ರಾಷ್ಟ್ರೀಯ

ಮೊಹಮ್ಮದ್ ಅಲಿ ಕೇರಳ ರಾಜ್ಯದ ಒಬ್ಬ ಪ್ರಮುಖ ಕ್ರೀಡಾಪಟು ಎಂದು ಹೇಳಿ ನಗೆಪಾಟಲಿಗೀಡಾದ ಕ್ರೀಡಾ ಸಚಿವ ಜಯರಾಜನ್ !

Pinterest LinkedIn Tumblr

jayarajan-muhammad-ali

ತಿರುವನಂತಪುರ: ಕೇರಳದ ಕ್ರೀಡಾ ಸಚಿವ ಇ.ಪಿ.ಜಯರಾಜನ್ , ಬಾಕ್ಸಿಂಗ್ ದಂತಕಥೆ ಮೊಹಮ್ಮದ್ ಅಲಿಯವರ ಬಗ್ಗೆ ಸಂತಾಪ ಸೂಚಿಸುವಾಗ ಅಜ್ಞಾನ ಪ್ರದರ್ಶಿಸಿ ಸಾಮಾಜಿಕ ಮಾಧ್ಯಮದಲ್ಲಿ ನಗೆಪಾಟಲಿಗೀಡಾಗಿದ್ದಾರೆ.

ಸಿಪಿಎಂ ಹಿರಿಯ ಮುಖಂಡರಾಗಿರುವ ಜಯರಾಜನ್ ಇತ್ತೀಚೆಗೆ ಕೇರಳ ರಾಜ್ಯದ ಕ್ರೀಡಾ ಸಚಿವರಾಗಿ ಅಧಿಕಾರ ಸ್ವೀಕರಿಸಿಕೊಂಡಿದ್ದರು. ಮೊಹಮ್ಮದ್ ಅಲಿಯವರ ನಿಧನದ ಬಗ್ಗೆ ಸುದ್ದಿ ವಾಹಿನಿಯವರು ಅವರ ಪ್ರತಿಕ್ರಿಯೆ ಕೇಳಿದಾಗ ಉತ್ತರಿಸಿದ ಸಚಿವರು, ಈಗ ಸ್ವಲ್ಪ ಹೊತ್ತಿಗೆ ಮುಂಚೆಯಷ್ಟೇ ಮೊಹಮ್ಮದ್ ಅಲಿಯವರು ಅಮೆರಿಕದಲ್ಲಿ ನಿಧನ ಹೊಂದಿದರು ಎಂದು ಕೇಳಲ್ಪಟ್ಟೆ. ಅಲಿಯವರು ಕೇರಳ ರಾಜ್ಯದ ಒಬ್ಬ ಪ್ರಮುಖ ಕ್ರೀಡಾಪಟುವಾಗಿದ್ದು, ಚಿನ್ನದ ಪದಕ ಗಳಿಸುವ ಮೂಲಕ ರಾಜ್ಯಕ್ಕೆ ಹೆಮ್ಮೆಯನ್ನು ತಂದಿದ್ದರು ಎಂದು ಹೇಳುವ ಮೂಲಕ ತಮ್ಮ ಸಂಪೂರ್ಣ ಅಜ್ಞಾನವನ್ನು ಪ್ರದರ್ಶಿಸಿದರು.

ಅವರು ಮುಂದುವರೆದು ಮಾತನಾಡಿದ ಆಡಿಯೋವನ್ನು ಪ್ರಸಾರ ಮಾಡದೆ ಸಚಿವರು ಮತ್ತಷ್ಟು ಮುಜುಗರಕ್ಕೀಡಾಗುವುದನ್ನು ತಪ್ಪಿಸಿದರು. ಆದರೆ ಸಾಮಾಜಿಕ ಮಾಧ್ಯಮದಲ್ಲಿ ಸಚಿವರು ವ್ಯಾಪಕ ಟೀಕೆ, ಖಂಡನೆಗೆ ಗುರಿಯಾಗಿದ್ದಾರೆ. ನ್ಯೂಸ್ ರಿಪೋರ್ಟರ್ ಮಧ್ಯಪ್ರವೇಶಿಸಿರದಿದ್ದಿದ್ದರೆ ಸಚಿವರು ಮೊಹಮ್ಮದ್ ಅಲಿ ಪುತ್ರಿಗೆ ಪರಿಹಾರ ಮತ್ತು ಸರ್ಕಾರಿ ಉದ್ಯೋಗ ನೀಡುವುದಾಗಿ ಘೋಷಿಸುತ್ತಿದ್ದರು ಎಂದು ಒಬ್ಬರು ಅಪಹಾಸ್ಯ ಮಾಡಿದ್ದಾರೆ.

Comments are closed.