ಡೆಹ್ರಾಡೂನ್, ಮೇ 29- ಉತ್ತರ್ಖಂಡ್ನಲ್ಲಿ ಸುರಿಯುತ್ತಿದರುವ ಧಾರಾಕಾರ ಮಳೆಯಿಂದಾಗಿ ಕೇದಾರನಾಥ ಅಕ್ಷರಶಃ ನಲುಗಿ ಹೋಗಿದೆ. ಮಳೆಯ ಅಬ್ಬರಕ್ಕೆ 30ಕ್ಕೂ ಮನೆಗಳಿಗೆ ಹಾನಿಯಾಗಿದ್ದು, ಹಲವು ಜನುವಾರುಗಳು ಸಾವನ್ನಪ್ಪಿವೆ. ಕೇದಾರನಾಥ ಹಾಗೂ ಯಮುನೋತ್ರಿಗೆ ತೆರಳುವ ಮಾರ್ಗ ಈಗಾಗಲೇ ಬಂದ್ ಆಗಿದೆ. ರಾಜಧಾನಿ ಡೆಹ್ರಾಡೂನ್ನಲ್ಲಿ ಸಹ ಗುಡುಗು ಸಹಿತ ಮಳೆ ಮುಂದುವರೆದಿದೆ. ಮರಗಳು ವಿದ್ಯುತ್ ತಂತಿಗಳ ಮೇಲೆ ಮುರಿದು ಬಿದ್ದ ಪರಿಣಾಮ ನಗರದಲ್ಲಿ ಕಗ್ಗತ್ತಲು ಆವರಿಸಿದೆ. ಜಹೀರಾತು ಫಲಕಗಳು ಸಹ ರಸ್ತೆಗೆ ಉರುಳಿವೆ. ರಾಷ್ಟ್ರೀಯ ಹೆದ್ದಾರಿಗಳಲ್ಲಿ ಮರಗಳು ಉರುಳಿದ ಪರಿಣಾಮ ಯಾತ್ರಿಕರು ಪರದಾಡಬೇಕಾದ ಸ್ಥಿತಿ ಇದೀಗ ನಿರ್ಮಾಣವಾಗಿದೆ.
ಸಿಯಾಲ್ಕೋಟ್ ಹಾಗೂ ಕುಥಿಯಾನ ನಗರಗಳು ತುರ್ತು ಪರಿಸ್ಥಿತಿ ಎದುರಿಸುತ್ತಿವೆ. ಮುಖ್ಯ ಅಭಿವೃದ್ಧಿ ಅಧಿಕಾರಿ (ಸಿಡಿಒ) ಮಹ್ಮದ್ ಇಕ್ಬಾಲ್ ಪ್ರಕಾರ ಸಿಯಾಲ್ಕೋಟ್ನಲ್ಲಿ 10 ಮನೆಗಳು ಮಳೆಯಿಂದ ಹಾನಿಗೊಳಗಾದರೆ, ಕುಥಿಯಾನಾದಲ್ಲಿ 20 ಮನೆಗಳು ಆಹುತಿಯಾಗಿವೆ ಎಂದು ತಿಳಿಸಿದ್ದಾರೆ. ಗಾಯಗೊಂಡವರಿಗೆ ಸ್ಥಳೀಯ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದ್ದು, ಅಪಾಯದ ಅಂಚಿನಲ್ಲಿರುವವರನ್ನು ಕೇಂದ್ರ ಸ್ಥಳಗಳಿಗೆ ವರ್ಗಾವಣೆ ಮಾಡಲಾಗಿದೆ.
Comments are closed.