ಮನೋರಂಜನೆ

ವಾರ್ನರ್ ಅಮೋಘ ಬ್ಯಾಟಿಂಗ್‌; ಲಯನ್ಸ್ ನ್ನು ಮಣಿಸಿದ ಸನ್‌ರೈಸರ್ಸ್ ಹೈದರಾಬಾದ್ ಫೈನಲ್‌ಗೆ ಲಗ್ಗೆ

Pinterest LinkedIn Tumblr

david-warner

ನವದೆಹಲಿ: ಡೇವಿಡ್ ವಾರ್ನರ್ ಅಬ್ಬರದ ಬ್ಯಾಟಿಂಗ್ ಬಲದಿಂದ ಸನ್‌ರೈಸರ್ಸ್ ಹೈದರಾಬಾದ್ ತಂಡ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಒಂಬತ್ತನೆ ಆವೃತ್ತಿಯ ಫೈನಲ್‌ಗೆ ಲಗ್ಗೆ ಇಟ್ಟಿತು.

ಶುಕ್ರವಾರ ರಾತ್ರಿ ಸನ್‌ರೈಸರ್ಸ್ ತಂಡವು 4 ವಿಕೆಟ್‌ಗಳಿಂದ ಗುಜರಾತ್ ಲಯನ್ಸ್ ವಿರುದ್ಧ ಗೆದ್ದಿತು. ಭಾನುವಾರ ಬೆಂಗಳೂರಿನಲ್ಲಿ ನಡೆಯಲಿರುವ ಫೈನಲ್‌ ನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗ ಳೂರು ತಂಡವನ್ನು ಎದುರಿಸಲಿದೆ.

ಟಾಸ್ ಗೆದ್ದ ಸನ್‌ರೈಸರ್ಸ್ ತಂಡವು ಫೀಲ್ಡಿಂಗ್ ಆಯ್ಕೆ ಮಾಡಿತು. ಮೊದಲು ಬ್ಯಾಟಿಂಗ್ ಮಾಡಿದ ಲಯನ್ಸ್ ತಂಡವು ಆ್ಯರನ್ ಫಿಂಚ್ (50; 32ಎ, 7ಬೌಂ, 2ಸಿ) ಅರ್ಧಶತಕದ ನೆರವಿನಿಂದ 20 ಓವರ್‌ಗಳಲ್ಲಿ 7 ವಿಕೆಟ್‌ಗಳಿಗೆ 162 ರನ್‌ಗಳನ್ನು ಪೇರಿಸಿತು.

ಡೇವಿಡ್ ವಾರ್ನರ್ (ಔಟಾಗದೆ 93; 58ಎ, 11ಬೌಂ, 3ಸಿ) ಅವರ ಅಮೋಘ ಬ್ಯಾಟಿಂಗ್‌ನಿಂದಾಗಿ ಸನ್‌ ರೈಸರ್ಸ್ ಇನ್ನೂ ನಾಲ್ಕು ಎಸೆತಗಳು ಬಾಕಿ ಯಿರುವಾಗಲೇ ಜಯಿಸಿತು. ತಂಡವು ಇದೇ ಮೊದಲ ಬಾರಿಗೆ ಫೈನಲ್ ಹಂತವನ್ನು ಪ್ರವೇಶಿಸಿದೆ.
ಲೀಗ್‌ ಹಂತದಲ್ಲಿ ಮೂರನೇ ಸ್ಥಾನದಲ್ಲಿದ್ದ ವಾರ್ನರ್‌ ಬಳಗವು ಎಲಿಮಿನೇಟರ್‌ನಲ್ಲಿ ಕೋಲ್ಕತ್ತ ನೈಟ್ ರೈಡರ್ಸ್ ತಂಡವನ್ನು ಸೋಲಿಸಿತ್ತು.

ವಾರ್ನರ್‌ ಛಲದ ಆಟ: ಹೋರಾಟದ ಮೊತ್ತವನ್ನು ಬೆನ್ನತ್ತಿದ್ದ ಹೈದರಾಬಾದ್ ತಂಡವು ಆರಂಭದಲ್ಲಿಯೇ ಆಘಾತ ಅನುಭವಿಸಿತ್ತು. ಎರಡನೇ ಓವರ್‌ನಲ್ಲಿ ಶಿಖರ್ ಧವನ್ ರನ್‌ಔಟ್ ಆದರು. ಐದನೇ ಓವರ್‌ನಲ್ಲಿ ಡ್ವೇನ್ ಸ್ಮಿತ್ ಎಸೆತ ದಲ್ಲಿ ಹೆನ್ರಿಕ್ಸ್ ಕೂಡ ನಿರ್ಗಮಿಸಿದರು.

ಯುವರಾಜ್ ಸಿಂಗ್ (08) , ಡ್ವೆನ್ ಬ್ರಾವೊ (4) ಮತ್ತು ಬೆನ್ ಕಟಿಂಗ್ (08) ಬಹಳ ಹೊತ್ತು ಕ್ರೀಸ್‌ನಲ್ಲಿ ನಿಲ್ಲಲಿಲ್ಲ. ಆದರೆ ಒಂದೆಡೆ ವಿಕೆಟ್‌ಗಳು ಉರುಳುತ್ತಿದ್ದರೂ ಎಡಗೈ ಬ್ಯಾಟ್ಸ್‌ಮನ್ ವಾರ್ನರ್ ಎದೆಗುಂದಲಿಲ್ಲ. ಏಕಾಂಗಿ ಯಾಗಿ ಹೋರಾಟ ಮುಂದುವರಿಸಿದರು.

ಲಯನ್ಸ್ ತಂಡದ ಬೌಲರ್‌ಗಳನ್ನು ದಂಡಿಸಿದರು. ಇದರಿಂದಾಗಿ ರನ್‌ ಗಳಿಕೆಗೆ ತಡೆ ಉಂಟಾಗಲಿಲ್ಲ. ಅವರು ನಮನ್ ಓಜಾ (10 ರನ್) ಜೊತೆಗೂಡಿ ಆರನೇ ವಿಕೆಟ್‌ಗೆ 33 ರನ್ ಸೇರಿಸಿದರು.

16ನೇ ಓವರ್‌ನಲ್ಲಿ ಓಜಾ ಔಟಾದ ನಂತರ ಬಂದ ವಿಪುಲ್ ಶರ್ಮಾ (ಔಟಾಗದೆ 27, 11ಎ, 3ಸಿ) ತಮ್ಮ ನಾಯಕನಿಗೆ ಉತ್ತಮ ಜೊತೆ ನೀಡಿ ದರು. ವಿಕೆಟ್ ಪತನ ತಡೆದರು. ಅಲ್ಲದೆ ಮೂರು ಸಿಕ್ಸರ್‌ಗಳ ಮೂಲಕ ಫಲಿ ತಾಂಶವು ತಮ್ಮ ತಂಡದತ್ತ ಒಲಿಯು ವಂತೆ ಮಾಡಿದರು.

ಪಾಯಿಂಟ್‌ ಪಟ್ಟಿಯಲ್ಲಿ ಅಗ್ರಸ್ಥಾನ ಪಡೆದು ಮೊದಲ ಕ್ವಾಲಿಫೈಯರ್‌ನಲ್ಲಿ ಆರ್‌ಸಿಬಿ ಎದುರು ಸೋತಿದ್ದ ಲಯನ್ಸ್ ತಂಡವು ಸೋಲಿನತ್ತ ವಾಲಿತು. ಈ ಹಂತದಲ್ಲಿ ವಾರ್ನರ್ ಅವರ ಮೇಲೆ ಮತ್ತು ಲಯನ್ಸ್ ಮಧ್ಯಮವೇಗಿ ಪ್ರವೀಣ್‌ಕುಮಾರ್ ಹರಿಹಾಯ್ದ ಘಟ ನೆಯೂ ನಡೆಯಿತು. ಆದರೆ, ಎಲ್ಲದಕ್ಕೂ ಬ್ಯಾಟ್‌ ಮೂಲ ಕವೇ ಉತ್ತರ ಕೊಟ್ಟ ವಾರ್ನರ್ ತಮ್ಮ ತಂಡವನ್ನು ಫೈನಲ್‌ ಹಂತಕ್ಕೆ ತಲುಪಿಸಿದರು.

ಫಿಂಚ್ ಮಿಂಚು: ಸನ್‌ರೈಸರ್ಸ್ ತಂಡದ ಭುವನೇಶ್ವರ ಕುಮಾರ್ ಮತ್ತು ಟ್ರೆಂಟ್ ಬೌಲ್ಟ್ ದಾಳಿಗೆ ಅಲ್ಪಮೊತ್ತಕ್ಕೆ ಕುಸಿಯುವ ಅಪಾಯ ಎದುರಿಸಿತ್ತು. 12 ಓವರ್‌ ಗಳಲ್ಲಿ 83 ರನ್‌ಗಳಿಗೆ 5 ವಿಕೆಟ್‌ಗಳನ್ನು ಕಳೆದುಕೊಂಡಿದ್ದ ತಂಡಕ್ಕೆ ಫಿಂಚ್ ಅರ್ಧ ಶತಕದ ಮೂಲಕ ಬಲ ತುಂಬಿದರು.

ಐದನೇ ಕ್ರಮಾಂಕದಲ್ಲಿ ಬ್ಯಾಟಿಂಗ್‌ಗೆ ಬಂದ ಫಿಂಚ್ ಎದುರಾಳಿ ಬೌಲರ್‌ಗಳ ಬೆವರಿಳಿಸಿದರು. ಅದುವರೆಗೆ ಉತ್ತಮ ಬೌಲಿಂಗ್ ಮಾಡಿದ್ದ ಸನ್‌ರೈಸರ್ಸ್ ತಂಡದ ಬೌಲರ್‌ಗಳ ತಂತ್ರಗಳನ್ನು ವಿಫಲಗೊಳಿಸಿದರು.

ಇನಿಂಗ್ಸ್‌ನ ಮೊದಲ ಓವರ್‌ನಲ್ಲಿಯೇ ಭುವನೇಶ್ವರ್ ಅವರು ಏಕಲವ್ಯ ದ್ವಿವೇದಿ ವಿಕೆಟ್ ಗಳಿಸಿದ್ದರು. ನಾಲ್ಕನೇ ಓವರ್‌ನಲ್ಲಿ ಸುರೇಶ್ ರೈನಾ ಅವರಿಗೆ ಬೌಲ್ಟ್ ಪೆವಿಲಿಯನ್ ದಾರಿ ತೋರಿಸಿದರು.

ಮೂರನೇ ವಿಕೆಟ್‌ಗೆ 44 ರನ್ ಗಳಿಸಿದ್ದ ಬ್ರೆಂಡನ್ ಮೆಕ್ಲಮ್ (32 ರನ್) ಮತ್ತು ದಿನೇಶ್ ಕಾರ್ತಿಕ್ (26 ರನ್) ಅವರ ಜೊತೆಯಾಟವನ್ನು ಟ್ರೆಂಟ್ ಬೌಲ್ಟ್ ಮುರಿದರು. ಈ ಬಾರಿ ಅವರು ಚುರುಕಾದ ಫಿಲ್ಡಿಂಗ್ ಮೂಲಕ ಕಾರ್ತಿಕ್ ಅವರನ್ನು ರನ್‌ಔಟ್ ಮಾಡಿದರು.

12ನೇ ಓವರ್‌ನಲ್ಲಿ ಮೆಕ್ಲಮ್ ಅವರನ್ನು ಬಿಪುಲ್ ಶರ್ಮಾ ಔಟ್ ಮಾಡಿದರು. ಕಳೆದ ಪಂದ್ಯದಲ್ಲಿ ಮಿಂಚಿದ್ದ ಡ್ವೆನ್ ಸ್ಮಿತ್ ಕೇವಲ ಒಂದು ರನ್ ಮಾತ್ರ ಗಳಿಸಿದರು. ಫಿಂಚ್ ಮತ್ತು ರವೀಂದ್ರ ಜಡೇಜ (ಔಟಾಗದೆ 19) ಆರನೇ ವಿಕೆಟ್ ಜೊತೆಯಾಟದಲ್ಲಿ 51 ರನ್ ಸೇರಿಸಿದರು.

ಕಟಿಂಗ್ ಬೌಲಿಂಗ್‌ನಲ್ಲಿ ಫಿಂಚ್ ಔಟಾದ ನಂತರ ಬಂದ ಡ್ವೇನ್ ಬ್ರಾವೊ ಹತ್ತು ಎಸೆತಗಳಲ್ಲಿ 20 ರನ್‌ ಗಳಿಸಿ ತಂಡದ ಮೊತ್ತ ಹೆಚ್ಚಿಸಿದರು. ಅವರನ್ನೂ ಭುವನೇಶ್ವರ್‌ ಕೊನೆಯ ಓವರ್‌ನಲ್ಲಿ ಬೌಲ್ಡ್‌ ಮಾಡಿ ಸಂಭ್ರಮಿಸಿದರು.

ಮುಖ್ಯಾಂಶಗಳು
* ತಲಾ ಎರಡು ವಿಕೆಟ್ ಗಳಿಸಿದ ಭುವನೇಶ್ವರ್, ಬೌಲ್ಟ್
* 11 ಎಸೆತಗಳಲ್ಲಿ ಔಟಾಗದೆ 27ರನ್‌ ಗಳಿಸಿದ ಬಿಪುಲ್‌ ಶರ್ಮಾ

ಸ್ಕೋರ್‌ಕಾರ್ಡ್ಗು
ಜರಾತ್ ಲಯನ್ಸ್ 7 ಕ್ಕೆ 162 (20 ಓವರ್‌ಗಳಲ್ಲಿ)

ಏಕಲವ್ಯ ದ್ವಿವೇದಿ ಸಿ ಟ್ರೆಂಟ್ ಬೌಲ್ಟ್ ಬಿ ಭುವನೇಶ್ವರಕುಮಾರ್ 05
ಬ್ರೆಂಡನ್ ಮೆಕ್ಲಮ್ ಸಿ ಭುವನೇಶ್ವರ್ ಕುಮಾರ್ ಬಿ ಬಿಪುಲ್ ಶರ್ಮಾ 32
ಸುರೇಶ್ ರೈನಾ ಎಲ್‌ಬಿಡಬ್ಲ್ಯು ಬಿ ಟ್ರೆಂಟ್ ಬೌಲ್ಟ್ 01
ದಿನೇಶ್ ಕಾರ್ತಿಕ್ ರನ್‌ಔಟ್ (ಬೌಲ್ಟ್) 26
ಆ್ಯರನ್ ಫಿಂಚ್ ಬಿ ಬೆನ್ ಕಟಿಂಗ್ 50
ಡ್ವೇನ್ ಸ್ಮಿತ್ ಸಿ ಶಿಖರ್ ಧವನ್ ಬಿ ಬೆನ್ ಕಟಿಂಗ್ 01
ರವೀಂದ್ರ ಜಡೇಜ ಔಟಾಗದೆ 19
ಡ್ವೇನ್ ಬ್ರಾವೊ ಬಿ ಭುವನೇಶ್ವರಕುಮಾರ್ 20
ಧವಳ್ ಕುಲಕರ್ಣಿ ಔಟಾಗದೆ 03
ಇತರೆ: (ವೈಡ್ 5) 05
ವಿಕೆಟ್‌ ಪತನ: 1–7 (ದ್ವಿವೇದಿ; 0.6), 2–19 (ರೈನಾ; 3.2), 3–63 (ಕಾರ್ತಿಕ್; 8.5), 4–81 (ಮೆಕ್ಲಮ್; 11.6), 5–83 (ಸ್ಮಿತ್; 12.4), 6–134 (ಫಿಂಚ್; 17.3), 7–158 (ಬ್ರಾವೊ; 19.3)
ಬೌಲಿಂಗ್‌: ಭುವನೇಶ್ವರಕುಮಾರ್ 4–0–27–2 (ವೈಡ್ 2), ಟ್ರೆಂಟ್ ಬೌಲ್ಟ್ 4–0–39–1 (ವೈಡ್ 2), ಬರೀಂದರ್ ಸರಾನ್ 3–0–28–0 (ವೈಡ್ 1), ಬಿಪುಲ್ ಶರ್ಮಾ 3–0–21–1, ಬೆನ್ ಕಟಿಂಗ್ 3–0–20–2, ಮೊಯಿಸೆಸ್ ಹೆನ್ರಿಕ್ಸ್ 3–0–27–0.

ಸನ್‌ರೈಸರ್ಸ್‌ ಹೈದರಾಬಾದ್‌ 6 ಕ್ಕೆ 163 (19.2ಓವರ್‌ಗಳಲ್ಲಿ)

ಡೇವಿಡ್‌ ವಾರ್ನರ್‌ ಔಟಾಗದೆ 93
ಶಿಖರ್‌ ಧವನ್‌ ರನ್‌ ಔಟ್‌ (ಬ್ರೆಂಡನ್‌ ಮೆಕ್ಲಮ್) 00
ಮೊಯಿಸೆಸ್‌ ಹೆನ್ರಿಕ್ಸ್‌ ಸಿ ಏಕಲವ್ಯ ದ್ವಿವೇದಿ ಬಿ ಡ್ವೇನ್‌ ಸ್ಮಿತ್‌ 11
ಯುವರಾಜ್‌ ಸಿಂಗ್‌ ಸಿ ಡ್ವೇನ್‌ ಸ್ಮಿತ್‌ ಬಿ ಶಿವಿಲ್‌ ಕೌಶಿಕ್‌ 08
ದೀಪಕ್‌ ಹೂಡಾ ಎಲ್‌ಬಿಡಬ್ಲ್ಯು ಡ್ವೇನ್‌ ಬ್ರಾವೊ 04
ಬೆನ್‌ ಕಟಿಂಗ್‌ ಸಿ ದಿನೇಶ್‌ ಕಾರ್ತಿಕ್‌ ಬಿ ಶಿವಿಲ್‌ ಕೌಶಿಕ್‌ 08
ನಮನ್‌ ಓಜಾ ಸಿ ರವೀಂದ್ರ ಜಡೇಜ ಬಿ ಡ್ವೇನ್‌ ಬ್ರಾವೊ 10
ಬಿಪುಲ್‌ ಶರ್ಮಾ ಔಟಾಗದೆ 27
ಇತರೆ:(ಲೆಗ್‌ಬೈ 1, ವೈಡ್‌ 1) 02
ವಿಕೆಟ್‌ ಪತನ: 1–6 (ಧವನ್‌; 1.1), 2–33 (ಹೆನ್ರಿಕ್ಸ್‌; 4.1), 3–61 (ಯುವರಾಜ್‌; 8.2), 4–75 (ಹೂಡಾ; 11.1), 5–84 (ಕಟಿಂಗ್‌; 12.3), 6–117 (ಓಜಾ; 15.5).
ಬೌಲಿಂಗ್‌: ಪ್ರವೀಣ್‌ ಕುಮಾರ್‌ 3.2–0–32–0, ಧವಳ್‌ ಕುಲಕರ್ಣಿ 4–0–32–0, ಡ್ವೇನ್‌ ಸ್ಮಿತ್‌ 2–0–29–1, ಸುರೇಶ್‌ ರೈನಾ 2–0–15–0, ಶಿವಿಲ್‌ ಕೌಶಿಕ್‌ 4–0–22–2, ಡ್ವೇನ್‌ ಬ್ರಾವೊ 4–0–32–2.
ಫಲಿತಾಂಶ: ಸನ್‌ರೈಸರ್ಸ್‌ ಹೈದರಾಬಾದ್‌ ತಂಡಕ್ಕೆ 4 ವಿಕೆಟ್‌ ಜಯ.
ಪಂದ್ಯಶ್ರೇಷ್ಠ: ಡೇವಿಡ್‌ ವಾರ್ನರ್.

Comments are closed.