ಮನೋರಂಜನೆ

ಬಾಲಿವುಡ್ ಖ್ಯಾತ ಹಾಸ್ಯ ನಟ ರಝಾಕ್ ಖಾನ್ ನಿಧನ

Pinterest LinkedIn Tumblr

22222

ಮುಂಬೈ: ಬಾಲಿವುಡ್ ಖ್ಯಾತ ಹಾಸ್ಯ ನಟ ಹಾಗೂ ಕಿರುತೆರೆ ಕಲಾವಿದ ರಝಾಕ್ ಖಾನ್ ಅವರು ಬುಧವಾರ ಬೆಳಗ್ಗೆ ಹೃದಯಘಾತದಿಂದ ನಿಧನರಾಗಿದ್ದಾರೆ.

100 ಹೆಚ್ಚು ಬಾಲಿವುಡ್ ಚಿತ್ರಗಳಲ್ಲಿ ಹಾಸ್ಯ ನಟರಾಗಿ ಅಭಿನಯಿಸಿದ್ದ ರಝಾಕ್ ಖಾನ್ ಅವರು ಇಂದು ತೀವ್ರ ಹೃದಯಾಘಾತದಿಂದ ನಿಧನರಾಗಿದ್ದಾರೆ ಎಂದು ಅವರ ಸಹೋದರ ಶೆಹಝದ್ ಖಾನ್ ಅವರು ಫೇಸ್ ಬುಕ್ ಮೂಲಕ ತಿಳಿಸಿದ್ದಾರೆ.

Razzak-Khan

ಇಂದು ಬೆಳಗಿನ ಜಾವ 12.30ರ ಸುಮಾರಿಗೆ ರಝಾಕ್ ಖಾನ್ ಅವರಿಗೆ ತೀವ್ರ ಹೃದಯಾಘಾತವಾಯಿತು. ಕೂಡಲೇ ಅವರನ್ನು ಬಾಂದ್ರಾದ ಹೋಲಿ ಫ್ಯಾಮಿಲಿ ಆಸ್ಪತ್ರೆಗೆ ದಾಖಲಿಸಲಾಯಿತು, ಆದರೆ ಆಸ್ಪತ್ರೆ ತಲುಪುವ ವೇಳೆಗೆ ಹಾಸ್ಯ ನಟ ಕೊನೆಯುಸಿರೆಳೆದಿರುವುದಾಗಿ ವೈದ್ಯರು ಘೋಷಿಸಿದರು.

ಕಾಮಿಡಿ ನೈಟ್ಸ್ ವಿತ್ ಕಪಿಲ್ ನಂತಹ ಹಲವು ಟಿವಿ ಶೋಗಳಲ್ಲಿ ಹಾಗೂ ಹೆಲೋ ಬ್ರದರ್, ಬಾದ್ ಶಾಹ್, ರೂಪ್ ಕೀ ರಾಣಿ ಚೋರೋ ಕಾ ರಾಜಾ, ರಾಜಾ ಹಿಂದೂಸ್ತಾನಿ, ಹಸೀನಾ ಮಾನ್ ಜಾಯೇಗಿ ಸೇರಿದಂತೆ ಹಲವು ಚಿತ್ರಗಳಲ್ಲಿ ರಝಾಕ್ ಖಾನ್ ಅವರು ಅಭಿನಯಿಸಿದ್ದರು.

Comments are closed.