ರಾಷ್ಟ್ರೀಯ

ಮುಸ್ಲಿಮರನ್ನು ನಮ್ಮ ಬಡಾವಣೆಗಳಿಂದ ದೂರವಿಡಿ: ವಡೋದರಾ ಹಿಂದೂ ನಿವಾಸಿಗಳಿಂದ ನಗರಸಭೆಗೆ ಪತ್ರ

Pinterest LinkedIn Tumblr

muಅಹ್ಮದಾಬಾದ್: ಗುಜರಾತ್‌ನ ವಡೋದರಾ ನಗರದ ನಿವಾಸಿಗಳು ನಗರಸಭೆಗೆ ಪತ್ರವೊಂದನ್ನು ಬರೆದು, ಬಡಾವಣೆಯಲ್ಲಿ 300 ಮುಸ್ಲಿಂ ಕುಟುಂಬಗಳನ್ನು ಪುನರ್ ಸ್ಥಳಾಂತರ ಮಾಡುವ ಯೋಜನೆಯನ್ನು ಕೈಬಿಡುವಂತೆ ಒತ್ತಾಯಿಸಿದ್ದಾರೆ.

ವಡೋದರಾದ ನೆರೆಯ ಪ್ರದೇಶವಾದ ಕಪುರಾಯಿ ಬಡಾವಣೆಯಲ್ಲಿ 300 ಮುಸ್ಲಿಂ ನಿರಾಶ್ರಿತರಿಗೆ ಆಶ್ರಯ ಕೊಡಲು ನಗರಸಭೆ ನಿರ್ಧರಿಸಿತ್ತು ಎನ್ನಲಾಗಿದೆ.

ಏತನ್ಮಧ್ಯೆ, ನಗರಸಭೆಯ ನಿರ್ಧಾರವನ್ನು ಕಪುರಾಯಿ ನಿವಾಸಿಗಳು ತೀವ್ರವಾಗಿ ವಿರೋಧಿಸುತ್ತಿದ್ದು, ಮುಸ್ಲಿಂರಿಗೆ ಆಶ್ರಯ ನೀಡಿದಲ್ಲಿ ಶಾಂತಿಯಿಂದ ಬದುಕುತ್ತಿರುವ ನಮ್ಮ ನೆಮ್ಮದಿ ಹಾಳಾಗಲಿದೆ ಎಂದು ನಗರಸಭೆಗೆ ಪತ್ರ ಬರೆದಿದ್ದಾರೆ.

ಮುಸ್ಲಿಮರು ಪ್ರತಿನಿತ್ಯ ಅಸಭ್ಯವಾಗಿ ವರ್ತಿಸುವುದಲ್ಲದೇ ಅಶ್ಲೀಲ ಶಬ್ದಗಳ ಬಳಕೆ ಮಾಡುತ್ತಾರೆ ಎಂದು ಕಪುರಾಯಿ ನಿವಾಸಿಗಳು ಆರೋಪಿಸಿದ್ದಾರೆ.

Comments are closed.