ಮನೋರಂಜನೆ

ಒಂದು ಕಾಲದಲ್ಲಿ ನಟಿ ಇಲಿಯಾನಗೆ ದೇಹ ಸೌಂದರ್ಯದ ಕುರಿತು ಚಿಂತೆ ಇತ್ತಂತೆ!

Pinterest LinkedIn Tumblr

ileana-d-cruz

ಮುಂಬೈ: ದಕ್ಷಿಣದ ಬೇಡಿಕೆಯ ನಟಿ ಹಾಗೂ ಸದ್ಯ ಬಾಲಿವುಡ್ನಲ್ಲಿ ತನ್ನ ನೆಲೆ ಕಂಡುಕೊಳ್ಳಲು ಯೋಚಿಸುತ್ತಿರುವ ಗೋವಾ ಮೂಲದ ಬೆಡಗಿ ಇಲಿಯಾನ ಡಿ ಕ್ರೂಸ್ಗೆ ಒಂದು ಕಾಲದಲ್ಲಿ ತನ್ನ ದೇಹ ಸೌಂದರ್ಯದ ಕುರಿತು ಚಿಂತೆ ಇತ್ತಂತೆ.

ಬರ್ಫಿ ಎಂಬ ಚಿತ್ರದ ಮೂಲಕ ಬಾಲಿವುಡ್ ಪ್ರವೇಶಿಸಿದ ಇಲಿ, ಇದಕ್ಕೂ ಮೊದಲು ದಕ್ಷಿಣ ಭಾರತದ ಚಿತ್ರಗಳಲ್ಲಿ ಬೇಡಿಕೆಯ ನಟಿಯಾಗಿದ್ದರು. ಅವರಿಗೆ ತಮ್ಮ ಮೈಮಾಟದ ಕುರಿತು ಈರ್ಷೆ ಮನೋಭಾವ ವ್ಯಕ್ತವಾಗಿತ್ತಂತೆ. ನಟಿಯಾದ ಮೇಲೆ ದೇಹ ಸೌಂದರ್ಯದ ಮೇಲೆ ಹೆಚ್ಚು ಗಮನ ಹರಿಸುವುದು ಅನಿವಾರ್ಯ, ಒಂದು ಕಾಲದಲ್ಲಿ ಅಸಾಮಾನ್ಯ ದೇಹ ಹೊಂದಿದ್ದ ನಾನು ನಿರಂತರ ಬೆವರು ಸುರಿಸುವ ಮೂಲಕ ದೇಹವನ್ನು ಸರಿಯಾದ ರೂಪಕ್ಕೆ ತಂದುಕೊಂಡೆ ಎಂದು ಇಲಿಯಾನ ಹೇಳಿದ್ದಾರೆ.

ಬಾಲಿವುಡ್ನ ನಾಲ್ಕು ಚಿತ್ರಗಳಲ್ಲಿ ನಟಿಸಿರುವ 28 ರ ಹರೆಯದ ಇಲಿಯಾನ ತಮ್ಮ ಐದನೇ ಚಿತ್ರ ರುಸ್ತುಮ್ಲ್ಲಿ ಅಕ್ಷಯ್ ಕುಮಾರ ಎದುರು ನಟಿಸಿದ್ದಾರೆ. ನಟಿಯಾದವರಿಗೆ ತಮ್ಮ ದೇಹ ಅಂಗ ಸೌಷ್ಠವ ಕಾಪಾಡಿಕೊಳ್ಳುವುದು ಬಹುಮುಖ್ಯ, ಎಲ್ಲ ಹುಡುಗಿಯರಂತೆ ನಾನೂ ಕೂಡ ಕನ್ನಡಿ ಮುಂದೆ ನಿಂತು ಸೌಂದರ್ಯ ಪರೀಕ್ಷೆ ಮಾಡಿಕೊಳ್ಳುತ್ತೇನೆ ಇದರಿಂದ ಸ್ವ ಅವಲೋಕನ ಸಾಧ್ಯ ಎಂದು ಅಭಿಪ್ರಾಯಪಟ್ಟಿದ್ದಾರೆ.

Comments are closed.