ರಾಷ್ಟ್ರೀಯ

ರಾಹುಲ್ ಗಾಂಧಿ ಕಾಂಗ್ರಸ್ ಅಧ್ಯಕ್ಷರಾಗಲು ಸೂಕ್ತ ಸಮಯ: ಓಮರ್ ಅಬ್ದುಲ್ಲಾ

Pinterest LinkedIn Tumblr

omarಜಮ್ಮು: ಕಾಂಗ್ರೆಸ್ ಪಕ್ಷದ ಉಪಾಧ್ಯಕ್ಷ ರಾಹುಲ್ ಗಾಂಧಿ ಪಕ್ಷದ ಅದ್ಯಕ್ಷರಾಗಿ ಅಧಿಕಾರ ಸ್ವೀಕರಿಸಲಿದ್ದಾರೆ ಎನ್ನುವ ವರದಿಗಳ ಬಗ್ಗೆ ಪ್ರತಿಕ್ರಿಯೆ ನೀಡಿದ ಮಾಜಿ ಮುಖ್ಯಮಂತ್ರಿ ಓಮರ್ ಅಬ್ದುಲ್ಲಾ, ರಾಹುಲ್ ಅಧ್ಯಕ್ಷರಾಗಲು ಇದು ಸೂಕ್ತ ಸಮಯವಾಗಿದೆ ಎಂದು ಹೇಳಿದ್ದಾರೆ.

ಕಳೆದ ಎರಡು ವರ್ಷಗಳಿಂದ ರಾಹುಲ್ ಗಾಂಧಿ ಕಾಂಗ್ರೆಸ್ ಪಕ್ಷದ ಅಧ್ಯಕ್ಷರಾಗಲಿದ್ದಾರೆ ಎನ್ನುವ ವರದಿಗಳು ಹರಿದಾಡುತ್ತಿದ್ದವು. ಅದೊಂದು ಜೋಕ್‌ನಂತಾಗಿತ್ತು ಎಂದು ತಿಳಿಸಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ಅಬ್ದುಲ್ಲಾ, ಬಿಜೆಪಿ ಮೊದಲ ಎರಡು ವರ್ಷದ ಅಧಿಕಾರವಧಿಯಲ್ಲಿ ಸಂಪೂರ್ಣವಾಗಿ ವೈಫಲ್ಯ ಕಂಡಿದೆ. ಜಮ್ಮು ಕಾಶ್ಮಿರದಲ್ಲಿ ಭದ್ರತಾ ವಿಚಾರ ಸೇರಿದಂತೆ ಪಾಕಿಸ್ತಾನ, ಚೀನಾ ವಿದೇಶಿ ನೀತಿಗಳಲ್ಲಿ ಸೋಲು ಕಂಡಿದೆ ಎಂದು ಆರೋಪಿಸಿದರು.

ಮೋದಿ ಸರಕಾರ ಎರಡು ವರ್ಷಗಳ ಅಧಿಕಾರವಧಿ ಮುಕ್ತಾಯಗೊಳಿಸಿದ್ದರಿಂದ ಸಂಭ್ರಮಾಚರಣೆ ಮಾಡುತ್ತಿದೆ ಎನ್ನುವ ಕುರಿತಂತೆ, ಬಿಜೆಪಿ ಜನತೆಯನ್ನು ನಂಬಿಸುವಲ್ಲಿ ಮಾಸ್ಟರ್ ಪದವಿಯನ್ನು ಪಡೆದಿದೆ ಎಂದು ಮಾಜಿ ಮುಖ್ಯಮಂತ್ರಿ ಓಮರ್ ಅಬ್ದುಲ್ಲಾ ಹೇಳಿದ್ದಾರೆ.

Comments are closed.