ಮನೋರಂಜನೆ

1999ರಲ್ಲಿ ದ್ರಾವಿಡ್ -ಗಂಗೂಲಿ ನಿರ್ಮಿಸಿದ್ದ ದಾಖಲೆ ಮುರಿದು ಹಾಕಿದ ಕೌಂಟಿ ಕ್ರಿಕೆಟ್ ವೀರರು !

Pinterest LinkedIn Tumblr

dravid

ಲಂಡನ್: 1999ರಲ್ಲಿ ಭಾರತದ ರಾಹುಲ್ ದ್ರಾವಿಡ್ ಮತ್ತು ಸೌರವ್ ಗಂಗೂಲಿ ನಿರ್ಮಿಸಿದ್ದ ದಾಖಲೆಯೊಂದು ಕೌಂಟಿ ಕ್ರಿಕೆಟ್ ನಲ್ಲಿ ಪತನವಾಗಿದ್ದು, ನಾಟಿಂಗ್ ಹ್ಯಾಮ್ಯ್ ಶೈರ್ ನ ಕೌಂಟಿ ಕ್ರಿಕೆಟ್ ಆಟಗಾರರು 50 ಓವರ್ ಪಂದ್ಯ ಅತ್ಯಧಿಕ ರನ್ ಗಳ ದಾಖಲೆ ಜೊತೆಯಾಟವಾಡಿದ್ದಾರೆ.

ರಾಯಲ್ ಲಂಡನ್ ಏಕದಿನ ಕ್ರಿಕೆಟ್ ಟೂರ್ನಿ ನಿಮಿತ್ತ ಟ್ರೆಂಟ್ ಬ್ರಿಡ್ಜ್ ನಲ್ಲಿ ನಾರ್ಥ ಹ್ಯಾಂಪ್ಟನ್ ಶೈರ್ ತಂಡ ವಿರುದ್ಧದ ಪಂದ್ಯದಲ್ಲಿ ನಾಟಿಂಗ್ ಹ್ಯಾಮ್ಯ್ ಶೈರ್ ತಂಡದ ಆಟಗಾರರಾದ ಮೈಕೆಲ್ ಲಂಬ್ ಹಾಗೂ ರಿಕಿ ವೆಸೆಲ್ಸ್ ಈ ಸಾಧನೆ ಮಾಡಿದ್ದಾರೆ. ಈ ಜೋಡಿ ಬರೋಬ್ಬರಿ 342 ರನ್ ಗಳ ಜೊತೆಯಾಟವಾಡಿದ್ದು, 50 ಓವರ್ ಗಳ ಯಾವುದೇ ಮಾದರಿ ಕ್ರಿಕೆಟ್ ಟೂರ್ನಿಯಲ್ಲಿ ಇದ್ದು ಅತ್ಯಧಿಕ ಜೊತೆಯಾಟವಾಗಿದೆ. ಈ ಹಿಂದೆ 1999ರಲ್ಲಿ ವಿಶ್ವಕಪ್ ಟೂರ್ನಿಯಲ್ಲಿ ಶ್ರೀಲಂಕಾ ವಿರುದ್ಧದ ಪಂದ್ಯದಲ್ಲಿ ಭಾರತದ ದಿ ವಾಲ್ ಖ್ಯಾತಿಯ ರಾಹುಲ್ ದ್ರಾವಿಡ್ ಮತ್ತು ಸೌರವ್ ಗಂಗೂಲಿ ಜೋಡಿ 318 ರನ್ ಗಳ ಬೃಹತ್ ಜೊತೆಯಾಟ ಆಡಿತ್ತು.

50 ಓವರ್ ಗಳ ಪಂದ್ಯದಲ್ಲಿ ಇದೇ ಈ ವರೆಗಿನ ಅತ್ಯಧಿಕ ರನ್ ಗಳ ಜೊತೆಯಾಟ ವೆನಿಸಿಕೊಂಡಿತ್ತು. ಆದರೆ ಮೈಕೆಲ್ ಲಂಬ್ ಹಾಗೂ ರಿಕಿ ವೆಸೆಲ್ಸ್ ಜೋಡಿ 17 ವರ್ಷಗಳ ಹಿಂದಿನ ಈ ದಾಖಲೆಯನ್ನು ಮುರಿದಿದ್ದು, ಮೊದಲ ಸ್ಥಾನಕ್ಕೇರಿದೆ.

ಅತ್ಯಧಿಕ ರನ್ ಗಳಿಕೆಯಲ್ಲಿ 2ನೇ ಸ್ಥಾನದಲ್ಲಿ ನಾಟಿಂಗ್ ಹ್ಯಾಮ್ಯ್ ಶೈರ್
ಇನ್ನು ಮೈಕೆಲ್ ಲಂಬ್ ಹಾಗೂ ರಿಕಿ ವೆಸೆಲ್ಸ್ ಅವರ ಅಮೋಘ ಬ್ಯಾಟಿಂಗ್ ಸಾಧನೆಯಿಂದಾಗಿ ಅತ್ಯಧಿಕ ತಂಡದ ಮೊತ್ತದ ಪಟ್ಟಿಯಲ್ಲಿ ನಾಟಿಂಗ್ ಹ್ಯಾಮ್ಯ್ ಶೈರ್ 2ನೇ ಸ್ಥಾನದಲ್ಲಿದ್ದು, ಈ ಪಂದ್ಯದಲ್ಲಿ ನಾಟಿಂಗ್ ಹ್ಯಾಮ್ಯ್ ಶೈರ್ ನಿಗದಿತ 50 ಓವರ್ ಗಳಲ್ಲಿ 8 ವಿಕೆಟ್ ನಷ್ಟಕ್ಕೆ 8.90 ರ ಸರಾಸರಿಯಲ್ಲಿ 445 ರನ್ ಪೇರಿಸಿದೆ. ಇದು ಈ ವರೆಗಿನ 2ನೇ ಅತ್ಯಧಿಕ ರನ್ ಗಳಿಕೆಯಾಗಿದೆ. ಮೊದಲ ಸ್ಥಾನದಲ್ಲಿ ಸರ್ರೆ ತಂಡವಿದ್ದು, 2007ರಲ್ಲಿ ಓವಲ್ ನಲ್ಲಿ ಗ್ಲಾಸೆಷ್ಟರ್ ಶೈರ್ ತಂಡದ ವಿರುದ್ಧ 496 ರನ್ ಗಳಿಸಿತ್ತು. ಇದೇ ಇಲ್ಲಿಯವರೆಗಿನ ಅತ್ಯಧಿಕ ತಂಡದ ರನ್ ಗಳಿಕೆಯಾಗಿದೆ.

ಕೂದಲೆಳೆ ಅಂತರದಲ್ಲಿ ಮತ್ತೊಂದು ದಾಖಲೆ ಮಿಸ್
ಇದೇ ಪಂದ್ಯದಲ್ಲಿ ಈ ಜೋಡಿ ಏನಾದರು ಮತ್ತೆ 25 ರನ್ ಗಳನ್ನು ಸೇರಿಸಿದ್ದರೆ, ಈ ಜೋಡಿಯಿಂದ ಮತ್ತೊಂದು ವಿಶ್ವದಾಖಲೆ ನಿರ್ಮಾಣವಾಗುತ್ತಿತ್ತು. ದಕ್ಷಿಣ ಆಫ್ರಿಕಾದ ದೇಶೀ ಕ್ರಿಕೆಟ್ ನಲ್ಲಿ ಮಾರ್ನೆ ವಾನ್ ಮತ್ತು ಕ್ಯಮರಾನ್ ಡೆಲ್ಪೋರ್ಟ್ ಜೋಡಿ ಮೊದಲ ವಿಕೆಟ್ ಜೊತೆಯಾಟದಲ್ಲಿ 367 ರನ್ ಸಿಡಿಸಿತ್ತು. ಇದು ಈ ವರೆಗಿನ ಅತ್ಯಧಿಕ ಮೊದಲ ವಿಕೆಟ್ ಜೊತೆಯಾಟವಾಗಿದೆ.

Comments are closed.