ರಾಷ್ಟ್ರೀಯ

ಆರೆಸ್ಸೆಸ್ ತರಬೇತಿ ಪಡೆದಿದ್ದರಿಂದ ಬರಿಗೈಯಿಂದಲೇ ಕತ್ತು ಮುರಿಯುತ್ತೇವೆ: ಬಿಜೆಪಿ

Pinterest LinkedIn Tumblr

bjpಕೋಲ್ಕತಾ: ತೃಣಮೂಲ ಕಾಂಗ್ರೆಸ್ ಕಾರ್ಯಕರ್ತರಿಗೆ ನೇರ ಬೆದರಿಕೆಯೊಡ್ಡಿರುವ ಪಶ್ಚಿಮ ಬಂಗಾಳದ ಬಿಜೆಪಿ ರಾಜ್ಯಾಧ್ಯಕ್ಷ ದಿಲೀಪ್ ಘೋಷ್, ನಾವು ಆರೆಸ್ಸೆಸ್ ತರಬೇತಿ ಪಡೆದಿದ್ದರಿಂದ ಬರಿಗೈಯಿಂದಲೇ ಕತ್ತು ಮುರಿದು ಹಾಕುವ ಸಾಮರ್ಥ್ಯ ಹೊಂದಿದ್ದೇವೆ ಎಂದು ಗುಡುಗಿದ್ದಾರೆ.

ತೃಣಮೂಲ ಕಾಂಗ್ರೆಸ್ ಕಾರ್ಯಕರ್ತರ ಪ್ರದೇಶಗಳಿಗೆ ಸರಬರಾಜಾಗುವ ನೀರು ಮತ್ತು ವಿದ್ಯುತ್ ಸರಬರಾಜು ತಡೆದು ಚಿತ್ರಹಿಂಸೆ ನೀಡುತ್ತೇವೆ ಎಂದು ಬೆದರಿಕೆಯೊಡ್ಡಿದ್ದಾರೆ.

ಸಾರ್ವಜನಿಕ ಸಭೆಯಲ್ಲಿ ಮಾತನಾಡಿದ ಘೋಷ್, ನಾವು ಆರೆಸ್ಸೆಸ್ ತರಬೇತಿ ಪಡೆದಿದ್ದರಿಂದ ವಿರೋಧಿಗಳನ್ನು ಬರಿಗೈಯಿಂದಲೇ ಕತ್ತು ಮುರಿದು ಹಾಕುವ ತಾಕತ್ತು ಹೊಂದಿದ್ದೇವೆ ಎಂದು ಹೇಳಿದ್ದಾರೆ.

ಪಶ್ಚಿಮ ಬಂಗಾಳ ವಿಧಾನಸಭೆಯಲ್ಲಿ ನಾವು ಕೇವಲ ಮೂರು ಸ್ಥಾನಗಳಲ್ಲಿ ಜಯಗಳಿಸಿದ್ದೇವೆ. ಟಿಎಂಸಿ ಪಕ್ಷವನ್ನು ಎದುರಿಸಲು ಮೂರು ಶಾಸಕರು ಸಾಕು ಎಂದು ಟಿಎಂಸಿ ಪಕ್ಷಕ್ಕೆ ಸವಾಲ್ ಎಸೆದಿದ್ದಾರೆ.

ತೃಣಮೂಲ ಕಾಂಗ್ರೆಸ್ ಪಕ್ಷದ ಅಧಿನಾಯಕಿ ಮಮತಾ ಬ್ಯಾನರ್ಜಿ ಶುಕ್ರವಾರದಂದು ಮುಖ್ಯಮಂತ್ರಿಯಾಗಿ ಸತತ ಎರಡನೇ ಬಾರಿಗೆ ಪ್ರಮಾಣ ವಚನ ಸ್ವೀಕರಿಸಿದ್ದಾರೆ.

Comments are closed.