ರಾಷ್ಟ್ರೀಯ

ದೆಹಲಿಯಲ್ಲಿ ಸಂಪೂರ್ಣ ಜಂಗಲ್ ರಾಜ್: ಕೇಜ್ರಿವಾಲ್

Pinterest LinkedIn Tumblr

Kejriwalನವದೆಹಲಿ (ಐಎಎನ್ ಎಸ್): ದೆಹಲಿಯಲ್ಲಿ ಸಂಪೂರ್ಣ ಜಂಗಲ್ ರಾಜ್ ಇದೆ. ಇದಕ್ಕೆಲ್ಲಾ ನರೇಂದ್ರ ಮೋದಿ ಮತ್ತು ಲೆಫ್ಟಿನೆಂಟ್ ಗವರ್ನರ್ ನಜೀಬ್ ಜಂಗ್ ಅವರೇ ಕಾರಣ ಎಂದು ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಆರೋಪಿಸಿದ್ದಾರೆ.

ದೆಹಲಿಯಲ್ಲಿ ಸಂಪೂರ್ಣ ಜಂಗಲ್ ರಾಜ್ ಇದೆ. ಲೆಫ್ಟಿನೆಂಟ್ ಜನರಲ್ ಮತ್ತು ಮೋದಿ ವಿಫಲವಾಗಿದ್ದಾರೆ. ಇಲ್ಲಿ ಕಾನೂನು ಮತ್ತು ವ್ಯವಸ್ಥೆ ಉಲ್ಲಂಘಿಸುವವರನ್ನು ನಿಯಂತ್ರಿಸಲು ಇವರೇನು ಮಾಡಿದ್ದಾರೆ? ಎಂದು ಕೇಜ್ರಿವಾಲ್ ಟ್ವಿಟರ್ ನಲ್ಲಿ ಪ್ರಶ್ನಿಸಿದ್ದಾರೆ.

ದೆಹಲಿಯ ಬ್ರಹ್ಮಪುರಿಯಲ್ಲಿ 50 ವರ್ಷ ವಯಸ್ಸಿನ ಮಹಿಳೆ ಮತ್ತು ಆಕೆಯ ಇಬ್ಬರು ಹೆಣ್ಣುಮಕ್ಕಳು ಹತ್ಯೆಯಾದ ಪ್ರಕರಣ ಮತ್ತು ಮಂಗೋಲ್ ಪುರಿ ಪ್ರದೇಶದಲ್ಲಿ 11 ವರ್ಷದ ಬಾಲಕನೊಬ್ಬ ನಾಲ್ಕು ವರ್ಷದ ಬಾಲಕಿಯನ್ನು ಅತ್ಯಾಚಾರಗೈದಿದ್ದಾನೆ ಎಂಬ ಆರೋಪದ ಸುದ್ದಿಯ ಬೆನ್ನಲ್ಲೇ ಕೇಜ್ರಿವಾಲ್ ಈ ಟ್ವೀಟ್ ಮಾಡಿದ್ದಾರೆ.

Comments are closed.