ಅಂತರಾಷ್ಟ್ರೀಯ

ಬಾಕ್ಸಿಂಗ್ ದಂತಕಥೆ ಮೊಹಮ್ಮದ್ ಅಲಿಯ ಜೀವನವೇ ಒಂದು ಸಾಹಸಗಾಥೆ !

Pinterest LinkedIn Tumblr

Mohammad Ali

ಬಾಕ್ಸಿಂಗ್ ದಂತಕಥೆ ವಿಶ್ವವಿಖ್ಯಾತ ಬಾಕ್ಸರ್ ಮೊಹಮ್ಮದ್ ಅಲಿ ಇನಿಲ್ಲ. ಪಾರ್ಕಿನ್ಸನ್ ಕಾಯಿಲೆಗೆ ತುತ್ತಾಗಿದ್ದ ಅವರು ಶುಕ್ರವಾರ ಕೊನೆಯುಸಿರೆಳೆದಿದ್ದಾರೆ.

ಮೊಹಮ್ಮದ್ ಅಲಿ ಅವರು ಜೀವನವೇ ಒಂದು ಸಾಹಸಗಾಥೆಯಾಗಿದೆ. ಅಲಿ ಅವರು ಕೇವಲ ಬಾಕ್ಸರ್ ಅಷ್ಟೇ ಆಗಿರಲಿಲ್ಲ. ನಾಗರಿಕ ಹಕ್ಕುಗಳಿಗಾಗಿ ಹೋರಾಡುವ ಮೂಲಕ ಶ್ರೇಷ್ಠ ವ್ಯಕ್ತಿಯಾಗಿದ್ದರು, ನಾಗರಿಕ ಹಕ್ಕುಗಳ ಬಗ್ಗೆ ಅವರಿಗಿದ್ದ ಕಾಳಜಿ ಅವರ ಜನಪ್ರಿಯತೆಯನ್ನು ಮತ್ತಷ್ಟು ಹೆಚ್ಚಿಸಿತ್ತು. ಬಾಕ್ಸಿಂಗ್ ಜೀವನದಿಂದ ಹೊರಬಂದ ನಂತರ ಮೊಹಮ್ಮದ್ ಅಲಿ ಅವರ ಆರೋಗ್ಯ ಸಮಸ್ಯೆ ಉಲ್ಭಣಗೊಳ್ಳಲು ಆರಂಭಿಸಿತ್ತು. ಇದರಂತೆ ಹಲವಾರು ಬಾರಿ ಆಸ್ಪತ್ರೆಗೆ ದಾಖಲಾಗಿ, ಚೇರಿಸಿಕೊಂಡಿದ್ದರು.

ಅಲಿ ಅವರು 1960 ರಿಂದ 1980ರವರೆಗೂ ಅಂದರೆ 2 ದಶಕಗಳ ಬಾಕ್ಸಿಂಗ್ ನಲ್ಲಿ ಮಿಂಚಿದ್ದರು. ಈ ಎರಡು ದಶಕಗಳ ವೃತ್ತಿಪರ ಬಾಕ್ಸಿಂಗ್ ನಲ್ಲಿ 61 ಪಂದ್ಯಗಳನ್ನು ಆಡಿರುವ ಅಲಿಯವರು ಇದರಲ್ಲಿ 56 ಪಂದ್ಯಗಳಲ್ಲಿ ಜಯ ಸಾಧಿಸಿದ್ದಾರೆ. ಅಂದರೆ ಕೇವಲ 5 ಪಂದ್ಯಗಳಲ್ಲಿ ಮಾತ್ರ ಸೋಲನ್ನು ಅನುಭವಿಸಿದ್ದಾರೆ. ಅಲಿ ಬಾಕ್ಸಿಂಗ್ ನಲ್ಲಿ ಚಾಂಪಿಯನ್ನು ಪಡೆದುಕೊಂಡು ಕೇವಲ ತಾವಷ್ಟೇ ಜನಪ್ರಿಯತೆಯನ್ನು ಗಳಿಸಿಲ್ಲ, ಅವರ ಪ್ರತಿಭೆ ಮೂಲಕ ಬಾಕ್ಸಿಂಗ್ ಕ್ರೀಡೆಯನ್ನೂ ಮೇಲ್ಜರ್ಜೆಗೆ ಕರೆದೊಯ್ದ ಕೀರ್ತಿ ಅವರಿಗಿದೆ.

Mohammad Ali1

1960ರ ರೋಮ್ ಒಲಿಂಪಿಕ್ಸ್ ಲೈಟ್ ಹೆವಿವೇಟ್ ವಿಭಾಗದಲ್ಲಿ ಚಿನ್ನದ ಪದಕ ಹಾಗೂ 3 ಬಾರಿ ವಿಶ್ವ ಹೆವಿವೇಟ್ ಚಾಂಪಿಯನ್ ಶಿಪ್ (1964, 1974, 1978) ಅಲಿ ಅವರ ಮುಡಿ ಅಲಂಕರಿಸಿದ ವಿಶ್ವ ಶ್ರೇಷ್ಟ ಗರಿಯಾಗಿದೆ. ಅಲಿ ಅವರ ಸಾಹಸಗಾಥೆಯ ಪಂದ್ಯಾವಳಿಗಳ ಕೆಲ ವಿವರಗಳು ಇಲ್ಲಿವೆ…

ಪಂದ್ಯ: ಅಲಿ-ಸೋನಿ ಲಿಸ್ಟನ್
ದಿನಾಂಕ: 25-2-1964
ಸ್ಥಳ: ಮಿಯಾಮಿ
ಡಬ್ಲ್ಯೂಬಿಎ/ಡಬ್ಲ್ಯೂಬಿಸಿ ಹೆವಿವೇಟ್ ಚಾಂಪಿಯನ್ ಶಿಪ್

ಇದು ಅಲಿ ಅವರ ಮೊದಲ ಪಂದ್ಯಾವಳಿಯಾಗಿದ್ದು, ಈ ಪಂದ್ಯವೇ ಅವರ ಸಾಧನೆಗೆ ಮೊದಲ ಹೆಜ್ಜೆಯಾಗಿತ್ತು. ಡಬ್ಲ್ಯೂಬಿಎ/ಡಬ್ಲ್ಯೂಬಿಸಿ ಹೆವಿವೇಟ್ ಚಾಂಪಿಯನ್ ಶಿಪ್ ಗೆಲ್ಲುವ ಮೂಲಕ ಆರಂಭವಾದ ಅವರ ಹಾದಿ, ಸುಮಾರು 10 ತಿಂಗಳ ಕಾಲ ಜಯದ ಹಾದಿ ಮುಂದುವರೆದಿತ್ತು,
ಮೊಹಮ್ಮದ್ ಅಲಿ ಅವರು ಕ್ಲೇ ಎಂಬ ಹೆಸರಿನಲ್ಲೂ ಕರೆಯಲಾಗುತ್ತಿತ್ತು.

12ನೇ ವಯಸ್ಸಿನಿಂದಲೇ ಕಟ್ನಮನ್ ಚಕ್ ಬೊಡಕ್ ನಲ್ಲಿ ಬಾಕ್ಸಿಂಗ್ ತರಬೇತಿ ಪದೆಡ ಕ್ಲೇ, ನೋಡ ನೋಡುತ್ತಿದ್ದಂತೆ ಯಶಸ್ಸಿನ ಹಾದಿಯಲ್ಲಿ ಸಾಗತೊಡಗಿದ್ದರು. ಆರಂಭದಲ್ಲೇ ಕ್ಲೇ ಅವರು 6 ಬಾರಿ ಕೆಂಟುಕಿ ಗೋಲ್ಡನ್ ಗ್ಲೌವ್ಸ್, 2 ರಾಷ್ಟ್ರೀಯ ಗೋಲ್ಡನ್ ಗ್ಲೌವ್ಸ್, ಅಮೇಚುರ್ ಅಥ್ಲೇಟಿಕ್ ಯೂನಿಯನ್ ರಾಷ್ಟ್ರೀಯ ಪ್ರಶಸ್ತಿಯನ್ನು ಪಡೆದುಕೊಂಡಿದ್ದರು. ಅಮೇಚುರ್ ಬಾಕ್ಸಿಂಗ್ ನಲ್ಲಿ 100 ಜಯ ದಾಖಲಿಸಿದ ಸಾಧನೆ ಇವರದ್ದಾಗಿದೆ.

ಪಂದ್ಯ: ಅಲಿ-ಲಿಸ್ಟನ್
ದಿನಾಂಕ: 25-5-1965
ಸ್ಥಳ: ಸೆಂಟ್ರಲ್ ಮೈನೆ ಯೂತ್ ಸೆಂಟರ್, ಲೆವಿಸ್ಟನ್, ಮೈನೆ
ಡಬ್ಲ್ಯೂಬಿಸಿ ಹೆವಿವೇಟ್ ಚಾಂಪಿಯನ್ ಶಿಪ್

ಈ ಪಂದ್ಯಾವಳಿಗಳನ್ನಾಡುವಾಗ ಇಬ್ಬರು ಅಲಿ-ಲಿಸ್ಟನ್ ಕ್ರೀಡಾಗಾರರು ವಿವಾದದಲ್ಲಿ ಸಿಲುಕಿಕೊಂಡಿದ್ದರು. ಅಲಿ ಅವರು ಕರಿಯ ಜನಾಂಗದ ಪರವಾಗಿದ್ದ ನೇಷನ್ ಆಫ್ ಇಸ್ಲಾಮ್ ಆಂದೋಲನದಿಂದ ಪ್ರೇರಿತರಾಗಿ ಮುಂದೆ ಕ್ಲೇ ಬದಲಾಗಿ ಮೊಹಮ್ಮದ್ ಅಲಿಯೆಂದು ತಮ್ಮ ಹೆಸರನ್ನು ಬದಲಾಯಿಸಿಕೊಂಡರು.

ಕಾಸ್ಸಿಯಸ್ ಕ್ಲೇ ತನ್ನ ಗುಲಾಮ ಹೆಸರು ಎಂದು ಹೇಳುತ್ತಿದ್ದ ಅವರು ಆ ಹೆಸರನ್ನು ಹಿಡಿದು ಯಾರೂ ಕರೆಯದಂತೆ ಹೇಳುತ್ತಿದ್ದರು.ಇನ್ನು ಲಿಸ್ಟನ್ ಕೂಡ ತಮ್ಮ ವಾಹನ ಚಾಲನೆ ಮಾಡುವಾಗ ಅತಿಯಾದ ವೇಗ, ನಿರ್ಲಕ್ಷ್ಯದಂತಹ ತಮ್ಮ ಕೆಟ್ಟ ವರ್ತನೆ ಮೂಲಕ ಬಂಧನಕ್ಕೊಳಗಾಗಿ ಕೆಲವು ಪ್ರಕರಣಘಳನ್ನು ಎದುರಿಸುತ್ತಿದ್ದರು. ಒಂದರ ಹಿಂದೆ ಒಂದರಂತೆ ಸಮಸ್ಯೆಗಳು ಎದುರಾದ ಹಿನ್ನೆಲೆಯಲ್ಲಿ ಪಂದ್ಯವನ್ನು ಮುಂದೂಡಲಾಗಿತ್ತು.

ಪಂದ್ಯ: ಅಲಿ-ಕ್ಲೀವ್ಲ್ಯಾಂಡ್ ವಿಲಿಯಮ್ಸ್
ದಿನಾಂಕ: 14-11-1966
ಸ್ಥಳ: ಆಸ್ಟ್ರೋಡೂಮ್, ಹೂಸ್ಟನ್ಟ

ಪಂದ್ಯಾವಳಿ ವೇಳೆ ದೈಹಿಕವಾಗಿ ಗಾಯಗಳಾದರೂ ಅಲಿ ಅವರು ಕ್ಲೀವ್ಲ್ಯಾಂಡ್ ವಿಲಿಯಮ್ಸ್ ವಿರುದ್ಧ ಈ ಪಂದ್ಯದಲ್ಲಿ ಜಯ ಸಾಧಿಸಿದ್ದರು.

ಪಂದ್ಯ: ಜೋ ಫ್ರೇಜಿಯರ್
ದಿನಾಂಕ: 8-3-1971
ಸ್ಥಳ: ಮ್ಯಾಡಿಸನ್ ಸ್ಕ್ವೇರ್ ಗಾರ್ಡನ್, ನ್ಯೂಯಾರ್ಕ್
ಡಬ್ಲ್ಯೂಬಿಎ/ಡಬ್ಲ್ಯೂಬಿಸಿ ಹೆವಿವೇಟ್ ಚಾಂಪಿಯನ್ ಶಿಪ್

ಮ್ಯಾಡಿಸನ್ ಸ್ಕ್ವೇರ್ ಗಾರ್ಡನ್ ನಲ್ಲಿ ನಡೆದ ಈ ಪಂದ್ಯಾವಳಿ ಸಾಕಷ್ಟು ರೋಚಕತೆಯನ್ನುಂಟು ಮಾಡಿತ್ತು, ಇಬ್ಬರು ಆಟಗಾರರ ಸಾಕಷ್ಟು ಸೆಣಸಾಟ ನಡೆಸಿದರು, ಅಂತಿಮದಲ್ಲಿ ಪಂದ್ಯ ಡ್ರಾ ಆಗುವ ಮೂಲಕ ಅಂತ್ಯ ಗೊಂಡಿತ್ತು.

ಪಂದ್ಯ: ಅಲಿ-ಕೆನ್ ನಾರ್ಟನ್
ದಿನಾಂಕ: 10-9-1973
ಸ್ಥಳ: ದಿ ಫೋರಂ, ಇಂಗಲ್ವುಡ್, ಕ್ಯಾಲಿಫೋರ್ನಿಯಾ

ಗೆಲ್ಲುವ ವಿಶ್ವಾಸದಲ್ಲೇ ವೇದಿಕೆ ಹತ್ತಿದ್ದ ಅಲಿ ಅವರು, ಆರಂಭದಲ್ಲಿ ಉತ್ತಮ ರೀತಿಯಲ್ಲಿ ಆಡಿದ್ದರು. ಆದರೆ ನಾರ್ಟನ್ ನ ಎದುರೇಟು ಬಲವಾದ್ದರಿಂದ ಈ ಪಂದ್ಯದಲ್ಲಿ ಸೋಲು ಅನುಭವಿಸಿದ್ದರು. ಪಂದ್ಯದಲ್ಲಿ ಅಲಿ ಅವರು ತೀವ್ರವಾಗಿ ಗಾಯಗೊಂಡಿದ್ದರು. ತಮ್ಮ ಆರೋಗ್ಯದ ಕುರಿತು ಅಂದು ಹೇಳಿಕೆ ನೀಡಿದ್ದ ಅವರು, ನಾನು ಆರೋಗ್ಯವಾಗಿದ್ದೇನೆ. ಆದರೆ, ನನ್ನ ವಯಸ್ಸಿನಿಂದಾಗಿ ಎಂದಿಗಿಂತ ಇಂದು ಕೊಂಚ ಬಳಲಿದ್ದೇನೆ ಎನಿಸುತ್ತಿದೆ. ಒಂದು ವೇಳೆ ಹಿಂದಿನಂತೆ ಶಕ್ತಿಯಿದ್ದಿದ್ದರೆ ಖಂಡಿತವಾಗಿಯೂ ಗೆಲುವು ಸಾಧಿಸುತ್ತಿದ್ದೆ ಎಂದಿದ್ದರು.

ಪಂದ್ಯ: ಅಲಿ-ಫ್ರೇಜಿಯರ್
ದಿನಾಂಕ: 1-10-1975
ಸ್ಥಳ: ಆರಾನೆಟಾ ಕೊಲಿಸಿಯಂ, ಕ್ವೆಜಾನ್ ನಗರ, ಫಿಲಿಪ್ಪೈನ್ಸ್
ಡಬ್ಲ್ಯೂಬಿಸಿ ಹೆವಿವೇಟ್ ಚಾಂಪಿಯನ್ ಶಿಪ್

ಈ ಪಂದ್ಯದಲ್ಲಿ ಅಲಿ ಅವರು ಫ್ರೇಜಿಯರ್ ವಿರುದ್ಧ ಗೆಲುವು ಸಾಧಿಸುವ ಮೂಲಕ ಮತ್ತೆ ತಮ್ಮ ಗೆಲುವಿನ ಹಾದಿಯನ್ನು ಹಿಡಿದಿದ್ದರು.

ಪಂದ್ಯ: ಅಲಿ-ನಾರ್ಟನ್
ದಿನಾಂಕ: 28-9-1976
ಸ್ಥಳ: ಯಾಂಕೀ ಕ್ರೀಡಾಂಗಣ, ನ್ಯೂಯಾರ್ಕ್
ಡಬ್ಲ್ಯೂಬಿಸಿ ಹೆವಿವೇಟ್ ಚಾಂಪಿಯನ್ ಶಿಪ್

ಈ ಪಂದ್ಯ ಭಾರಿ ವಿವಾದಕ್ಕೆ ಒಳಗಾಗಿದ್ದ ಪಂದ್ಯವೆಂದೇ ಹೆಸರು ಮಾಡಿದೆ. 1976ರಲ್ಲಿ ವಿವಾದಕ್ಕೆ ಒಳಗಾಗಿದ್ದ ಈ ಹೋರಾಟದಲ್ಲಿ ಅಲಿ ಅವರು ನಾರ್ಟನ್ ವಿರುದ್ಧ ವಿಜಯ ಸಾಧಿಸಿದ್ದರು.

ಪಂದ್ಯ: ಅಲಿ- ಲಿಯೋನ್ ಸ್ಪಿಂಕ್ಸ್ ನಡುವಿನ ಹೆವಿ ವೇಟ್ ಚಾಂಪಿಯನ್ ಶಿಪ್ ಪಂದ್ಯ
ದಿನಾಂಕ: ಸೆಪ್ಟೆಂಬರ್ 15 , 1978
ಸ್ಥಳ: ಸೂಪರ್ಡೋಮ್, ನ್ಯೂ ಆರ್ಲಿಯನ್ಸ್

1978 ರಲ್ಲಿ ಈ ಪಂದ್ಯ ನಡೆಯಬೇಕಾದರೆ ಮೊಹಮ್ಮದ್ ಅಲಿ ಕಳೆದ ಐದು ವರ್ಷಗಳಲ್ಲಿ ಒಂದೇ ಒಂದು ಪಂದ್ಯವನ್ನು ಸೋತಿರಲಿಲ್ಲ ಹಾಗೂ ಫೋರ್ಮನ್, ಫ್ರೇಜಿಯರ್ ನನ್ನು ಸೋಲಿಸಿದ್ದರು. ಈ ಪಂದ್ಯದಲ್ಲಿ ಅತಿ ಹೆಚ್ಚು ಅಂದರೆ 7 ,000 ಜನರು ಪಂದ್ಯವನ್ನು ವೀಕ್ಷಿಸಲು ಆಗಮಿಸಿದ್ದರು .

ಅಂತಿಮ ಸುತ್ತಿನ ಸುತ್ತುಗಳ ಹೋರಾಟದಲ್ಲಿ ಮೊಹಮ್ಮದ್ ಅಲಿ ಗೆಲುವು ಚಂಚಲವಾಗಿತ್ತಾದರೂ, ಪಂದ್ಯದ ಕೊನೆಯಲ್ಲಿ ಸ್ಪಿಂಕ್ಸ್ ವಿರುದ್ಧ ಅಲಿ ವಿಜಯ ಗಳಿಸಿದರು. ಅಲಿ ಈಗಲೂ ನನ್ನ ಅಚ್ಚುಮೆಚ್ಚಿನ ಬಾಕ್ಸರ್ ಎಂದು ಪಂದ್ಯದ ಅಂತ್ಯದಲ್ಲಿ ಸ್ಪಿಂಕ್ಸ್ ಹೇಳಿದ್ದು ವಿಶೇಷವಾಗಿತ್ತು.

ಪಂದ್ಯ: ಅಲಿ- ಲ್ಯಾರಿ ಹೋಮ್ಸ್ (ಡಬ್ಲ್ಯೂ ಬಿಸಿ ಹೆವಿ ವೇಟ್ ಚಾಂಪಿಯನ್ ಶಿಪ್)
ದಿನಾಂಕ: ಅಕ್ಟೋಬರ್ 2, 1980
ಸ್ಥಳ: ಸೀಸರ್ಸ್ ಅರಮನೆ, ಲಾಸ್ ವೇಗಾಸ್

1979 ರ ಜೂನ್ ನಲ್ಲಿ ಮೊಹಮ್ಮದ್ ಅಲಿ ನಿವೃತ್ತರದು. ಆದರೆ ಕೆಲವೇ ತಿಂಗಳಲ್ಲಿ ವಾಪಸ್ಸಾದ ಮೊಹಮ್ಮದ್ ಅಲಿ, 1980 ರ ಮಾರ್ಚ್ ನಲ್ಲಿ ಮೈಕ್ ವೀವರ್ ಅವರ ವಿರುದ್ಧ ಸೋಲು ಕಾಣಬೇಕಾಯಿತು. ಇದಾದ ನಂತರ ಏಪ್ರಿಲ್ ನಲ್ಲಿ ಹೋಮ್ಸ್, ಜೂನ್ ನಲ್ಲಿ ಡಬ್ಲ್ಯೂ ಬಿಎ ಚಾಂಪಿಯನ್ ಜಾನ್ ಟೇಟ್ ನ್ನು ಎದುರಿಸಬೇಕಾಯಿತು.

ಈ ವೇಳೆಗೆ ಅಲಿಗೆ ಅನಾರೋಗ್ಯ( ಥೈರಾಯ್ಡ್ ಅಸಮತೋಲನ) ಕಾಣಿಸಿಕೊಂಡಿದ್ದ ಕಾರಣ ಥೈರಾಲರ್ ಎಂಬ ಡ್ರಗ್(ಔಷಧವನ್ನು) ಪಡೆಯುತ್ತಿದ್ದರು.ಇದರಿಂದಾಗಿ ಬಾಕ್ಸಿಂಗ್ ಹೋರಾಟದಲ್ಲಿ ನಿಶಕ್ತಿಯೂ ಉಂಟಾಗುತ್ತಿತ್ತು. ಪರಿಣಾಮವಾಗಿ ಅಲಿ ಹೋಮ್ಸ್ ವಿರುದ್ಧ ಸೋಲಬೇಕಾಯಿತು.

ಸೋಲು: ಫೆಬ್ರವರಿ 1978ರಲ್ಲಿ ಅಲಿ ಅವರು ತಮಗಿಂತ 12 ವರ್ಷದ ಕಿರಿಯನಾಗಿದ್ದ ಹಾಗೂ 1976 ಒಲಿಂಪಿಕ್ಸ್ ಲೈಟ್ ವೈಟ್ ಚಾಂಪಿಯನ್ ಆಗಿದ್ದ ಲಿಯೋನ್ ಸ್ಟಿಂಕ್ಸ್ ವಿರುದ್ಧ ಸೋಲನ್ನು ಅನುಭವಿಸಿದ್ದರು. 8 ತಿಂಗಳ ನಂತರ ಮೂರನೇ ಬಾರಿ ವಿಶ್ವ ಚಾಂಪಿಯನ್ ಕಿರೀಟವನ್ನು ತಮ್ಮದಾಗಿಸಿಕೊಂಡಿದ್ದರು.

Comments are closed.