ರಾಷ್ಟ್ರೀಯ

ಕಿಡ್ನಿ ಮಾರಾಟ ಜಾಲ; 6 ಮಂದಿ ಬಂಧನ

Pinterest LinkedIn Tumblr

kidney1

ನವದೆಹಲಿ: ರಾಜಧಾನಿ ದೆಹಲಿಯಲ್ಲಿ ಕಿಡ್ನಿ ಮಾರಾಟ ಜಾಲವೊಂದನ್ನು ಪೊಲೀಸರು ಬೇಧಿಸಿದ್ದು, 6 ಮಂದಿ ಆರೋಪಿಗಳನ್ನು ಬಂಧನಕ್ಕೊಳಪಡಿಸಲಾಗಿದೆ.

ಆಗ್ನೇಯ ದೆಹಲಿಯ ಖಾಸಗಿ ಆಸ್ಪತ್ರೆಯೊಂದರಲ್ಲಿ ಅಕ್ರಮವಾಗಿ ಕಿಡ್ನಿ ಮಾರಾಟ ಮಾಡಲಾಗುತ್ತಿದೆ ಎಂಬ ಮಾಹಿತಿ ತಿಳಿಯುತ್ತಿದ್ದಂತೆ ವಿಶೇಷ ಕಾರ್ಯಾಚರಣೆ ನಡೆಸಿರುವ ದೆಹಲಿ ಪೊಲೀಸರು ಇದೀಗ ಇಬ್ಬರು ಮಹಿಳೆಯರು ಸೇರಿದಂತೆ 6 ಮಂದಿ ಆರೋಪಿಗಳನ್ನು ಬಂಧಿಸಿದ್ದಾರೆಂದು ತಿಳಿದುಬಂದಿದೆ.

ಕಳ್ಳಲು ಹಳ್ಳಿಜನರನ್ನು ಪುಸಲಾಯಿಸಿ ನಗರಕ್ಕೆ ಕರೆತಂದು, ಪ್ರಖ್ಯಾತ ಆಸ್ಪತ್ರೆಗಳಲ್ಲಿ ಅವರ ಕಿಡ್ನಿ ತೆಗೆಸಿ ಮಾರಾಟ ಮಾಡುವಲ್ಲಿ ಸಕ್ರಿಯರಾಗುತ್ತಿದ್ದರು. ಅಕ್ರಮ ಕಿಡ್ನಿ ಮಾರಾಟ ಜಾಲ ತಂಡಲ್ಲಿ ಇಬ್ಬರು ಮಹಿಳೆಯರು ಈ ಕೃತ್ಯದಲ್ಲಿ ಭಾಗಿಯಾಗಿದ್ದಾರೆಂದು ಪೊಲೀಸರು ತಿಳಿಸಿದ್ದಾರೆ

ಬಂಧಿತ ಆಱೋಪಿಗಳು ಈ ವರೆಗೂ 4 ಮಂದಿ ಕಿಡ್ನಿಯನ್ನು ಮಾರಾಟ ಮಾಡಿರುವುದಾಗಿ ದಾಖಲೆಗಳು ದೊರೆತಿದ್ದು, ತನಿಖೆ ನಡೆಸಲಾಗುತ್ತಿದೆ ಎಂದು ಅವರು ಹೇಳಿದ್ದಾರೆ.

Comments are closed.