ರಾಷ್ಟ್ರೀಯ

ದಾರಿ ಕೇಳಿದ ಯುವತಿಯನ್ನು ಅಪಹರಿಸಿದ ಮೂವರು ಕಾಮುಕರು ಚಲಿಸುತ್ತಿದ್ದ ಕಾರಿನಲ್ಲಿಯೇ ಸಾಮೂಹಿಕ ಅತ್ಯಾಚಾರ ನಡೆಸಿದರು

Pinterest LinkedIn Tumblr

rape

ಕೋಲ್ಕತಾ: ದಾರಿ ಕೇಳಿದ ಯುವತಿಯೊಬ್ಬಳನ್ನು ಅಪಹರಿಸಿದ ಮೂವರು ದುಷ್ಕರ್ಮಿಗಳು ಚಲಿಸುತ್ತಿದ್ದ ಕಾರಿನಲ್ಲಿಯೇ ಸಾಮೂಹಿಕ ಅತ್ಯಾಚಾರ ನಡೆಸಿದ ಘಟನೆ ಕೋಲ್ಕತಾದಲ್ಲಿ ನಡೆದಿದೆ.

ಕೋಲ್ಕತಾದ ಜನನಿಭಿಡ ಪ್ರದೇಶವಾದ ಸಾಲ್ಟ್ ಲೇಕ್ ಬಳಿ ಈ ಘಟನೆ ನಡೆದಿದ್ದು, ಇತ್ತೀಚೆಗಷ್ಟೇ ನಗರಕ್ಕೆ ಆಗಮಿಸಿದ್ದ ಯುವತಿ ಈಶಾನ್ಯ ಕೋಲ್ಕತಾದ ಬಗ್ವತಿ ಪ್ರದೇಶದಲ್ಲಿ ಉಳಿದುಕೊಂಡಿದ್ದಳು. ಸ್ಥಳೀಯ ರೆಸ್ಟೋರೆಂಟ್ ಗೆ ಹೋಗಿದ್ದ ಯುವತಿಗೆ ಅಲ್ಲಿಂದ ವಾಪಸ್ ಆಗಲು ದಾರಿ ತೋಚದೇ ಸಾಲ್ಟ್ ಲೇಕ್ ಬಳಿ ಕಾರಿನ ಬಳಿ ನಿಂತಿದ್ದ ಈ ಮೂವರನ್ನು ದಾರಿ ಕೇಳಿದ್ದಾಳೆ. ಇದನ್ನೇ ನೆಪಮಾಡಿಕೊಂಡ ದುಷ್ಕರ್ಮಿಗಳು ಆಕೆಯನ್ನು ಡ್ರಾಪ್ ಮಾಡುವುದಾಗಿ ಹೇಳಿ ಕಾರಿಗೆ ಹತ್ತಿಸಿಕೊಂಡು ಚಲಿಸುತ್ತಿದ್ದ ಕಾರಿನಲ್ಲೇ ಸಾಮೂಹಿಕವಾಗಿ ಅತ್ಯಾಚಾರ ಮಾಡಿದ್ದಾರೆ.

ಬಳಿಕ ದುಷ್ಕರ್ಮಿಗಳು ಸೆಕ್ಟರ್ V ಪ್ರದೇಶದಲ್ಲಿ ಯುವತಿಯನ್ನು ಬಿಟ್ಟು ಪರಾರಿಯಾಗಿದ್ದು, ಯುವತಿಯನ್ನು ಕಂಡ ಸ್ಥಳೀಯರು ಆಸ್ಪತ್ರೆಗೆ ದಾಖಲು ಮಾಡಿದ್ದಾರೆ. ಪ್ರಸ್ತುತ ಸೆಕ್ಷನ್ 376 ಜಿ (ಸಾಮೂಹಿಕ ಅತ್ಯಾರದ) ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡಿರುವ ಬಿಢಾನಗರ ಪೊಲೀಸರು ದುಷ್ಕರ್ಮಿಗಳಿಗಾಗಿ ಶೋಧ ನಡೆಸುತ್ತಿದ್ದಾರೆ. ಪ್ರಸ್ತುತ ಯುವತಿ ಸ್ಥಿತಿ ಸ್ಥಿರವಾಗಿದ್ದ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾಳೆ.

Comments are closed.