ರಾಷ್ಟ್ರೀಯ

ಅಮಿತ್ ಶಾ ದಲಿತರ ಮನೆಯಲ್ಲಿ ಮಾಡಿರುವ ಭೋಜನವನ್ನು ಸಿದ್ಧಪಡಿಸಿದವರು ದಲಿತರೋ ಅಲ್ಲವೋ ಎಂಬ ಹುಡುಕಾಟದಲ್ಲಿದ್ದಾರೆ ಮಾಯಾವತಿ

Pinterest LinkedIn Tumblr

amith shah

ಲಖನೌ: ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ ವಾರಾಣಸಿಯಲ್ಲಿ ದಲಿತ ಕುಟುಂಬದ ಜೊತೆ ಭೋಜನ ಸವಿದ ಘಟನೆಯನ್ನು ಬಿಎಸ್ ಪಿ ನಾಯಕಿ ಮಾಯಾವತಿ ಗಂಭೀರವಾಗಿ ಸ್ವೀಕರಿಸಿದ್ದಾರೆ.

ಅಮಿತ್ ಶಾ ದಲಿತ ಕುಟುಂಬದವರೊಂದಿಗೆ ಭೋಜನ ಸವಿದಿದ್ದಾರಾದರೂ, ಅದರ ಬಗ್ಗೆ ಅನುಮಾನ ಹೊಂದಿರುವ ಮಾಯಾವತಿ, ಅಮಿತ್ ಶಾ ಸೇವಿಸಿದ ಆಹಾರವನ್ನು ಸಿದ್ಧಪಡಿಸಿದವರು ದಲಿತರೋ ಅಲ್ಲವೋ ಎಂಬುದನ್ನು ಪತ್ತೆಮಾಡುವಂತೆ ಪಕ್ಷದ ಕಾರ್ಯಕರ್ತರಿಗೆ, ನಾಯಕರಿಗೆ ಸೂಚನೆ ನೀಡಿದ್ದಾರೆ.

ಟೈಮ್ಸ್ ಅಫ್ ಇಂಡಿಯಾದ ವರದಿ ಪ್ರಕಾರ ಅಮಿತ್ ಶಾ ಸೇವಿಸಿದ ಆಹಾರವನ್ನು ತಯಾರು ಮಾಡಿದವರು ದಲಿತರಲ್ಲ ಬದಲಾಗಿ ಮೇಲ್ವರ್ಗಕ್ಕೆ ಸೇರಿದವರೆಂದು ಮಾಯಾವತಿ ಶಂಕಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಅಮಿತ್ ಶಾ ಅವರಿಗೆ ಅಡುಗೆ ಮಾಡಿದವರಿಗಾಗಿ ಹುಡುಕುತ್ತಿದ್ದಾರೆ ಎಂಬ ವರದಿ ಪ್ರಕಟವಾಗಿದೆ. ಅಮಿತ್ ಶಾ ಅವರೊಂದಿಗೆ ವಾರಾಣಸಿ ದಲಿತ ಕುಟುಂಬದ ಮನೆಗೆ 250 ಜನರು ಭೇಟಿ ನೀಡಿದ್ದರು. ಈ ಪೈಕಿ 50 ಜನರು ಮಾತ್ರವೇ ಭೋಜನ ಸವಿದರು. ಇದು ಅವರ ಜಾತೀಯತೆ ಪರವಾದ ಮನಸ್ಥಿತಿಯನ್ನು ತೋರಿಸುತ್ತದೆ ಎಂದು ಬಿಎಸ್ ಪಿ ನಾಯಕ ಡಾ. ರಾಮ್ ಕುಮಾರ್ ಕುರೀಲ್ ಆರೋಪಿಸಿದ್ದಾರೆ.

Comments are closed.