ಅಂತರಾಷ್ಟ್ರೀಯ

ನರೇಂದ್ರ ಮೋದಿಗೆ ಆಫ್ಘಾನಿಸ್ಥಾನದ ಉನ್ನತ ನಾಗರಿಕ ಪ್ರಶಸ್ತಿಯಾದ ‘ಆಮೀರ್ ಅಮಾನುಲ್ಲಾ ಖಾನ್’ ಪ್ರಶಸ್ತಿ ನೀಡಿ ಗೌರವಿಸಿದ ಅಧ್ಯಕ್ಷ ಅಶ್ರಫ್ ಘನಿ

Pinterest LinkedIn Tumblr

modi1

ಹೆರಾತ್: ಭಾರತ-ಆಫ್ಘಾನಿಸ್ಥಾನದ ಸ್ನೇಹದ ಪ್ರತೀಕವಾಗಿ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಅಫ್ಘನ್ ಅಧ್ಯಕ್ಷ ಅಶ್ರಫ್ ಘನಿ ಆಫ್ಘಾನಿಸ್ಥಾನದ ಉನ್ನತ ನಾಗರಿಕ ಪ್ರಶಸ್ತಿಯಾದ ‘ಆಮೀರ್ ಅಮಾನುಲ್ಲಾ ಖಾನ್’ ಪ್ರಶಸ್ತಿಯನ್ನು ನೀಡಿ ಗೌರವಿಸಿದ್ದಾರೆ.

ಭಾರತದ ಸಹಯೋಗದೊಂದಿಗೆ ನಿರ್ಮಾಣಗೊಂಡಿರುವ ‘ಮೈತ್ರಿ ಅಣೆಕಟ್ಟು’ ಉದ್ಘಾಟನೆ ಮಾಡಿದ ನಂತರ ಮೋದಿ ಅವರಿಗೆ ಪ್ರಶಸ್ತಿ ಪ್ರದಾನ ಮಾಡಲಾಯಿತು.

modi

ಒಂದು ನಿಜವಾದ ಸಹೋದರತ್ವದ ಗೌರವ ಪ್ರದಾನ ಇದಾಗಿದೆ. ಪ್ರಧಾನಿ ಮೋದಿಯವರಿಗೆ ಅಮೀರ್ ಅಮನುಲ್ಲಾ ಖಾನ್ ಪ್ರಶಸ್ತಿ ನೀಡಿ ಗೌರವಿಸಲಾಗಿದೆ ಎಂದು ವಿದೇಶಾಂಗ ವ್ಯವಹಾರಗಳ ವಕ್ತಾರ ವಿಕಾಸ್ ಸ್ವರೂಪ್ ಫೋಟೋದೊಂದಿಗೆ ಟ್ವೀಟ್ ಮಾಡಿದ್ದಾರೆ.

Comments are closed.