ಮನೋರಂಜನೆ

ನನ್ನ ಹೃದಯವನ್ನೇ ಅರ್ಪಿಸಿ ಕೊಹ್ಲಿಯನ್ನು ಪ್ರೀತಿಸುತ್ತೇನೆ: ಪೂನಮ್ ಪಾಂಡೆ

Pinterest LinkedIn Tumblr

Poonam Pandey

ನವದೆಹಲಿ: ಸದಾ ಒಂದಲ್ಲಾ ಒಂದು ವಿಚಿತ್ರ ಹೇಳಿಕೆಗಳನ್ನು ನೀಡಿ ಸುದ್ದಿಯಾಗುತ್ತಲೇ ಇರುವ ರೂಪದರ್ಶಿ ಪೂನಮ್ ಪಾಂಡೆ ಈಗ ಭಾರತ ಟೆಸ್ಟ್ ತಂಡ ಮತ್ತು ಬೆಂಗಳೂರು ರಾಯಲ್ ಚಾಲೆಂಜರ್ಸ್ ನಾಯಕ ವಿರಾಟ್ ಕೊಹ್ಲಿ ಅವರ ಬೆನ್ನುಬಿದ್ದಿದ್ದಾಳೆ. ಈ ಮೂಲಕ ಕ್ರಿಕೆಟ್ ಅಭಿಮಾನಿಗಳ ಗಮನ ಸೆಳೆಯುತ್ತಿದ್ದಾಳೆ.

ಪ್ರಸಕ್ತ ಸಾಲಿನ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯಲ್ಲಿ ಅತ್ಯದ್ಭುತ ಬ್ಯಾಟಿಂಗ್ ಪ್ರದರ್ಶನ ನೀಡುತ್ತಿರುವ ವಿರಾಟ್ ಕೊಹ್ಲಿ ಮೇಲೆ ಈಗ ಪೂನಮ್ ಪಾಂಡೆಗೆ ಎಲ್ಲಿಲ್ಲದ ಪ್ರೀತಿ ಉಕ್ಕಿ ಬಂದಿದೆ. ಕೊಹ್ಲಿಯನ್ನು ಯಾರು ತಾನೆ ಪ್ರೀತಿಸುವುದಿಲ್ಲ ಎಂದು ಪ್ರಶ್ನಿಸಿರುವ ಪೂನಮ್ ಪಾಂಡೆ, ನನ್ನ ಹೃದಯವನ್ನೇ ಅರ್ಪಿಸಿ ಕೊಹ್ಲಿಯನ್ನು ಪ್ರೀತಿಸುವುದಾಗಿ ಹೇಳಿಕೊಂಡಿದ್ದಾರೆ.

ಸುದ್ದಿ ಮಾಧ್ಯಮವೊಂದಕ್ಕೆ ನೀಡಿರುವ ಹೇಳಿಕೆಯಲ್ಲಿ ಹೀಗೆ ಹೇಳಿರುವ ಪೂನಮ್ ಪಾಂಡೆ ಈ ಹಿಂದೆ ಭಾರತ ತಂಡದ ಗೆಲುವಿಗಾಗಿ ನಗ್ನಳಾಗುತ್ತೇನೆಂದು ಹೇಳಿದ್ದನ್ನು ಇಲ್ಲಿ ಸ್ಮರಿಸಬಹುದಾಗಿದೆ.

Comments are closed.