ರಾಷ್ಟ್ರೀಯ

ಹೆಲ್ಮೆಟ್ ಹಾಕದಿದ್ರೆ ಪೆಟ್ರೋಲ್ ಸಿಗಲ್ಲ..!

Pinterest LinkedIn Tumblr

helಭುವನೇಶ್ವರ್, ಮೇ 29- ಸುಪ್ರೀಂ ಕೋರ್ಟ್ ಆದೇಶದಂತೆ ಈಗಾಗಲೇ ಹಲವು ರಾಜ್ಯಗಳಲ್ಲಿ ದ್ವಿಚಕ್ರ ವಾಹನ ಸವಾರರಿಗೆ, ಹಿಂಬದಿ ಸವಾರರಿಗೆ ಹೆಲ್ಮೆಟ್ ಕಡ್ಡಾಯಗೊಳಿಸಲಾಗಿದೆ. ಆದರೂ, ಹೆಲ್ಮೆಟ್ ಧರಿಸದೆ ಓಡಾಡುವವರೇ ಜಸ್ತಿಯಾಗಿದ್ದಾರೆ. ಹಿಂಬದಿ ಸವಾರರಿರಲಿ, ಬೈಕ್ ಚಾಲನೆ ಮಾಡುವವರು ಕೂಡ ಹೆಲ್ಮೆಟ್ ಧರಿಸುತ್ತಿಲ್ಲ. ಈ ಹಿನ್ನೆಲೆಯಲ್ಲಿ ಹೆಲ್ಮೆಟ್ ಧರಿಸದವರಿಗೆ ಪೆಟ್ರೋಲ್ ಬಂಕ್‌ಗಳಲ್ಲಿ ಪೆಟ್ರೋಲ್ ಹಾಕಬಾರದೆಂದು, ಕೇರಳದಲ್ಲಿ ಪೊಲೀಸರು ಸೂಚನೆ ನೀಡಿದ್ದರು.

ಇದೀಗ ಒಡಿಶಾ ಸರ್ಕಾರ ನೋ ಹೆಲ್ಮೆಟ್ ನೋ ಪೆಟ್ರೋಲ್ ನಿಯಮ ಜರಿಗೆ ಮುಂದಾಗಿದೆ. ದ್ವಿಚಕ್ರವಾಹನ ಸವಾರರು ಹೆಲ್ಮೆಟ್ ಕಡ್ಡಾಯ ಮಾಡಿದ್ದರೂ, ನಿರ್ಲಕ್ಷಿಸುತ್ತಿರುವುದರಿಂದ ಈ ಕ್ರಮ ಕೈಗೊಳ್ಳಲಾಗಿದೆ. ಪೆಟ್ರೋಲ್ ಬಂಕ್‌ಗಳಲ್ಲಿ ಹೆಲ್ಮೆಟ್ ಇಲ್ಲದವರಿಗೆ, ಪೆಟ್ರೋಲ್ ಹಾಕಬಾರದೆಂದು ಒಡಿಶಾ ಸರ್ಕಾರದ ಮುಖ್ಯ ಕಾರ್ಯದರ್ಶಿ ಎ.ಪಿ.ಪಾದಿ ಸೂಚನೆ ನೀಡಿದ್ದು, ಈ ನಿಟ್ಟಿನಲ್ಲಿ ಅಗತ್ಯ ಕ್ರಮ ಕೈಗೊಳ್ಳುವಂತೆ ಪೊಲೀಸರಿಗೆ ತಿಳಿಸಿದ್ದಾರೆ.

ಅಪಘಾತ ತಡೆಗೆ, ರಸ್ತೆ ನಿಯಮ ಪಾಲಿಸುವ ನಿಟ್ಟಿನಲ್ಲಿ ಇಂತಹ ಕ್ರಮ ಅಗತ್ಯ ಎಂದು ಹೇಳಿದ್ದಾರೆ. ಒಡಿಶಾದಲ್ಲಿ ರಸ್ತೆ ಸುರಕ್ಷತೆಗೆ ಹೆಚ್ಚಿನ ಒತ್ತು ನೀಡಿದ್ದು, 5ಕ್ಕಿಂತ ಹೆಚ್ಚು ಬಾರಿ ರಸ್ತೆ ನಿಯಮ ಉಲ್ಲಂಘಿಸಿದ ಪ್ರಕರಣಗಳಲ್ಲಿ 18,000 ಡಿಎಲ್ ರದ್ದುಪಡಿಸಲಾಗಿದೆ.

Comments are closed.