ರಾಷ್ಟ್ರೀಯ

ಪ್ರಧಾನಿಯಾಗುವ ಹಗಲು ಕನಸು ಕಂಡಿಲ್ಲ: ನಿತೀಶ್‌

Pinterest LinkedIn Tumblr

mಪಟ್ನಾ(ಪಿಟಿಐ): ಮುಂದಿನ ಲೋಕಸಭಾ ಸಾರ್ವತ್ರಿಕ ಚುನಾವಣೆಯ ಹಿನ್ನಲೆ ಬಿಜೆಪಿಯೇತರ ಪ್ರಧಾನಿ ಅಭ್ಯರ್ಥಿಯಾಗಿ ಸ್ಪರ್ಧಿಸುವಂತಹ ಯಾವುದೇ ಹಗಲು ಕನಸು ಕಂಡಿಲ್ಲ ಎಂದು ಬಿಹಾರ ಮುಖ್ಯಮಂತ್ರಿ ನಿತೀಶ್‌ ಕುಮಾರ್‌ ಹೇಳಿದ್ದಾರೆ.

ಸೋಮವಾರ ‘ಸೂಪರ್‌ 30’ ಜೀವನ ಚರಿತ್ರೆ ಪುಸ್ತಕ ಬಿಡುಗಡೆ ಕಾರ್ಯಕ್ರಮದಲ್ಲಿ ಮಾತನಾಡಿದ ನಿತೀಶ್‌ ಕುಮಾರ್‌, ‘ನನ್ನ ಜೀವಮಾನದ ಬಯಕೆಯಂತೆ ಒಮ್ಮೆಯಾದರೂ ಬಿಹಾರ ಪ್ರತಿನಿಧಿಸುವ ಸಚಿವ, ಸಂಸದ ಹಾಗೂ ರಾಜ್ಯದ ಮುಖ್ಯಮಂತ್ರಿ ಆಗಬೇಕು ಎಂದು ನನ್ನ ಕನಸು ನನಸಾಗಿದೆ’ ಎಂದರು.

‘ನನಗೆ ರಾಷ್ಟ್ರದ ಪ್ರಧಾನಿಯಾಗುವ ಆಸೆ ಇಲ್ಲ. ಆದರೆ, ಬಿಜೆಪಿ ನಾಯಕರು ನನ್ನನ್ನು ತೇಜೋವಧೆ ಮಾಡಲು ಯತ್ನಿಸುತ್ತಿದ್ದಾರೆ ಎಂದು ಆರೋಪಿಸಿದರು.

ಆರ್‌ಜೆಡಿ ಮುಖ್ಯಸ್ಥ ಲಾಲೂ ಪ್ರಸಾದ್‌, ಎನ್‌ಸಿಪಿ ನಾಯಕ ಶರದ್‌ ಪವಾರ್‌ ಹಾಗೂ ಜಾರ್ಖಂಡ್‌ನ ಮಾಜಿ ಮುಂಖ್ಯಮಂತ್ರಿ ಬಾಬುಲಾಲ್‌ ಮರಾಂಡಿ ಅವರು ಪ್ರಧಾನಿ ಹುದ್ದೆಗೆ ಸಾಮರ್ಥದ ಅಭ್ಯರ್ಥಿಗಳು ಎಂದು ಹೇಳಿದರು.

ಸಮಾಜದಲ್ಲಿ ಅವಕಾಶ ವಂಚಿತ ವಿದ್ಯಾರ್ಥಿಗಳ ಅಭಿವೃದ್ಧಿಗೆ ಅನಂದ ಕುಮಾರ್‌ ಅವರು ಹಮ್ಮಿಕೊಂಡ ಕಾರ್ಯಕ್ರಮಗಳ ಬಗ್ಗೆ ನಿತೀಶ್‌ ಕುಮಾರ್‌ ಶ್ಲಾಂಘಿಸಿದರು. ನಿತೀಶ್‌ ಅವರ ರಾಜಕೀಯ ಜೀವನದ ಏಳು ಬೀಳು ಚಿತ್ರಣ ಬಿಂಬಿಸುವಂತಹ ಪುಸ್ತಕ ರಚನೆ ಕುರಿತು ಸಂತಸ ವ್ಯಕ್ತಪಡಿಸಿದರು.
ನಾನು ಚುನಾವಣೆಗಳಲ್ಲಿ ಸೋತಾಗ ತಾಳ್ಮೆ ಕಳೆದುಕೊಂಡಿರಲಿಲ್ಲ. ಜತೆಗೆ, ಕಠಿಣ ಪರಿಶ್ರಮವನ್ನು ಮರೆತಿರಲಿಲ್ಲ ಎಂದರು.

ಶಾಲಾ ವಿದ್ಯಾರ್ಥಿಗಳಿಗೆ ಉಚಿತ ಬೈಸಿಕಲ್‌ ವಿತರಿಸುವ ಯೋಜನೆ ಕುರಿತು ಮಾತನಾಡಿದ ನಿತೀಶ್‌, ಪರಿಶಿಷ್ಟ ಜಾತಿ, ಪಂಗಡದ ವಿದ್ಯಾರ್ಥಿನಿಯರಿಗೂ ಬೈಸಿಕಲ್‌ ವಿತರಿಸಲಾಗುತ್ತಿದೆ ಎಂದರು. 2006ರಿಂದ ಇದುವರೆಗೆ ಶೇ 12.5ರಷ್ಟು ಯೋಜನೆ ಯಶಸ್ವಿಯಾಗಿದೆ ಎಂದರು.

Comments are closed.