ಅಂತರಾಷ್ಟ್ರೀಯ

ನೀಲಿ ಚಿತ್ರಗಳ ವೀಕ್ಷಣೆ ಮಾಡುವುದರಿಂದ ನೀವು ನಿಮ್ಮ ಧರ್ಮಕ್ಕೆ ಕಟಿಬದ್ದರಾಗಿರುತ್ತೀರಿ…!

Pinterest LinkedIn Tumblr

man-looking

ನ್ಯೂಯಾರ್ಕ: ಓಕ್ಲಾಹಾಮಾ ವಿಶ್ವವಿದ್ಯಾಲಯದ ಹೊಸ ಸಂಶೋಧನೆ ಪ್ರಕಾರ ವಾರದಲ್ಲಿ ಒಂದಕ್ಕಿಂತ ಹೆಚ್ಚು ಬಾರಿ ವಾರದಲ್ಲಿ ನೀಲಿ ಚಿತ್ರಗಳ ವೀಕ್ಷಣೆ ಮಾಡುವುದರಿಂದ ನೀವು ನಿಮ್ಮ ಧರ್ಮಕ್ಕೆ ಕಟಿಬದ್ದರಾಗಿರುತ್ತೀರಿ ಎಂಬುದು ತಿಳಿದು ಬಂದಿದೆ.

6 ವರ್ಷಗಳ ಕಾಲ ವಿವಿಧ ರಾಷ್ಟ್ರಗಳ ಹಲವು ಜನಾಂಗದ ಸುಮಾರು 1,314 ಜನರನ್ನು ಸಂಶೋಧನೆಗೆ ಒಳಪಡಿಸಿ ವರದಿ ಸಿದ್ದಪಡಿಸಿದ್ದಾರೆ. ನೀಲಿ ಚಿತ್ರಗಳ ವೀಕ್ಷಣೆ ಆಂತರಿಕ ವಿಚಾರವಾದ ಮತ್ತು ವ್ಯಕ್ತಿಯ ಧಾರ್ವಿುಕತೆಗೆ ಧಕ್ಕೆ ಉಂಟು ಮಾಡುವುದರಿಂದ ಅವರಿಗೆ ತಮ್ಮೊಳಗೆ ಅಸಹ್ಯ ಭಾವ ಉತ್ಪತ್ತಿಯಾಗಿ ಧರ್ಮದ ಬಗ್ಗೆ ವಿಚಾರ ಮಾಡಲು ಮುಂದಾಗುತ್ತಾರೆ ಎಂದು ಸಂಶೋಧಕ ಸಾಮುಯೆಲ್ ಪೆರ್ರಿ ಹೇಳಿದ್ದಾರೆ.

ಒಮ್ಮೆ ನಿಮಗೆ ಧರ್ಮದ ಬಗ್ಗೆ ಒಲವು ಉಂಟಾದಾಗ ನೀಲಿ ಚಿತ್ರ ವೀಕ್ಷಣೆ ಕಡೆಗೆ ನೀವು ವಾಲುವುದನ್ನು ನಿಲ್ಲಿಸುತ್ತದೆ. ನಂತರ ನಿಮ್ಮ ಬದುಕಿನ ಆಯಾಮಗಳು ಬದಲಾವಣೆಗೊಂಡು ಧರ್ಮ ಜಾಗೃತಿ ಮೂಡುತ್ತದೆ ಎಂದು ಪೆರ್ರಿ ತಿಳಿಸಿದ್ದಾರೆ.

Comments are closed.