾರಾ ಜಾನ್?

Pinterest LinkedIn Tumblr

John-Abraham-rubbishes-divorce-rumours

ಇನ್ನೇನು ನಟ ಅಥವಾ ನಟಿಯೊಬ್ಬರ ಸಿನಿಮಾ ತೆರೆಕಾಣುತ್ತಿದೆ ಎಂದಾಗ, ಅವರ ಕುರಿತು ಇಲ್ಲಸಲ್ಲದ ಗಾಸಿಪ್ ಹುಟ್ಟುವುದು ಸಹಜ. ಈ ಹಿಂದೆ ಅಂಥದ್ದೆಲ್ಲ ಬಾಲಿವುಡ್ನಲ್ಲಿ ನಡೆದುಹೋಗಿದೆ. ರಣಬೀರ್ ಕಪೂರ್ ಅವರ ಸಿನಿಮಾಗಳು ರಿಲೀಸ್ ಆಗುವಾಗೆಲ್ಲ, ಅವರ ಮತ್ತು ಕತ್ರಿನಾ ಕೈಫ್ ಕುರಿತು ಸೃಷ್ಟಿಯಾಗಿದ್ದ ವದಂತಿಗಳಿಗೆ ಲೆಕ್ಕವೇ ಇಲ್ಲ! ಇದೀಗ ಅಂಥದ್ದೇ ಜಾಲಕ್ಕೆ ಸಿಕ್ಕಿರುವುದು ನಟ ಜಾನ್ ಅಬ್ರಾಹಂ.

ಹೌದು, ಜಾನ್ ಮತ್ತು ಅವರ ಪತ್ನಿ ಪ್ರಿಯಾ ಅವರ ಮಧ್ಯೆ ಎಲ್ಲವು ಸರಿಯಿಲ್ಲ. ಸದ್ಯದಲ್ಲೇ ಅವರು ಡಿವೋರ್ಸ್ಗೆ ಅರ್ಜಿ ಹಾಕಲಿದ್ದಾರೆ ಎಂಬ ವದಂತಿ ದಟ್ಟವಾಗಿ ಹಬ್ಬಿದೆ!! ಒಂದರ ಹಿಂದೊಂದು ಸಿನಿಮಾಗಳಲ್ಲಿ ಜಾನ್ ಬಿಜಿಯಾಗಿದ್ದಾರೆ. ಅವರ ಪತ್ನಿ ಪ್ರಿಯಾ ಅಮೆರಿಕದಲ್ಲಿ ಬ್ಯಾಂಕ್ ಉದ್ಯೋಗಿಯಾಗಿದ್ದಾರೆ.

ಹೀಗಾಗಿ, ಕೆಲಸದ ಒತ್ತಡದಿಂದ ಇಬ್ಬರ ನಡುವೆ ಅಂತರ ಹೆಚ್ಚಾಗುತ್ತಿದೆ. ಅದ್ದರಿಂದ ಇಬ್ಬರು ವಿಚ್ಛೇದನ ಪಡೆಯಲು ಮುಂದಾಗಿದ್ದಾರೆ ಎನ್ನುತ್ತವೆ ಮೂಲಗಳು. ಆದರೆ ‘ಇದ್ಯಾವುದನ್ನು ನಂಬಬೇಡಿ, ಇದೆಲ್ಲ ಬರೀ ವದಂತಿ’ ಎಂದು ತಕ್ಷಣವೇ ಪ್ರತಿಕ್ರಿಯೆ ನೀಡಿದ್ದಾರೆ ಜಾನ್. ಜುಲೈನಲ್ಲಿ ಜಾನ್ ನಟನೆಯ ‘ಡಿಶೂಂ’ ಚಿತ್ರ ರಿಲೀಸ್ಗೆ ರೆಡಿಯಾಗಿದೆ. ಅದರ ಸಲುವಾಗಿಯೇ ಈ ಥರದ್ದೊಂದು ಸುದ್ದಿ ಹುಟ್ಟಿಕೊಂಡಿರುವ ಸಾಧ್ಯತೆಗಳಿವೆ.

‘ಕೆಲಸವಿಲ್ಲದವರು ಈ ರೀತಿ ಸುದ್ದಿ ಹಬ್ಬಿಸಿದ್ದಾರೆ. ಪ್ರತಿ ಬಾರಿಯೂ ನಾನು ಎಲ್ಲದಕ್ಕೂ ಉತ್ತರಿಸಲು ಸಾಧ್ಯವಿಲ್ಲ. ಸಿನಿಮಾ ಬಿಡುಗಡೆಯ ಸಂದರ್ಭದಲ್ಲಿ ಪ್ರಚಾರ ಮಾಡಬೇಕು ಎಂಬುದು ಅನಿವಾರ್ಯ. ಹಾಗಂತ, ಈ ರೀತಿಯ ಪ್ರಚಾರದ ಅವಶ್ಯಕತೆ ನನಗಿಲ್ಲ. ನನ್ನ ವೈಯಕ್ತಿಕ ಬದುಕಿನಲ್ಲಿ ಯಾವುದೇ ಸಮಸ್ಯೆ ಇಲ್ಲ’ ಎಂದು ಕಡ್ಡಿ ತುಂಡುಮಾಡಿದಂತೆ ನುಡಿದಿದ್ದಾರೆ ಜಾನ್.

Comments are closed.