ರಾಷ್ಟ್ರೀಯ

ಕ್ಷಿಪಣಿ, ಹೆಲಿಕಾಪ್ಟರ್, ಸಬ್​ಮರೀನ್ ಕ್ಷೇತ್ರಕ್ಕೆ ಕಾಲಿಡಲಿದೆ ರಿಲಯನ್ಸ್

Pinterest LinkedIn Tumblr

ambani

ನವದೆಹಲಿ: ಅನಿಲ್ ಅಂಬಾನಿ ಒಡೆತನದ ರಿಲಯನ್ಸ್ ಗ್ರೂಪ್ ರಕ್ಷಣಾ ಸಾಮಗ್ರಿಗಳ ಉತ್ಪಾದನೆಗೆ ಆಸಕ್ತಿ ತೋರುತ್ತಿದ್ದು, ಮಿಲಿಟರಿ ಹೆಲಿಕಾಪ್ಟರ್, ಕ್ಷಿಪಣಿ, ಜಲಾಂತರ್ಗಾಮಿ ಮತ್ತಿತರ ಯೋಜನೆಗಳ ಟೆಂಡರ್ ಪಡೆಯಲು ಯತ್ನಿಸುತ್ತಿದೆ. ಭದ್ರತಾ ಸಾಮಗ್ರಿ ಉತ್ಪಾದನೆ ಕ್ಷೇತ್ರದಲ್ಲಿ ರಿಲಯನ್ಸ್ ಕಂಪನಿಯನ್ನು ಮುಂಚೂಣಿಗೆ ತರಲು ಅನಿಲ್ ಅಂಬಾನಿ ನಿರ್ಧರಿಸಿದ್ದು, ಈಗಾಗಲೇ 84 ಸಾವಿರ ಕೋಟಿ ರೂ. ಮೊತ್ತದ ಟೆಂಡರ್ ಪ್ರಕ್ರಿಯೆಯಲ್ಲಿ ರಿಲಯನ್ಸ್ ಭಾಗವಹಿಸಿದೆ. ದೊಡ್ಡ ಯೋಜನೆಯ ಗುತ್ತಿಗೆ ಪಡೆಯುವಲ್ಲಿ ರಿಲಯನ್ಸ್ ಇನ್ನೂ ಸಫಲವಾಗಿಲ್ಲ. ಆದರೆ ಮೇಕ್ ಇನ್ ಇಂಡಿಯಾ ಯೋಜನೆಯಡಿ ಹಲವು ರೀತಿಯ ಭದ್ರತಾ ಸಲಕರಣೆ ತಯಾರಿಸಲು ಕಂಪನಿ ಉದ್ದೇಶಿಸಿದೆ.

ಭಾರತಕ್ಕೆ ರಕ್ಷಣಾ ಸಾಮಗ್ರಿಗಳನ್ನು ಪೂರೈಸುವ ವಿದೇಶಿ ಕಂಪನಿಗಳು ಭಾರತೀಯ ಕಂಪನಿಯೊಂದರ ಜತೆ ಒಪ್ಪಂದ ಮಾಡಿಕೊಂಡು ದೇಶದಲ್ಲೇ ಉತ್ಪನ್ನ ತಯಾರಿಸಬೇಕು ಎಂದು ಇತ್ತೀಚೆಗೆ ಕೇಂದ್ರ ಸರ್ಕಾರ ನಿಯಮ ರೂಪಿಸಿದೆ. ಹೀಗಾಗಿ ವಿದೇಶಿ ಕಂಪನಿಗಳೊಂದಿಗೆ ಒಡಂಬಡಿಕೆ ಮಾಡಿಕೊಂಡು ರಿಲಯನ್ಸ್ ಕಂಪನಿ ಭಾರತದಲ್ಲಿ ರಕ್ಷಣಾ ಉತ್ಪನ್ನಗಳಾದ ಕ್ಷಿಪಣಿ, ಸಬ್ವುರಿನ್, ಹೆಲಿಕಾಪ್ಟರ್ಗಳನ್ನು ತಯಾರಿಸಲು ಉತ್ಸುಕವಾಗಿದೆ. ಮುಂದಿನ ಕೆಲ ವರ್ಷಗಳಲ್ಲಿ ರಿಲಯನ್ಸ್, ರಕ್ಷಣಾ ಪರಿಕರ ಉತ್ಪಾದನೆಯ ಪ್ರಮುಖ ಕಂಪನಿಯಾಗಿ ಹೊರಹೊಮ್ಮಲಿದೆ ಎಂದು ಕಂಪನಿಯ ಮುಖ್ಯ ಕಾರ್ಯನಿರ್ವಾಹ ಆರ್.ಕೆ. ದಿಗ್ರಾ ತಿಳಿಸಿದ್ದಾರೆ.

ಇಸ್ರೇಲ್ ಕಂಪನಿ ರಫೇಲ್ ಜತೆ ಒಪ್ಪಂದ ಮಾಡಿಕೊಂಡು ರಿಲಯನ್ಸ್ ಭಾರತದಲ್ಲಿ ರಕ್ಷಣಾ ಸಾಮಗ್ರಿ ತಯಾರಿಸಲಿದೆ. ಮೊದಲ ಹಂತದಲ್ಲಿ ರಿಲಯನ್ಸ್ 13 ಸಾವಿರ ಕೋಟಿ ರೂ. ಹೂಡಿಕೆ ಮಾಡಲಿದೆ. ಭಾರತದಲ್ಲಿನ ರಕ್ಷಣಾ ಸಾಮಗ್ರಿ ಉತ್ಪಾದನೆ ಪ್ರಕ್ರಿಯೆಯಲ್ಲಿ ರಿಲಾಯನ್ಸ್್ಸ ಪಾಲು ಶೇ.51 ಹಾಗೂ ರಫೇಲ್ ಪಾಲು ಶೇ. 49 ಆಗಿರಲಿದೆ. ಮಧ್ಯಪ್ರದೇಶದ ಇಂದೋರ್ನಲ್ಲಿರುವ ಧೀರೂಭಾಯ್ ಅಂಬಾನಿ ಲ್ಯಾಂಡ್ ಪಾರ್ಕ್ನಲ್ಲಿ ಘಟಕ ಸ್ಥಾಪಿಸಲು ನಿರ್ಧರಿಸಲಾಗಿದೆ.

ಭದ್ರತಾ ಕ್ಷೇತ್ರಕ್ಕೆ ಅಗತ್ಯವಾಗಿರುವ ಎಲ್ಲ ಉಪಕರಣ ಗಳನ್ನು ತಯಾರಿಸಲು ರಿಲಯನ್ಸ್ ಉದ್ದೇಶಿಸಿದೆ. ಲಘು ಹೆಲಿಕಾಪ್ಟರ್, ಅಣ್ವಸ್ತ್ರ ಸಿಡಿತಲೆಗಳನ್ನು ಹೊತ್ತೊಯ್ಯಬಲ್ಲ ಕ್ಷಿಪಣಿ, ಯುದ್ಧ ಹಡಗಿನಿಂದ ಹಿಡಿದು ವಿಮಾನದವರೆಗೆ ವಿವಿಧ ಯಂತ್ರೋಪ ಕರಣ ತಯಾರಿಸಲು ರಿಲಯನ್ಸ್ ಟೆಂಡರ್ ಸಲ್ಲಿಸಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

Comments are closed.